ಮುಂಬೈ ವಿಮರ್ಶಕರಿಂದ ಪ್ರಶಸ್ತಿ ಪಡೆದ 'ಒಂದಲ್ಲಾ ಎರಡಲ್ಲಾ' ಚಿತ್ರ

ಜನರ ಮನಸ್ಸು ಗೆದಿದ್ದ 'ಒಂದಲ್ಲಾ ಎರಡಲ್ಲಾ' ಸಿನಿಮಾ ಈಗ ಪ್ರಶಸ್ತಿಯವನ್ನು ಪಡೆದಿದೆ. ಮುಂಬೈನಲ್ಲಿ ನಡೆದ ಕ್ರಿಟಿಕ್ಸ್ ಚಾಯ್ಸ್ ಫಿಲ್ಮ್ ಅವಾರ್ಡ್ ಕಾರ್ಯಕ್ರಮದಲ್ಲಿ ಅತ್ಯುತ್ತಮ ಸಿನಿಮಾ ಪ್ರಶಸ್ತಿಯನ್ನು 'ಒಂದಲ್ಲಾ ಎರಡಲ್ಲಾ' ಚಿತ್ರ ಪಡೆದಿದೆ.

ಕ್ರಿಟಿಕ್ಸ್ ಚಾಯ್ಸ್ ಫಿಲ್ಮ್ ಅವಾರ್ಡ್ ಪ್ರಶಸ್ತಿಯನ್ನು ಈವರೆಗೆ ಕಿರು ಚಿತ್ರಗಳಿಗೆ ನೀಡಲಾಗುತ್ತಿತ್ತು. ಇದೇ ಮೊದಲ ಬಾರಿಗೆ ಸಿನಿಮಾಗಳಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು, ಮೊದಲ ಬಾರಿಯೇ 'ಒಂದಲ್ಲಾ ಎರಡಲ್ಲಾ' ಚಿತ್ರ ಪ್ರಶಸ್ತಿ ಗೆದ್ದಿದೆ.

ಮುಂಬೈನ ಪತ್ರಕರ್ತರು, ಸಿನಿಮಾ ವಿಮರ್ಶಕರು ಕ್ರಿಟಿಕ್ಸ್ ಚಾಯ್ಸ್ ಫಿಲ್ಮ್ ಅವಾರ್ಡ್ ಪ್ರಶಸ್ತಿಯನ್ನು ನೀಡುತ್ತಿದ್ದರೆ. ಈ ವರ್ಷದಿಂದ ಈ ಪ್ರಶಸ್ತಿ ಮೂಲಕ ಭಾರತದ ಬೆಸ್ಟ್ ಸಿನಿಮಾವನ್ನು ಆಯ್ಕೆ ಮಾಡಲಾಗುತ್ತಿದೆ.

ondalla eradalla movie got best movie award in mumbai critics choice awards 2019

ಈ ವರ್ಷ ಕನ್ನಡ, ತಮಿಳು, ತೆಲುಗು, ಮರಾಠಿ, ಹಿಂದಿ, ಮಲೆಯಾಳಂ ಹೀಗೆ ಭಾರತದ ಪ್ರಮುಖ ಭಾಷೆಯ ಸಿನಿಮಾಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದವು. ಕನ್ನಡದಿಂದ 'ಒಂದಲ್ಲಾ ಎರಡಲ್ಲಾ', 'ನಾತಿಚರಾಮಿ' ಮತ್ತು 'ಅಮ್ಮಚ್ಚಿಯೆಂಬ ನೆನಪುಗಳು' ಚಿತ್ರ ಆಯ್ಕೆಯಾಗಿದ್ದವು.

ondalla eradalla movie got best movie award in mumbai critics choice awards 2019

ಈ ಮೂರು ಸಿನಿಮಾಗಳ ಪೈಕಿ 'ಒಂದಲ್ಲಾ ಎರಡಲ್ಲಾ' ಚಿತ್ರ ಪ್ರಶಸ್ತಿ ಪಡೆದುಕೊಂಡಿದೆ. ಪ್ರಶಸ್ತಿ ಪಡೆದ ಸಂತಸವನ್ನು ನಿರ್ದೇಶಕ ಸತ್ಯ ಪ್ರಕಾಶ್ ಫಿಲ್ಮಿಬೀಟ್ ಕನ್ನಡದ ಜೊತೆಗೆ ಹಂಚಿಕೊಂಡಿದ್ದಾರೆ. ಸಿನಿಮಾದಲ್ಲಿ ಸೌಹಾರ್ದತೆ ಬಗ್ಗೆ ತೋರಿಸಿದ್ದು, ಯಾರಿಗೂ ನೋವಾಗದೆ ಇರುವ ರೀತಿ ವಿಷಯ ಹೇಳಿರುವುದು ವಿಮರ್ಶಕರಿಗೆ ಬಹಳ ಮೆಚ್ಚುಗೆಯಾಗಿದೆಯಂತೆ.

More from Filmibeat

English summary
'Ondalla Eradalla' movie got best movie award in mumbai critics choice award 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X