For Quick Alerts
  ALLOW NOTIFICATIONS  
  For Daily Alerts

  ರಮ್ಯಾ ಮಾಡಿದ ಆ ಒಂದು ತಪ್ಪಿನಿಂದ ರಾಹುಲ್ ಗಾಂಧಿ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದರು

  By ಫಿಲ್ಮೀ ಬಿಟ್ ಡೆಸ್ಕ್
  |

  ನಟಿ ರಮ್ಯಾ ಸದ್ಯ ಸಿನಿಮಾ ಮತ್ತು ರಾಜಕೀಯ ಎರಡರಿಂದನೂ ದೂರ ಸರಿದಿದ್ದಾರೆ. ರಮ್ಯಾ ಸಾರ್ವಜನಿಕವಾಗಿ ಕಾಣಿಸಿಕೊಳ್ಳದೆ ವರ್ಷದ ಮೇಲಾಗಿದೆ. ಎಲ್ಲಿದ್ದಾರೆ, ಏನ್ಮಾಡುತ್ತಿದ್ದಾರೆ ಎನ್ನುವ ಮಾಹಿತಿಯನ್ನು ಎಲ್ಲೂ ರಿವೀಲ್ ಮಾಡಿಲ್ಲ. ಒಂದಿಷ್ಟು ದಿನಗಳು ಸಾಮಾಜಿಕ ಜಾಲತಾಣದಿಂದನೂ ರಮ್ಯಾ ಕಣ್ಮರೆಯಾಗಿದ್ದರು.

  ಇದೀಗ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಸಕ್ರೀಯರಾಗಿರುವ ರಮ್ಯಾ ಅನೇಕ ವಿಚಾರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಸಿನಿಮಾ ಅಥವಾ ರಾಜಕೀಯದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ. ಇದೀಗ ರಮ್ಯಾ, ರಾಹುಲ್ ಗಾಂಧಿ ವಿಚಾರವಾಗಿ ಮಾಡಿದ್ದ ದೊಡ್ಡ ತೊಪ್ಪೊಂದನ್ನು ಬಹಿರಂಗ ಪಡಿಸಿದ್ದಾರೆ. ಅದೇ ತಪ್ಪಿನಿಂದ ರಾಜಿನಾಮೆ ಕೂಡ ನೀಡಿರುವುದಾಗಿ ಹೇಳಿದ್ದಾರೆ.

  'ಇಂದಿನ ರಾಜಕೀಯ ಪ್ರಾಮಾಣಿಕರನ್ನು ಪ್ರೋತ್ಸಾಹಿಸುತ್ತಿಲ್ಲ' ಎಂದ ರಮ್ಯಾ'ಇಂದಿನ ರಾಜಕೀಯ ಪ್ರಾಮಾಣಿಕರನ್ನು ಪ್ರೋತ್ಸಾಹಿಸುತ್ತಿಲ್ಲ' ಎಂದ ರಮ್ಯಾ

  ರಮ್ಯಾ ಮಾಡಿದ ಆ ಒಂದು ತಪ್ಪಿನಿಂದ ರಾಹುಲ್ ಗಾಂಧಿ ಜಗತ್ತಿನ ಎದುರು ಸಿಕ್ಕಾಪಟ್ಟೆ ಟ್ರೋಲ್ ಆಗುವಂತೆ ಮಾಡಿತ್ತು, ಇದರಿಂದ ತಾನು ತುಂಬಾ ಕಣ್ಣೀರಾಗಿದ್ದೆ ಎಂದು ಹೇಳಿದ್ದಾರೆ. ಅಷ್ಟಕ್ಕೂ ರಮ್ಯಾ ಮಾಡಿದ ತಪ್ಪಾದರೂ ಏನು? ಈ ಬಗ್ಗೆ ಮೋಹಕ ತಾರೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

  "ಕೆಲವು ವರ್ಷಗಳ ಹಿಂದೆ ಅಂದಿನ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ನ ಕೆಲವು ಮಾಜಿ ಸಂಸದರು ಜರ್ಮನಿ ಪ್ರವಾಸಕ್ಕೆ ತೆರಳಿದ್ದರು. ಪ್ಲಾನ್ ಪ್ರಕಾರ ಮೊದಲು ಬರ್ಲಿನ್ ನ ಮ್ಯೂಸಿಯಂಗೆ ತೆರಳಿದೆವು. ಅಲ್ಲಿ ಜರ್ಮನ್ ರಾಜಕಾರಣಿಗಳು ನಮಗೆ ಅವರ ಇತಿಹಾಸ ಮತ್ತು ಸಂಸ್ಕೃತಿ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಮಾಹಿತಿ ಹಂಚಿಕೊಂಡರು.ಆಗ ನಾನು ರಾಹುಲ್ ಗಾಂಧಿ ಅವರ ಕೆಲವು ಫೋಟೋಗಳನ್ನು ಕ್ಲಿಕ್ ಮಾಡಿ, ಅವುಗಳನ್ನು ನಮ್ಮ ಭಾರದಲ್ಲಿರುವ ನಮ್ಮ ಟೀಂಗೆ ಕಳುಹಿಸಿದೆ"

  ಲೈಟ್ ಬಾಯ್ ಆಗಿ ಬಂದು ಚಾಲೆಂಜ್ ಹಾಕುವ ಮಟ್ಟಕ್ಕೆ ಬೆಳೆದ ಚಾಲೆಂಜಿಂಗ್ ಸ್ಟಾರ್ ಕಥೆ | Filmibeat Kannada

  "ಆದರೆ ಆ ಫೋಟೋಗಳು ಬೇಡದ ಕಾರಣಕ್ಕೆ ವೈರಲ್ ಆಗಿಬಿಟ್ಟವು. ಆ ಫೋಟೋಗಳನ್ನು ಇಟ್ಟುಕೊಂಡು ರಾಹುಲ್ ಗಾಂಧಿ ಅವರನ್ನು ಟೀಕಿಸಲಾಯಿತು. ಆ ತಪ್ಪಿಗೆ ಕ್ಷಮೆ ಇಲ್ಲ. ನಂತರ ನಾನು ಅವರ ಬಳಿ ಹೋಗಿ ಕ್ಷಮೆ ಕೇಳಿದೆ. ರಾಜಿನಾಮೆ ನೀಡಿದೆ. ಆದರೆ ನನ್ನ ರಾಜಿನಾಮೆಯನ್ನು ಸ್ವೀಕರಿಸಲಿಲ್ಲ. ಆದರೆ ಅವರು ನಗುತ್ತ ಪರವಾಗಿಲ್ಲ, ಮುಂದಿನ ಬಾರಿ ಪೋಸ್ಟ್ ಮಾಡುವಾಗ ಹುಷಾರಾಗಿರಿ ಎಂದರು. ನನ್ನ ಕಣ್ಣಲ್ಲಿ ನೀರು ಬಂತು" ಎಂದು ತನ್ನ ತಪ್ಪನ್ನು ಬಹಿರಂಗ ಪಡಿಸುವ ಜೊತೆಗೆ ರಾಹುಲ್ ಗಾಂಧಿ ಗುಣದ ಬಗ್ಗೆ ಬರೆದುಕೊಂಡಿದ್ದಾರೆ.

  English summary
  Once Rahul Gandhi was Trolled after 1 mistake by Actress Ramya.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X