»   » ‘ಓ ನನ್ನ ನಲ್ಲೆ ’: ರಾಜ್ಯಾದ್ಯಂತ 47 ಚಿತ್ರಮಂದಿರಗಳಲ್ಲಿ ತೆರೆಗೆ

‘ಓ ನನ್ನ ನಲ್ಲೆ ’: ರಾಜ್ಯಾದ್ಯಂತ 47 ಚಿತ್ರಮಂದಿರಗಳಲ್ಲಿ ತೆರೆಗೆ

Posted By: Super
Subscribe to Filmibeat Kannada

'ಕಲಾವಿದ " ಚಿತ್ರದ ನಂತರ ರವಿಚಂದ್ರನ್‌ ನಿರ್ದೇಶಿಸಿರುವ 'ಓ ನನ್ನ ನಲ್ಲೆ " ನವೆಂಬರ್‌ 10ರ ಶುಕ್ರವಾರ ತೆರೆಕಂಡಿದೆ. 'ಇಂದು ನಮ್ಮ ಚಿತ್ರದ ಬಿಡುಗಡೆ, ಇಂದೇ ಆಗಲಿ ರಾಜ್‌ಕುಮಾರ್‌ ಬಿಡುಗಡೆ, ಅಂದೇ ಕನ್ನಡ ಚಿತ್ರರಂಗದ ಮುನ್ನಡೆ " ಎಂಬ ಶೀರ್ಷಿಕೆಯಾಡನೆ ಭಾರಿ ಅಬ್ಬರದ ಜಾಹೀರಾತುಗಳೊಂದಿಗೆ ಚಿತ್ರ ಬೆಂಗಳೂರಿನ 16 ಚಿತ್ರಮಂದಿರಗಳಲ್ಲಿ ತೆರೆಕಂಡಿದೆ.

ಬೆಂಗಳೂರಿನ ಕಪಾಲಿ, ಪ್ರಸನ್ನ (ದಿನ 4 ಆಟ) ನವರಂಗ್‌, ಸಂಪಿಗೆ, ಗೋವರ್ಧನ್‌, ನಂದ, ನಳಂದಾ, ವೆಂಕಟೇಶ್ವರ, ಸಿದ್ದೇಶ್ವರ, ಬಾಲಾಜಿ, ಮೋಹನ್‌, ಆದರ್ಶ (ದಿನ ಮೂರು ಆಟಗಳು) , ಕಾವೇರಿ, ಉಮಾ, ಈಶ್ವರಿ, ಅಜಂತಾ (ಬೆಳಗಿನ ಆಟ) ಗಳಲ್ಲಿ ತೆರೆಕಂಡಿರುವ ಚಿತ್ರ ತುಮಕೂರಿನ ಗಾಯತ್ರಿ, ಶ್ರೀರಾಜ್‌, ಕೋಲಾರದ ಪಲ್ಲವಿ, ದೊಡ್ಡ ಬಳ್ಳಾಪುರದ ಲಕ್ಷ್ಮೀ, ಮೈಸೂರಿನ ಸಂಗಮ್‌, ಶಾಂತಲಾ, ಸರಸ್ವತಿ, ಮಂಡ್ಯದ ಗುರುಶ್ರೀ, ಹುಬ್ಬಳ್ಳಿಯ ಶ್ರೀಪದ್ಮಾ, ಅಪ್ಸರಾ, ಧಾರವಾಡದ ಶ್ರೀಪದ್ಮಾ, ಗೋಕಾಕ್‌ನ ಶ್ರೀಲಕ್ಷ್ಮೀ, ಬೆಳಗಾವಿಯ ಚಿತ್ರಾ, ನರ್ತಕಿ, ಬಿಜಾಪುರದ ಶ್ರೀಲಕ್ಮೀ, ಬಾಗಲಕೋಟೆಯ ಶ್ರೀಕೃಷ್ಣ, ರಾಣೆಬೆನ್ನೂರಿನ ಶ್ರೀ ಶಿವಶಕ್ತಿ, ದಾವಣಗೆರೆಯ ಪುಷ್ಪಾಂಜಲಿ, ವಸಂತ, ಚಿತ್ರದುರ್ಗದ ಬಸವೇಶ್ವರ, ಹೊಸಪೇಟೆಯ ಶ್ರೀ ಗುರು ಸಚ್ಚಿದಾನಂದ, ಸರಸ್ವತಿ, ಹರಿಹರದ ಶ್ರೀಕಾಂತ್‌, ಮಂಗಳೂರಿನ ಜ್ಯೋತಿ, ಶಿವಮೊಗ್ಗದ ಮಲ್ಲಿಕಾರ್ಜುನ, ಎಚ್‌.ಪಿ.ಸಿ, ಚಿಕ್ಕಮಗಳೂರಿನ ನಾಗಲಕ್ಷ್ಮೀ, ಭದ್ರಾವತಿಯ ವೆಂಕಟೇಶ್ವರ, ಗಂಗಾವತಿಯ ಕನಕದುರ್ಗ, ಬೀದರ್‌ನ ದೀಪಕ್‌ ಹಾಗೂ ಗದಗ್‌ ಕರ್ನಾಟಕ ಚಿತ್ರ ಮಂದಿರಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಿದೆ.

