ವೀರ ಯೋಧ ಹನುಮಂತಪ್ಪರ ಆತ್ಮಕ್ಕೆ ಶಾಂತಿ ಕೋರಿದ ಚಿತ್ರರಂಗದ ತಾರೆಯರು
ಸಿಯಾಚಿನ್ ನ ನಿರ್ಗಲ್ಲಿನಲ್ಲಿ ಸಿಲುಕಿದ್ದ ಕರ್ನಾಟಕ ಮೂಲದ ಯೋಧ ಹನುಮಂತಪ್ಪ ಕೊಪ್ಪದ್ ಅವರು ಹುತಾತ್ಮರಾಗಿದ್ದಾರೆ. ಪವಾಡ ರೀತಿಯಲ್ಲಿ ಪತ್ತೆಯಾಗಿದ್ದ ಹನುಮಂತಪ್ಪ ಅವರು ಬಹು ಅಂಗಾಂಗ ವೈಫಲ್ಯದಿಂದ ಬಳಲಿ ಗುರುವಾರ ಬೆಳಗ್ಗೆ 11.45ಕ್ಕೆ ಇಹಲೋಕ ತ್ಯಜಿಸಿದ್ದಾರೆ. ಹನುಮಂತಪ್ಪ ಅವರ ನಿಧನಕ್ಕೆ ಟ್ವಿಟ್ಟರ್ ನಲ್ಲಿ ಇಡೀ ಚಿತ್ರರಂಗದ ತಾರೆಯರು ಕಂಬನಿಗರೆದಿದ್ದಾರೆ.
ಫೆಬ್ರವರಿ 03ರಂದು ಸಂಭವಿಸಿದ ಭಾರೀ ಹಿಮಪಾತದಲ್ಲಿ ಹನುಮಂತಪ್ಪ ಕೊಪ್ಪದ್ ಸೇರಿದಂತೆ 10ಮಂದಿ ಯೋಧ ಸಿಲುಕಿದ್ದರು. ಈ ಪೈಕಿ 9 ಜನ ಈ ಮೊದಲೇ ಹುತಾತ್ಮರಾಗಿದ್ದರು. ಬದುಕುಳಿದಿದ್ದ ಹನುಮಂತಪ್ಪ ಅವರು ದೇಶದ ಪಾಲಿಗೆ ಉಳಿಯಲಿಲ್ಲ.[ಹುತಾತ್ಮರಾದ ವೀರ ಯೋಧ ಲಾನ್ಸ್ ನಾಯಕ್ ಹನುಮಂತಪ್ಪ]
ಹನುಮಂತಪ್ಪ ಕೊಪ್ಪದ ಅವರನ್ನು ಬದುಕಿಸಲು ಏಮ್ಸ್ ಆಸ್ಪತ್ರೆಯ ತಜ್ಞ ವೈದ್ಯರು, ಮೂತ್ರಕೋಶ ತಜ್ಞರು ಆಸ್ಪತ್ರೆಯಲ್ಲಿ ಸತತ ಪ್ರಯತ್ನ ನಡೆಸಿದ್ದರು. ಆದರೆ, ಹನುಮಂತಪ್ಪ ಅವರ ಒಂದೊಂದೇ ಅಂಗಗಳು ಕಾರ್ಯ ನಿರ್ವಹಿಸುವುದನ್ನು ನಿಲ್ಲಿಸುತ್ತ ಬಂದಿದ್ದವು.
ವಿಧಿಯ ಅಟ್ಟಹಾಸಕ್ಕೆ ಬಲಿಯಾದ ಭಾರತದ ಹೆಮ್ಮೆಯ ಪುತ್ರ ಹನುಮಂತಪ್ಪ ಅವರ ನಿಧನ ವಾರ್ತೆ ಕೇಳಿದ ಚಿತ್ರರಂಗದ ಖ್ಯಾತ ತಾರೆಯರು ಟ್ವಿಟ್ಟರ್ ಮೂಲಕ ಅಂತಿಮ ನಮನ ಸಲ್ಲಿಸಿದ್ದಾರೆ. ಟ್ವೀಟ್ ಗಳ ಸಂಗ್ರಹ ಕೆಳಗಿನ ಸ್ಲೈಡ್ಸ್ ಗಳಲ್ಲಿದೆ ಕ್ಲಿಕ್ ಮಾಡಿ..

