ಲಂಡನ್‌ನಲ್ಲಿ ಅರೆಕಾಲಿಕ ಶಾಲಾ ಶಿಕ್ಷಕಿಯಾಗಿ ಕೆಲಸ ಮಾಡುತ್ತಿರುವ ದೊಡ್ಮನೆ ಸೊಸೆ ಶ್ರೀದೇವಿ ಭೈರಪ್ಪ..!
ಪ್ರೀತಿಯಲ್ಲಿ ಬೀಳುವುದಕ್ಕಿಂತ ಪ್ರೀತಿಯನ್ನೇ ಊರುಗೋಲಾಗಿ ಹಿಡಿದು ಮೇಲೇಳಬೇಕು. ಪ್ರೀತಿ ಯಾರಲ್ಲಿ, ಯಾವಾಗ ಎಲ್ಲಿ ಹುಟ್ಟುತ್ತದೆ ಎಂದು ಹೇಳುವುದು ಕಷ್ಟ. ಆದರೆ ಪ್ರೀತಿ ಹುಟ್ಟಿದ ಮೇಲೆ ಅದನ್ನು ಕಾಪಾಡಿಕೊಂಡು ಹೋಗಬೇಕು. ಆದರೆ .. ಇದು ಬಣ್ಣದ ಲೋಕ. ಇಲ್ಲಿ.. ಪ್ರೀತಿ ಮೊಳಕೆಯೊಡೆದಷ್ಟೇ ವೇಗವಾಗಿ ಉಸಿರುಗಟ್ಟಿ ಸತ್ತು ಹೋಗುತ್ತದೆ. ಇದಕ್ಕೆ ಯುವರಾಜ್ ಕುಮಾರ್ ಮತ್ತು ಶ್ರೀದೇವಿ ಭೈರಪ್ಪ ಅವರ ಪ್ರೇಮ ಕಥೆ ಮತ್ತೊಂದು ಉದಾಹರಣೆ.
ಹೌದು, ಅಖಂಡ 07 ವರ್ಷ ಪ್ರೀತಿಸಿ, 04 ವರ್ಷ ದಾಂಪತ್ಯ ಜೀವನವನ್ನು ನಡೆಸಿದ ಯುವರಾಜ್ ಕುಮಾರ್ ಮತ್ತು ಶ್ರೀದೇವಿ ಸದ್ಯಕ್ಕೆ ದೂರವಾಗಿದ್ದಾರೆ. ಯುವ ಈ ಕಡೆ ಹೀರೋ ಆಗಿ ನೆಲೆಯೂರಲು ಕಸರತ್ತು ಮಾಡುತ್ತಿದ್ದರೆ, ಆ ಕಡೆ ಶ್ರೀದೇವಿ ಭೈರಪ್ಪ ಸಪ್ತಸಾಗರದಾಚೆ ವಿದ್ಯಾಭ್ಯಾಸದಲ್ಲಿ ಮುಳುಗಿ ಹೋಗಿದ್ದಾರೆ. ಒಂದರ್ಥದಲ್ಲಿ ಒಬ್ಬರನ್ನೊಬ್ಬರು ಮರೆಯುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಇದರ ನಡುವೆ ಕಳೆದೊಂದು ವರ್ಷದ ತಮ್ಮ ಬದುಕಿನ ಕಷ್ಟದ ದಿನಗಳಿಗೆ ಶ್ರೀದೇವಿ ಅಕ್ಷರದ ರೂಪ ಕೊಟ್ಟಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣದಲ್ಲಿ ಕೆಲವೊಂದು ಸಾಲುಗಳನ್ನು ಬರೆದುಕೊಂಡಿದ್ದಾರೆ.

