'ಒಂದಲ್ಲಾ ಎರಡಲ್ಲಾ' ಹಾಡುಗಳು ಬಂದೆ ಬಿಟ್ಟಿತಲ್ಲ

By Naveen

'ಒಂದಲ್ಲಾ ಎರಡಲ್ಲಾ' ಸಿನಿಮಾ ಈಗಾಗಲೇ ಟ್ರೇಲರ್ ಮೂಲಕ ಗಮನ ಸೆಳೆದಿದೆ. ನಿನ್ನೆ ಸಿನಿಮಾದ ಹಾಡುಗಳು ಕೂಡ ರಿಲೀಸ್ ಆಗಿದೆ. ಒಂದಕ್ಕಿಂತ ಒಂದು ಹಾಡು ಹೊಸತನದಿಂದ ಕೂಡಿದೆ.

ಚಿತ್ರದಲ್ಲಿ ಒಟ್ಟು ನಾಲ್ಕು ಹಾಡುಗಳು ಇವೆ. ಅದರಲ್ಲಿ ಒಂದು ಹಾಡು ಚಿತ್ರದ ಇಡೀ ಆಶಯವನ್ನು ಹೇಳಲಿದ್ದು, ಆ ಹಾಡು ಟೈಟಲ್ ಕಾರ್ಡ್ ನಲ್ಲಿ ಬರಲಿದೆ. ಉಳಿದ ಮೂರು ಹಾಡುಗಳು ಸಂದರ್ಭಕ್ಕೆ ತಕ್ಕ ಹಾಗೆ ಇದ್ದು, ಮೂರು ಹಾಡನ್ನು ವಾಸುಕಿ ವೈಭವ್ ಹಾಡಿದ್ದಾರೆ. ಈ ಮೂರು ಹಾಡುಗಳು ಕಥೆಯನ್ನು ಹೇಳುವ ಶೈಲಿಯಲ್ಲಿದೆ.

ondalla eradalla kannada movie songs released

'ರಾಮ ರಾಮ ರೇ' ಚಿತ್ರದ ನಂತರ ಮತ್ತೆ ಸತ್ಯ ಪ್ರಕಾಶ್ ಒಳ್ಳೆಯ ಹಾಡುಗಳನ್ನು ಕೇಳುಗರಿಗೆ ನೀಡಿದ್ದಾರೆ. ವಾಸುಕಿ ವೈಭವ್ ಹಾಗೂ ನವೀದ್ ಪೌಲ್ ಸಂಗೀತ ಚಿತ್ರಕ್ಕಿದೆ. ಎಲ್ಲ ಹಾಡುಗಳನ್ನು ನಿರ್ದೇಶಕ ಸತ್ಯ ಪ್ರಕಾಶ್ ಅವರೇ ಬರೆದಿದ್ದಾರೆ.

ondalla eradalla kannada movie songs released

ಇನ್ನು ಚಿತ್ರದಲ್ಲಿ ಸಮೀರ ಎಂಬ ಹುಡುಗನ ಪಾತ್ರ ಪ್ರಮುಖವಾಗಿದೆ. ಏಳರಿಂದ ಎಂಟು ವರ್ಷದ ಹುಡುಗನ ಪಾತ್ರ ಇದಾಗಿದೆ. ಈ ಪಾತ್ರಕ್ಕೆ ರೋಹಿತ್ ಎಂಬ ಪಾಂಡವಪುರದ ಹುಡುಗ ಆಯ್ಕೆ ಆಗಿದ್ದಾನೆ. ಈ ಪಾತ್ರಕ್ಕಾಗಿ ಕರ್ನಾಟಕ ತುಂಬ ಆಡಿಷನ್ ನಡೆಸಿದ್ದು, ಮೈಸೂರು ನಲ್ಲಿ ಈ ಹುಡುಗ ಆಯ್ಕೆ ಆಗಿದ್ದಾನೆ. ವಿಶೇಷ ಅಂದರೆ, 1500 ಮಕ್ಕಳು ಈ ಪಾತ್ರಕ್ಕೆ ಆಡಿಷನ್ ನೀಡಿದ್ದು, ಕೊನೆಯ ಹುಡುಗನಾಗಿ ಬಂದ ರೋಹಿತ್ ಪಾತ್ರಕ್ಕೆ ಆಯ್ಕೆ ಆಗಿದ್ದಾನೆ.

'ಒಂದಲ್ಲಾ ಎರಡಲ್ಲಾ' ಸಿನಿಮಾ ಸಮೀರ ಎಂಬ ಚಿಕ್ಕ ಹುಡುಗ ಸುತ್ತ ಸುತ್ತುತ್ತದೆ. ಸತ್ಯ ಪ್ರಕಾಶ್ ಹೇಳುವ ಹಾಗೆ ಈ ಸಿನಿಮಾ ಮುಗ್ಧ ಮನಸಿರುವವರಿಗೆ ಇಷ್ಟ ಆಗುತ್ತದೆ ಅಥವಾ ಸಿನಿಮಾ ನೋಡಿದ ಮೇಲೆ ಎಲ್ಲರೂ ಮುಗ್ಧರಾಗುತ್ತಾರೆ.

More from Filmibeat

English summary
Director D.Sathya Prakash's 'Ondalla Eradalla' kannada movie songs released
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X