ಟ್ವಿಟ್ಟರ್ ಮೂಲಕ ಅಂತಿಮ ನಮನ
ಸಿಯಾಚಿನ್ ಪ್ರದೇಶದಲ್ಲಿ ಉಂಟಾದ ಹಿಮಪಾತದಲ್ಲಿ ಮದ್ರಾಸ್ ರೆಜಿಮೆಂಟ್ ಗೆ ಸೇರಿದ ದೇಶದ ಹೆಮ್ಮೆಯ 10 ಯೋಧರು ಪ್ರಾಣಾರ್ಪಣೆ ಮಾಡಿದ್ದಾರೆ. ಈ ಪೈಕಿ ಮೂವರು ಕನ್ನಡಿಗ ಯೋಧರುಗಳಿದ್ದರು. ಹುತಾತ್ಮರಾದ ದೇಶಭಕ್ತ ಯೋಧರಿಗೆ ಇಡೀ ಚಿತ್ರರಂಗದ ತಾರೆಯರು ಟ್ವಿಟ್ಟರ್ ಮೂಲಕ ಅಂತಿಮ ನಮನ ಸಲ್ಲಿಸಿದ್ದಾರೆ.[ಹುತಾತ್ಮ ಹನುಮಂತಪ್ಪ ನಿಧನಕ್ಕೆ ಭಾರತೀಯರಿಂದ ಕಂಬನಿಧಾರೆ]
ಬಾಲಿವುಡ್ ನಟ ಕಮ್ ನಿರ್ಮಾಪಕ ರಿಷಿ ಕಪೂರ್
ಬಾಲಿವುಡ್ ನ ಖ್ಯಾತ ನಟ ಕಮ್ ನಿರ್ಮಾಪಕ ರಿಷಿ ಕಪೂರ್ ಅವರು ವೀರ ಯೋಧ ಹನುಮಂತಪ್ಪ ಕೊಪ್ಪದ ಅವರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.
ಖ್ಯಾತ ಗಾಯಕಿ ಲತಾ ಮಂಗೇಷ್ಕರ್
ಭಾರತ ಮಾತೆಯ ಹೆಮ್ಮೆಯ ಪುತ್ರ ಹನುಮಂತಪ್ಪ ಕೊಪ್ಪದ ಅವರಿಗೆ ನನ್ನ ಭಾವಪೂರ್ಣ ಶ್ರದ್ಧಾಂಜಲಿ ಎಂದು ಖ್ಯಾತ ಗಾಯಕಿ ಲತಾ ಮಂಗೇಷ್ಕರ್ ಅವರು ಟ್ವಿಟ್ಟರ್ ನಲ್ಲಿ ವೀರ ಯೋಧನ ಆತ್ಮಕ್ಕೆ ಶಾಂತಿ ಕೋರಿದ್ದಾರೆ.
ಕನ್ನಡ ನಟ ಜಗ್ಗೇಶ್
ಕನ್ನಡದ ನವರಸ ನಾಯಕ ಜಗ್ಗೇಶ್ ಅವರು 'ವೀರ ಯೋಧ ಹನುಮಂತ ಆತ್ಮಕ್ಕೆ ಶಾಂತಿ ಸಿಗಲಿ 'RIP' ಎಂದು ಯೋಧನ ಆತ್ಮಕ್ಕೆ ಶಾಂತಿ ಕೋರಿದ್ದಾರೆ
ಬಾಲಿವುಡ್ ನಟಿ ಅನುಷ್ಕಾ ಶರ್ಮಾ
ಉಸಿರು ಇರೋವರೆಗೂ ಜೀವದ ಹಂಗು ತೊರೆದು ಹೋರಾಡಿ ವೀರ ಮರಣವನ್ನಪ್ಪಿದ ಹೆಮ್ಮೆಯ ಯೋಧನಿಗೆ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರು ಟ್ವಿಟ್ಟರ್ ಮೂಲಕ ಆತ್ಮಕ್ಕೆ ಶಾಂತಿ ಕೋರಿದ್ದಾರೆ.
ಬಾಲಿವುಡ್ ನಟ ಫರಾನ್ ಅಖ್ತರ್
ವೀರ ಮರಣವನ್ನಪ್ಪಿದ ಯೋಧ ಹನುಮಂತಪ್ಪ ಕೊಪ್ಪದ ಅವರ ಆತ್ಮಕ್ಕೆ ಶಾಂತಿ ಕೋರಿದ ಬಾಲಿವುಡ್ ನಟ ಫರಾನ್ ಅಖ್ತರ್
ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಲೋತ್ರಾ
ಯೋಧನ ನಿಧನ ವಾರ್ತೆ ಕೇಳಿದ ಬಾಲಿವುಡ್ ನಟ ಸಿದ್ದಾರ್ಥ್ ಮಲ್ಲೋತ್ರಾ ಅವರು ಟ್ವಿಟ್ಟರ್ ಮೂಲಕ ಭಾರತದ ಹೆಮ್ಮೆಯ ಪುತ್ರನ ಆತ್ಮಕ್ಕೆ ಶಾಂತಿ ಕೋರಿದ್ದಾರೆ.
ಗಾಯಕ ಸೋನು ನಿಗಮ್
ಹನುಮಂತಪ್ಪ ಅವರ ನಿಧನ ವಾರ್ತೆ ತುಂಬಾ ದುಃಖಕರ ಸಂಗತಿ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಖ್ಯಾತ ಗಾಯಕ ಸೋನು ನಿಗಮ್ ಅವರು ಚಿರನಿದ್ರೆಗೆ ಜಾರಿದ ವೀರ ಯೋಧನ ಆತ್ಮಕ್ಕೆ ಶಾಂತಿ ಕೋರಿದ್ದಾರೆ.


Click it and Unblock the Notifications