ಈ ಕುರಿತು ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿರುವ ಶ್ರೀದೇವಿ ಕಳೆದೊಂದು ವರ್ಷದಿಂದ ನಾನು ಮಾನಸಿಕವಾಗಿ ನೊಂದು ಬೆಂದಿದ್ದೇನೆ. ನನ್ನ ಬದುಕಿನಲ್ಲಿ ಏನಾಗುತ್ತಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಲು ನಾನು ಹೋರಾಡಿದೆ ಎಂದಿದ್ದಾರೆ. ಮುಂದುವರೆದು ಅನೇಕ ಬಾರಿ ಎಲ್ಲ ಸಾಕೆಂದು ಅನಸಿದ್ದು ಇದೆ ಎಂದಿರುವ ಶ್ರೀದೇವಿ ಇಂತಹ ಕಷ್ಟಕರವಾದ ಸಮಯದಲ್ಲಿ ನನ್ನ ಕುಟುಂಬ, ನನ್ನ ಸ್ನೇಹಿತರು, ನನ್ನ ಹಿತೈಷಿಗಳು, ನನ್ನ ಮಾರ್ಗದರ್ಶಕರು ನನ್ನ ಜೊತೆ ನಿಂತರು. ನನ್ನನ್ನೂ ಮಾತನಾಡಿಸಿದರು, ನಗಿಸಿದರು, ಸರಿಯಾದ ಸಮಯಕ್ಕೆ ಸಲಹೆಯನ್ನು ನೀಡಿದರು ಎಂದಿದ್ದಾರೆ. ಈ ರೀತಿಯ ಬೆಂಬಲದಿಂದ ನಾನು ಕೃತಜ್ಞಳಾಗಿದ್ದೇನೆ ಎಂದಿದ್ದಾರೆ.
ಇದೇ ಸಮಯದಲ್ಲಿ ಲಂಡನ್ ಸಂಸ್ಥೆಯಲ್ಲಿ ಕೆಲವು ವಿಚಾರಗಳ ಕುರಿತು ಸಂಶೋಧನಾ ಅಧ್ಯಯನ ಮಾಡುತ್ತಿರುವುದಾಗಿ ಕೂಡ ಹೇಳಿರುವ ಶ್ರೀದೇವಿ, ಅರೆಕಾಲಿಕ ಶಾಲಾ ಶಿಕ್ಷಕಿಯಾಗಿ ಕೆಲಸ ಮಾಡುತ್ತಿರುವುದಾಗಿ ಹೇಳಿದ್ದಾರೆ. ನನಗೆ ತುಂಬಾ ಇಷ್ಟವಾದ ಕೆಲಸ ಇದು ಮಕ್ಕಳಿಂದ ನಾನು ತುಂಬಾ ಕಲಿತಿದ್ದೇನೆ ಎಂದು ಕೂಡ ಹೇಳಿದ್ದಾರೆ. ನಾನು 16 ವರ್ಷದವಳಾಗಿದ್ದಾಗ ಹೆತ್ತವರು ನನ್ನ ಹೇಗೆ ರಕ್ಷಿಸುತ್ತಿದ್ದರೋ ಹಾಗೇ ಈಗಲೂ ರಕ್ಷಣೆ ಮಾಡುತ್ತಿದ್ದಾರೆ ಎಂದು ಹೇಳಿರುವ ಶ್ರೀದೇವಿ ನಾನು ಈ ಕ್ಷಣಗಳನ್ನಿ ಜೀವಿಸುತ್ತಿದ್ದೇನೆ ಎಂದು ಹೇಳಿದ್ದಾರೆ.