ಡಿಟಿಎಸ್‌ ಶಬ್ದ ವೈಶಿಷ್ಟ್ಯ : ಡಿಟಿಎಸ್‌ ಶಬ್ದ ತಂತ್ರವನ್ನು ಅಳವಡಿಸಿಕೊಂಡಿರುವ ಈ ಚಿತ್ರ ರವಿಚಂದ್ರನ್‌ ಸ್ಟುಡಿಯೋದಲ್ಲಿ ತಯಾರಾದ ಪ್ರಥಮ ಚಿತ್ರ. ಸೂಪರ್‌ಗುಡ್‌ ಫಿಲಂಸ್‌ನ ಆರ್‌.ಬಿ. ಚೌದರಿ ಅವರು ಬೆಂಗಳೂರಿನ ಕುಪ್ಪುಸ್ವಾಮಿ ಅವರೊಂದಿಗೆ ಸೇರಿ ನಿರ್ಮಿಸಿರುವ ಈ ಚಿತ್ರ ತಮಿಳಿನಲ್ಲಿ ತಯಾರಾದ 'ತುಳ್ಳಾದ ಮನಮುಂ ತುಳ್ಳುಂ " ಚಿತ್ರದ ಕನ್ನಡ ಅವತರಣಿಕೆ.

ಚಿತ್ರದ ಹೆಸರೇ ಸಾರಿ ಸಾರಿ ಹೇಳುತ್ತಿರುವಂತೆ ಇದೊಂದು ಪ್ರೇಮ ಕಥೆಯನ್ನಾಧರಿಸಿದ ಚಿತ್ರ. ಚಿತ್ರದಲ್ಲಿ ಯುವ ಪ್ರೇಮಿಗಳಾಗಿ ಪ್ರೇಮಲೋಕ ಖ್ಯಾತಿಯ ರವಿಚಂದ್ರನ್‌ ಮತ್ತು ಆಮದು ತಾರೆ ಇಷಾ ಕೊಪ್ಪಿಕರ್‌ ಅಭಿನಯಿಸಿದ್ದಾರೆ. ಬಿ.ವಿ. ರಾಧಾ, ಶಾಂತಮ್ಮ, ಶ್ರೀನಿವಾಸ ಮೂರ್ತಿ, ಉದಯ್‌ ಜಾದೂಗಾರ್‌, ಮಂಡ್ಯ ರಮೇಶ್‌ ಚಿತ್ರದ ಸಹ ಕಲಾವಿದರು.

ಆಲ್‌ ಇನ್‌ ಆಲ್‌ ರವಿಚಂದ್ರನ್‌ ಈ ಚಿತ್ರಕ್ಕೆ ಚಿತ್ರಕತೆ, ಸಂಭಾಷಣೆ, ಗೀತರಚನೆ, ರಾಗ ಸಂಯೋಜನೆ ಹಾಗೂ ನಿರ್ದೇಶನ ನೀಡಿ ನಾಯಕನಾಗಿಯೂ ನಟಿಸಿದ್ದಾರೆ. ಸೀತಾರಾಂ ಛಾಯಾಗ್ರಹಣ ಈ ಚಿತ್ರಕ್ಕಿದೆ.

English summary
Another tamil film redone to kannada

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada