For Quick Alerts
  ALLOW NOTIFICATIONS  
  For Daily Alerts

  ಓ ಮೈ ಗಾಡ್ ಕಿಚ್ಚ ಸುದೀಪ್ ಇನ್ನೊಂದು ರೀಮೇಕ್

  By ಉದಯರವಿ
  |

  ನಟ ಕಿಚ್ಚ ಸುದೀಪ್ ಅವರ ಮುಂದಿನ ಚಿತ್ರದ ಬಗ್ಗೆ ಸಾಕಷ್ಟು ಕುತೂಹಲಗಳಿದ್ದವು. ಈಗ ಅವೆಲ್ಲಕ್ಕೂ ತೆರೆಎಳೆಯುವ ಸಮಯ ಬಂದಿದೆ. ಭಿನ್ನತೆಗೆ ಹಾತೊರೆಯುತ್ತಿರುವ ಕಿಚ್ಚ ಸುದೀಪ್ ಅವರಿಗೆ ಹೇಳಿಮಾಡಿಸಿದಂತಹ ಪಾತ್ರ ಇದು. ಬಾಲಿವುಡ್ ನ ಓ ಮೈ ಗಾಡ್ ಚಿತ್ರವನ್ನು ಕನ್ನಡಕ್ಕೆ ತರಲಾಗುತ್ತಿದೆ.

  ಅಕ್ಷಯ್ ಕುಮಾರ್, ಪರೇಶ್ ರಾವಲ್, ಮಿಥುನ್ ಚಕ್ರವರ್ತಿ ಮುಖ್ಯಭೂಮಿಕೆಯಲ್ಲಿದ್ದ 'ಓ ಮೈ ಗಾಡ್' ಚಿತ್ರ ಬಾಕ್ಸ್ ಆಫೀಸ್ ಉಡ್ಡೀಸ್ ಮಾಡಿತ್ತು. ಉಮೇಶ್ ಶುಕ್ಲ ಆಕ್ಷನ್ ಕಟ್ ಹೇಳಿರುವ ಈ ಚಿತ್ರವನ್ನು ರು.16 ಕೋಟಿ ಬಜೆಟ್ ನಲ್ಲಿ ನಿರ್ಮಿಸಲಾಗಿದ್ದು ರು.105 ಕೋಟಿ ಕಲೆಕ್ಷನ್ ಮಾಡಿ ಓ ಮೈ ಗಾಡ್ ಎಂಬಂತೆ ಮಾಡಿತ್ತು.

  ಈ ಇದೇ ಚಿತ್ರದ ರೀಮೇಕ್ ರೈಟ್ಸನ್ನು ದ್ವಾರಕೀಶ್ ಅವರ ಪುತ್ರ ಯೋಗೀಶ್ ಕನ್ನಡಕ್ಕೆ ತಂದಿದ್ದಾರೆ. ಸುದೀಪ್ ಅವರ ಮ್ಯಾನೇಜರ್ ಆಗಿ ಅವರ ಸಂಭಾವನೆ, ಡೇಟ್ಸ್ ಹೊಂದಾಣಿಕೆ ಮಾಡುವುದರಲ್ಲೇ ಬಿಜಿಯಾಗಿದ್ದರು. 'ಓನ್ಲಿ ವಿಷ್ಣುವರ್ಧನ' ಚಿತ್ರದ ಎರಡು ವರ್ಷಗಳ ಬಳಿಕ ಈಗ ಮತ್ತೆ ಭಾರಿ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ.

  ದೇವರು ಇದ್ದಾನೋ ಇಲ್ಲವೋ ಎಂಬ ಬಗ್ಗೆ ಈ ಚಿತ್ರ ಹಾಸ್ಯಮಯ ರೀತಿಯಲ್ಲಿ ಸಾಗುತ್ತದೆ. ಮೂಲ ಚಿತ್ರದಲ್ಲಿ ದೇವರಾಗಿ ಅಕ್ಕಿ ಹಾಗೂ ಪರೇಶ್ ರಾವಲ್ ದೇವರ ಅಸ್ತಿತ್ವವನ್ನು ಪ್ರಶ್ನಿಸುವ ಪಾತ್ರ ಮಾಡಿದ್ದರು. ಕನ್ನಡದಲ್ಲಿ ಅಕ್ಕಿ ಸ್ಥಾನವನ್ನು ಸುದೀಪ್ ತುಂಬಲಿದ್ದು ಪರೇಶ್ ಜಾಗಕ್ಕೆ ರಂಗಾಯಣ ರಘು ಅಥವಾ ರವಿಶಂಕರ್ ಅವರನ್ನು ಕರೆತರುವ ಬಗ್ಗೆ ಮಾತುಕತೆ ನಡೆಯುತ್ತಿದೆ.

  ಜನವರಿಯಲ್ಲಿ ಚಿತ್ರ ಸೆಟ್ಟೇರುತ್ತಿದ್ದು ಪಿ.ಕುಮಾರ್ ಆಕ್ಷನ್ ಕಟ್ ಹೇಳಲಿದ್ದಾರೆ. 'ಓನ್ಲಿ ವಿಷ್ಣುವರ್ಧನ' ಚಿತ್ರವನ್ನು ನಿರ್ದೇಶಿಸಿದ್ದರು. ಹಿಂದಿ ಚಿತ್ರದಲ್ಲಿ ನಿಧಿ ಸುಬ್ಬಯ್ಯ ಅವರು ಟಿವಿ ನಿರೂಪಕಿಯಾಗಿ ಕಾಣಿಸಿಕೊಂಡಿದ್ದರು. ಕನ್ನಡದಲ್ಲೂ ಅಭಿನಯಿಸುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ಕನ್ನಡ ಚಿತ್ರಕ್ಕೆ ಶೀರ್ಷಿಕೆ ಇನ್ನೂ ಪಕ್ಕಾ ಆಗಿಲ್ಲ. ಅಂದಹಾಗೆ ಓ ಮೈ ಗಾಡ್ ಚಿತ್ರ ಆಸ್ಟ್ರೇಲಿಯಾದ The Man Who Sued God ಚಿತ್ರದ ಪಡಿಯಚ್ಚು.

  English summary
  Bollywood super hit satirical comedy-drama film OMG – Oh My God, features Akshay Kumar and Paresh Rawal in the lead roles, along with Mithun Chakraborty in pivotal role to be remade into Kannada. Kichcha Sudeep will play a lead role while producing Dwarakish son Yogesh

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X