ಸದ್ಯಕ್ಕೆ ಶ್ರೀದೇವಿ ಅವರ ಈ ಬರಹಕ್ಕೆ ಹಲವಾರು ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಶ್ರೀದೇವಿ ಅವರಿಗೆ ಬೆಂಬಲವನ್ನೂ ಸೂಚಿಸಿ ಅನೇಕರು ಧೈರ್ಯವನ್ನು ತುಂಬುತ್ತಿದ್ದಾರೆ. ಅಂದ್ಹಾಗೇ ಶ್ರೀದೇವಿಯವರ ಮೂಲ ಮೈಸೂರು. ಆದರೂ.. ಯುವರಾಜ್ ಕುಮಾರ್, ಗುರುರಾಜ್ ಕುಮಾರ್ ಆಗಿದ್ದ ಆ ಕಾಲದಲ್ಲಿ... ಶ್ರೀದೇವಿ ಯುವ ಅವರನ್ನ ನೆರಳಿನಂತೆಯೇ ಹಿಂಬಾಲಿಸಿದ್ದರು. ಹುಟ್ಟಿದಾಗಿನಿಂದ ಸಿನಿಮಾ ವಾತಾವರಣದಲ್ಲೇ ಬೆಳೆದ ಯುವರಾಜ್ ಕುಮಾರ್, ತಾವು ನಾಯಕನಾಗುವ ಮುನ್ನ ಸಹೋದರ ವಿನಯ್ ರಾಜ್ ಕುಮಾರ್ ಅವರ ಸಿನಿಮಾಗಳ ವಿಚಾರದಲ್ಲೂ ಸಾಕಷ್ಟು ಮುತುವರ್ಜಿ ವಹಿಸಿಸುತ್ತಿದ್ದರು. ಮೇಲ್ವಿಚಾರಣೆಯನ್ನೂ ನಡೆಸುತ್ತಿದ್ದರು. ಆಗೆಲ್ಲ ಯುವರಾಜ್ ಕುಮಾರ್ ಅವರಿಗೆ ಜೊತೆಯಾಗುತ್ತಿದ್ದು ಇದೇ ಶ್ರೀದೇವಿ ಭೈರಪ್ಪ.
ಇನ್ನೂ ಏಪ್ರಿಲ್ 24-2017ರಲ್ಲಿ ಬಡವರಿಗೆ ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ಎಂದೇ 'ಡಾ.ರಾಜ್ ಕುಮಾರ್ ಸಿವಿಲ್ ಸರ್ವೀಸ್ ಅಕಾಡೆಮಿ'ಯನ್ನ ಆರಂಭ ಮಾಡಲು ಯುವರಾಜ್ ಕುಮಾರ್ ಅಣಿಯಾದಾಗ ಕೂಡ ಶ್ರೀದೇವಿ ಭೈರಪ್ಪ ಮುಂದಾಳತ್ವ ವಹಿಸಿಕೊಂಡಿದ್ದರು. 'ಡಾ.ರಾಜ್ ಕುಮಾರ್ ಸಿವಿಲ್ ಸರ್ವೀಸ್ ಅಕಾಡೆಮಿ'ಯ ಉಸ್ತುವಾರಿಯನ್ನೂ ಕೂಡ ಶ್ರೀದೇವಿ ವಹಿಸಿಕೊಂಡಿದ್ದರು. ಇವೆಲ್ಲ ಕಾರಣಕ್ಕೆ ಯುವರಾಜ್ ಕುಮಾರ್ ಮತ್ತು ಶ್ರೀದೇವಿಯವರನ್ನ ಜೊತೆಯಲ್ಲಿ ನೋಡಿದ್ದ ಅನೇಕರು ಇಬ್ಬರದ್ದು ಹೇಳಿ ಮಾಡಿಸಿದ ಜೋಡಿ ಎನ್ನುವ ಅಭಿಪ್ರಾಯವನ್ನ ವ್ಯಕ್ತಪಡಿಸುತ್ತಿದ್ದರು. ದೊಡ್ಮನೆಗೆ ತಕ್ಕ ಸೊಸೆ ಎಂದು ದೊಡ್ಮನೆ ಅಭಿಮಾನಿಗಳು ಕೂಡ ಹೆಮ್ಮೆಯಿಂದ ಹೇಳುತ್ತಿದ್ದರು. ಆದರೆ.. ಅವತ್ತುಇಷ್ಟ ಪಟ್ಟು ಮದುವೆಯಾದವರು ಇವತ್ತು ಒಬ್ಬರ ಮುಖವನ್ನೊಬ್ಬರು ನೋಡಲು ಕಷ್ಟ ಪಡುತ್ತಿದ್ದಾರೆ ಎನ್ನುವುದು ದುರ್ದೈವ.


Click it and Unblock the Notifications











