'ಬೆಳ್ಳಿ ಹೆಜ್ಜೆ: 'ಶತಚಿತ್ರ' ನಿರ್ದೇಶಕ ಸಾಯಿಪ್ರಕಾಶ್ ಈ ವಾರದ ಅತಿಥಿ
ಕರ್ನಾಟಕ ಚಲನಚಿತ್ರ ಅಕಾಡೆಮಿ ಆಯೋಜನೆಯ ವಿಶೇಷ ಸಂವಾದ ಕಾರ್ಯಕ್ರಮ 'ಬೆಳ್ಳಿ ಹೆಜ್ಜೆ'ಗೆ ಈ ವಾರ ಕನ್ನಡದ ನೂರು ಸಿನಿಮಾ ಮಾಡಿರುವ ಹೆಗ್ಗಳಿಕೆ ಹೊಂದಿರುವ ಸಾಯಿ ಪ್ರಕಾಶ್ ಅವರು ಅತಿಥಿಯಾಗಿ ಆಗಮಿಸಲಿದ್ದಾರೆ.
ಜುಲೈ 14 ರಂದು ಸಂಜೆ 5 ಗಂಟೆಗೆ ಹಿರಿಯ ನಿರ್ದೇಶಕ ನಿರ್ದೇಶಕ ಸಾಯಿ ಪ್ರಕಾಶ್ ಅವರೊಂದಿಗೆ ವಿಶೇಷ ಸಂವಾದ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಬೆಂಗಳೂರಿನ ಕುಮಾರ ಪಾರ್ಕ್ ರಸ್ತೆಯಲ್ಲಿನ ಗಾಂಧಿ ಭವನದ ಮಹದೇವ ದೇಸಾಯಿ ಸಭಾಂಗಣದಲ್ಲಿ ಜರುಗಲಿದೆ.
ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾದ ನಾಗತಿಹಳ್ಳಿ ಚಂದ್ರಶೇಖರ್ ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಹಿರಿಯ ಸಾಹಿತಿ ದೊಡ್ಡರಂಗೇಗೌಡ, ವಾರ್ತಾ ಇಲಾಖೆಯ ಆಯುಕ್ತ ಹರ್ಷ ಪಿ ಎಸ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಮುಖ್ಯ ಅತಿಥಿಗಳಾಗಿದ್ದಾರೆ.

ಇವರ ಜೊತೆ ಜೆಕೆ ಶ್ರೀನಿವಾಸಮೂರ್ತಿ, ಶಶಿಕುಮಾರ್, ಅನು ಪ್ರಭಾಕರ್, ರಾಮು, ಎನ್.ಎಂ ಸುರೇಶ್, ಮಾಲಾಶ್ರೀ, ಜಗ್ಗೇಶ್, ಜಗದೀಶ್, ಕೆ ಮಂಜು ಸೇರಿದಂತೆ ಮುಂತಾದವರು ಭಾಗವಹಿಸಲಿದ್ದಾರೆ.
ಸಾಯಿ ಪ್ರಕಾಶ್ ಅವರು ಇದುವರೆಗೂ 101 ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದಾರೆ. 1989 ರಲ್ಲಿ 'ಮುತ್ತಿನಂಥ ಮನುಷ್ಯ' ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕರಾದ ಸಾಯಿ ಪ್ರಕಾಶ್ ಸ್ಯಾಂಡಲ್ ವುಡ್ ನ 87 ಸಿನಿಮಾ ಹಾಗೂ ತೆಲುಗಿನ 16 ಸಿನಿಮಾ ಸೇರಿವೆ.

ಮುದ್ದಿನ ಸೊಸೆ, ಹೆತ್ತಕರುಳು, ಹೆತ್ತರೆ ಹಣ್ಣನ್ನೇ ಹರಬೇಕು, ತಾಯಿ ಇಲ್ಲದ ತಬ್ಬಲಿ, ಮನೆಮಗಳು, ಹೆತ್ತವರ ಕನಸು, ದೇವರ ಕೊಟ್ಟ ತಂಗಿ, ತವರಿಗೆ ಬಾ ತಂಗಿ, ಅಣ್ಣ ತಂಗಿ, ಮೊದಲಾದ ಸೂಪರ್ ಹಿಟ್ ಚಿತ್ರಗಳನ್ನ ನಿರ್ದೇಶನ ಮಾಡಿದ್ದು ಇವರೇ. ಇಂತಹ ದಿಗ್ಗಜರ ಬಗ್ಗೆ ಬೆಳ್ಳಿ ಹೆಜ್ಜೆಯಲ್ಲಿ ಸಂವಾದ ಕಾರ್ಯಕ್ರಮ ಆಯೋಜಿಸಿದ್ದು, ಮತ್ತಷ್ಟು ವಿಶೇಷವಾದ ಅಂಶಗಳನ್ನ ತಿಳಿಯುವ ಅವಕಾಶ ಸಿಗಲಿದೆ.


Click it and Unblock the Notifications











