'ರಾಮಾ ರಾಮಾ ರೇ' ನಿರ್ದೇಶಕನ 'ಒಂದಲ್ಲಾ ಎರಡಲ್ಲಾ' ಪೋಸ್ಟರ್ ರಿಲೀಸ್

By Bharath Kumar

'ರಾಮಾ ರಾಮಾ ರೇ' ಚಿತ್ರದ ನಿರ್ದೇಶಕ ಡಿ ಸತ್ಯ ಪ್ರಕಾಶ್ ಮತ್ತು 'ಹೆಬ್ಬುಲಿ' ಖ್ಯಾತಿಯ ನಿರ್ಮಾಪಕ ಉಮಾಪತಿ ಗೌಡ ಒಟ್ಟಿಗೆ ಸೇರಿ 'ಒಂದಲ್ಲಾ ಎರಡಲ್ಲಾ' ಎಂಬ ಹೊಸ ಚಿತ್ರವನ್ನ ನಿರ್ಮಾಣ ಮಾಡುತ್ತಿರುವುದು ಗೊತ್ತಿರುವ ಸಂಗತಿ.

ಈ ಚಿತ್ರದ ಚಿತ್ರೀಕರಣ ಈಗ ಬಹುತೇಕ ಪೂರ್ಣಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ತೊಡಗಿಕೊಂಡಿರುವ ಚಿತ್ರತಂಡ ಸದ್ಯದಲ್ಲೇ ತೆರೆ ಮೇಲೆ ಬರಲು ಸಜ್ಜಾಗುತ್ತಿದೆ. ಈ ಮಧ್ಯೆ ಒಂದಲ್ಲಾ ಎರಡಲ್ಲಾ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ತುಂಬಾ ವಿಶೇಷವಾಗಿದೆ.

ondalla Eradalla movie shooting complete

ಶ್ರೀಮತಿ ಸ್ಮಿತಾ ಉಮಾಪತಿ ಅವರು ತಮ್ಮ ಡಿ.ಎನ್.ಸಿನಿಮಾಸ್ ನಿರ್ಮಾಣ ಸಂಸ್ಥೆಯ ಮೂಲಕ ಈ ಚಿತ್ರವನ್ನ ನಿರ್ಮಾಣ ಮಾಡಿದ್ದಾರೆ. 'ರಾಮಾ ರಾಮಾ ರೇ' ಚಿತ್ರದಲ್ಲಿ ಕೆಲಸ ಮಾಡಿದ್ದು, ಬಹುತೇಕ ಅದೇ ತಂಗತ್ರಜ್ಞರು ಇಲ್ಲಿಯೂ ಕೆಲಸ ಮಾಡಿದ್ದಾರೆ.

ಲಲಿತ್ ಅವರು ಛಾಯಾಗ್ರಹಣ ಈ ಚಿತ್ರಕ್ಕಿದೆ. ವಾಸುಕಿ ವೈಭವ್ ಮತ್ತು ನಾಬಿನ್ ಪಾಲ್ ಅವರ ಸಂಗೀತವನ್ನ ಚಿತ್ರ ಒಳಗೊಂಡಿದೆ. ಈ ಚಿತ್ರದಲ್ಲಿ ಹಲವು ರಂಗಭೂಮಿ ಕಲಾವಿದರು ಬಣ್ಣ ಹಚ್ಚಿದ್ದು, ಮಾಸ್ಟರ್ ರೋಹಿತ್ ಪಾಂಡವಪುರ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಇವರ ಜೊತೆಗೆ ಎಂ.ಕೆ ಮಠ, ಸಾಯಿಕೃಷ್ಣ ಕುಡ್ಲ, ನಾಗಭೂಷಣ್ ಕಾಣಿಸಿಕೊಂಡಿದ್ದಾರೆ.

ondalla Eradalla movie shooting complete

ಮಂಗಳೂರಿನಲ್ಲಿ ಚಿತ್ರದ ಬಹುತೇಕ ಚಿತ್ರೀಕರಣ ಮಾಡಲಾಗಿದೆ. ನಿರ್ದೇಶಕ ಸತ್ಯ ಪ್ರಕಾಶ್ ಅವರು ಹೇಳುವ ಪ್ರಕಾರ ಈ ಚಿತ್ರವೂ ''ಮುಗ್ದ ಮನಸ್ಸಿನವರಿಗೆ ಇಷ್ಟವಾಗುತ್ತದೆ ಅಥವಾ ಈ ಚಿತ್ರ ನೋಡಿದಮೇಲೆ ಮುಗದ ಮನಸ್ಸಿನವರಾಗುತ್ತಾರೆ' ಎನ್ನುತ್ತಾರೆ.

More from Filmibeat

English summary
Rama Rama Re director's 'ondalla Eradalla' film has completed it’s shooting process and are in their final stage of postproduction and the team is preparing to release the film in theaters very soon.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X