'ಒಂದಲ್ಲ ಎರಡಲ್ಲ' ಸಿನಿಮಾದ ರಿಲೀಸ್ ಡೇಟ್ ಫಿಕ್ಸ್
'ಒಂದಲ್ಲ ಎರಡಲ್ಲ' ಸಿನಿಮಾ ಈಗಾಗಲೇ ತನ್ನ ವಿಭಿನ್ನ ಹಾಡುಗಳು ಹಾಗೂ ಟ್ರೇಲರ್ ಮೂಲಕ ಗಮನ ಸೆಳೆದಿದೆ. ಟ್ರೇಲರ್ ನಲ್ಲಿ ಬರುವ ಸಮೀರ ಎಲ್ಲರಲ್ಲಿ ಕುತುಹಲ ಹುಟ್ಟಿಸಿದ್ದಾನೆ. ಈ ಸಿನಿಮಾದ ಬಿಡುಗಡೆಯ ದಿನಾಂಕ ಇದೀಗ ನಿಗದಿಯಾಗಿದೆ. 'ಒಂದಲ್ಲ ಎರಡಲ್ಲ' ಸಿನಿಮಾ ಆಗಸ್ಟ್ 24 ರಂದು ರಾಜ್ಯಾದಂತ್ಯ ರಿಲೀಸ್ ಆಗಲಿದೆ.
ಈ ಹಿಂದೆ 'ರಾಮಾ ರಾಮಾ ರೇ' ಸಿನಿಮಾ ಮಾಡಿದ್ದ ನಿರ್ದೇಶಕ ಡಿ.ಸತ್ಯ ಪ್ರಕಾಶ್ ಮತ್ತೊಂದು ವಿಭಿನ್ನ ಸಿನಿಮಾ ಮೂಲಕ ಮಾತನಾಡುತ್ತಿದ್ದಾರೆ. ಈ ಸಿನಿಮಾ ಕೂಡ ಹಿಟ್ ಆಗುವ ಸಾಧ್ಯತೆ ಎದ್ದು ಕಾಣುತ್ತಿದೆ. ಬರೀ 37 ದಿನಗಳಲ್ಲಿ ಈ ಚಿತ್ರದ ಶೂಟಿಂಗ್ ಮುಗಿಸಿರುವುದು ಮತ್ತೊಂದು ವಿಶೇಷ.

ಈ ವಿಭಿನ್ನ ಸಿನಿಮಾವನ್ನು ಚಿತ್ರತಂಡ ತಮ್ಮದೆ ವಿಭಿನ್ನ ರೀತಿಯಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಇನ್ನು ವಾಸುಕಿ ವೈಭವ್ ಹಾಗೂ ನವೀದ್ ಪೌಲ್ ಸಂಗೀತ ಚಿತ್ರಕ್ಕಿದೆ. ಎಲ್ಲ ಹಾಡುಗಳನ್ನು ನಿರ್ದೇಶಕ ಸತ್ಯ ಪ್ರಕಾಶ್ ಅವರೇ ಬರೆದಿದ್ದಾರೆ.
'ಒಂದಲ್ಲಾ ಎರಡಲ್ಲಾ' ಸಿನಿಮಾ ಸಮೀರ ಎಂಬ ಚಿಕ್ಕ ಹುಡುಗ ಸುತ್ತ ಸುತ್ತುತ್ತದೆ. ಸತ್ಯ ಪ್ರಕಾಶ್ ಹೇಳುವ ಹಾಗೆ ಈ ಸಿನಿಮಾ ಮುಗ್ಧ ಮನಸಿರುವವರಿಗೆ ಇಷ್ಟ ಆಗುತ್ತದೆ ಅಥವಾ ಸಿನಿಮಾ ನೋಡಿದ ಮೇಲೆ ಎಲ್ಲರೂ ಮುಗ್ಧರಾಗುತ್ತಾರೆ.
ಇನ್ನು ಚಿತ್ರದಲ್ಲಿ ಸಮೀರ ಎಂಬ ಹುಡುಗನ ಪಾತ್ರ ಪ್ರಮುಖವಾಗಿದೆ. ಏಳರಿಂದ ಎಂಟು ವರ್ಷದ ಹುಡುಗನ ಪಾತ್ರ ಇದಾಗಿದೆ. ಈ ಪಾತ್ರಕ್ಕೆ ರೋಹಿತ್ ಎಂಬ ಪಾಂಡವಪುರದ ಹುಡುಗ ಆಯ್ಕೆ ಆಗಿದ್ದಾನೆ. ವಿಶೇಷ ಅಂದರೆ, 1500 ಮಕ್ಕಳು ಈ ಪಾತ್ರಕ್ಕೆ ಆಡಿಷನ್ ನೀಡಿದ್ದು, ಕೊನೆಯ ಹುಡುಗನಾಗಿ ಬಂದ ರೋಹಿತ್ ಪಾತ್ರಕ್ಕೆ ಆಯ್ಕೆ ಆಗಿದ್ದಾನೆ.


Click it and Unblock the Notifications