ರೊಮ್ಯಾಂಟಿಕ್ ಮೂಡ್‌ನಲ್ಲಿ 'ಡೆವಿಲ್'; 'ಒಂದೇ ಒಂದು ಸಲ' ಹಾಡು ಬರೆದಿದ್ದು ಹಾಡಿದ್ದು ಯಾರು?

ನಟ ದರ್ಶನ್ ಜೈಲಿನಲ್ಲಿ ಸಂಕಷ್ಟ ಎದುರಿಸುತ್ತಿದ್ದಾರೆ. ಇತ್ತ 'ಡೆವಿಲ್' ಸಿನಿಮಾ ಕೆಲಸಗಳು ಭರದಿಂದ ಸಾಗಿದೆ. ಬೇರೆ ವಿಧಿಯಿಲ್ಲ, ಸಿನಿಮಾ ಬಿಡುಗಡೆ ಮಾಡಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಹಾಗಾಗಿ ಪ್ರಚಾರ ಆರಂಭಿಸಿದೆ ಚಿತ್ರತಂಡ. 'ಇದ್ರೇ ನೆಮ್ದಿಯಾಗ್ ಇರ್ಬೇಕ್' ಸಾಂಗ್ ಬಳಿಕ ಮತ್ತೊಂದು ಸಾಂಗ್ ಬಿಡುಗಡೆಗೆ ಸಜ್ಜಾಗುತ್ತಿದೆ.

ವಿಜಯದಶಮಿ ಹಿನ್ನೆಲೆಯಲ್ಲಿ 'ಡೆವಿಲ್' ಚಿತ್ರದ ಸೆಕೆಂಡ್ ಸಾಂಗ್ ಲಿರಿಕಲ್ ವೀಡಿಯೋ ಬಿಡುಗಡೆ ಸಮಯ ಘೋಷಣೆಯಾಗಿದೆ. ಅಕ್ಟೋಬರ್ 10ರಂದು ಸಂಜೆ 6 ಗಂಟೆಗೆ ಸಾಂಗ್ ಬರುವುದಾಗಿ ಚಿತ್ರತಂಡ ಘೋಷಿಸಿದೆ. 'ಒಂದೇ ಒಂದು ಸಲ' ಎಂದು ಶುರುವಾಗುವ ಹಾಡಿನಲ್ಲಿ ದರ್ಶನ್ ಹಾಗೂ ನಾಯಕಿ ರಚನಾ ರೈ ಸಿಕ್ಕಾಪಟ್ಟೆ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿರುವುದು ಗೊತ್ತಾಗುತ್ತಿದೆ.

Onde Ondu Sala song Second single from Darshan s Devil to release on this date

ಸಂತು ಮಾಸ್ಟರ್ ಕೊರಿಯೋಗ್ರಫಿಯಲ್ಲಿ 'ಒಂದೇ ಒಂದು ಸಲ' ಸಾಂಗ್ ಮೂಡಿ ಬರಲಿದೆ. ಪ್ರಮೋದ್ ಮರವಂತೆ ಸಾಹಿತ್ಯ ಬರೆದಿದ್ದಾರೆ ಎನ್ನಲಾಗ್ತಿದೆ. 'ಕಾಂತಾರ' ಚಿತ್ರದ 'ಸಿಂಗಾರ ಸಿರಿಯೇ' ಸೇರಿದಂತೆ ಹಲವು ಹಿಟ್ ಗೀತೆಗಳಿಗೆ ಅವರು ಸಾಹಿತ್ಯ ಪೋಣಿಸಿದ್ದಾರೆ. 'ಡೆವಿಲ್' ಚಿತ್ರದಲ್ಲಿ ಅವರು ಪ್ರೀತಿ ಪ್ರೇಮದ ಹಾಡು ಎಷ್ಟು ಸೊಗಸಾಗಿರುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ. ಸೆಟ್ ಹಾಕಿ ಸಾಂಗ್ ಚಿತ್ರೀಕರಿಸಿರುವ ಸುಳಿವು ಸಿಗುತ್ತಿದೆ.

ಪ್ರಕಾಶ್ ನಿರ್ದೇಶನದ 'ಡೆವಿಲ್' ಸಿನಿಮಾ ಡಿಸೆಂಬರ್ 12ರಂದು ತೆರೆಗೆ ಬರಲಿದೆ. ಮಹೇಶ್ ಮಂಜ್ರೇಕರ್, ಅಚ್ಯುತ್‌ ಕುಮಾರ್ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಈ ಹಿಂದೆ 'ತಾರಕ್' ಚಿತ್ರದಲ್ಲಿ ದರ್ಶನ್- ಪ್ರಕಾಶ್ ಒಟ್ಟಿಗೆ ಕೆಲಸ ಮಾಡಿ ಗೆದ್ದಿದ್ದರು. ಅದೇ ಕಾಂಬಿನೇಷನ್ ರಿಪೀಟ್ ಆಗುತ್ತಿದೆ. ಸ್ವತಃ ಪ್ರಕಾಶ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಚಿತ್ರದ ಟೀಸರ್‌ಗಳು ಹಿಟ್ ಆಗಿದೆ. ಅಜನೀಶ್ ಲೋಕನಾಥ್ ಸಂಗೀತದಲ್ಲಿ ಫಸ್ಟ್ ಸಾಂಗ್ ಹಿಟ್ ಆಗಿದ್ದು ಈಗ ಸೆಕೆಂಡ್ ಸಾಂಗ್ ಮೇಲೆ ಅಭಿಮಾನಿಗಳು ದೃಷ್ಟಿ ನೆಟ್ಟಿದೆ. ಹಾಡು ಯಾರು ಹಾಡಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಇಲ್ಲ. ಶೀಘ್ರದಲ್ಲೇ ಅದು ಗೊತ್ತಾಗಲಿದೆ. ಇನ್ನುಳಿದಂತೆ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗಿದೆ. ದರ್ಶನ್ ಚಿತ್ರೀಕರಣ ಮುಗಿಸಿ ತಮ್ಮ ಪಾತ್ರಕ್ಕೆ ಡಬ್ಬಿಂಗ್ ಸಹ ಮಾಡಿ ಮುಗಿಸಿದ್ದಾರೆ. 'ಸಾರಥಿ' ರೀತಿಯಲ್ಲಿ ದರ್ಶನ್ ಅನುಪಸ್ಥಿತಿಯಲ್ಲೇ 'ಡೆವಿಲ್' ಸಿನಿಮಾ ಬಿಡುಗಡೆ ಆಗುವ ಸಾಧ್ಯತೆ ದಟ್ಟವಾಗಿದೆ.

ಜೈಲಿನಲ್ಲಿ ಸರಿಯಾದ ಸೌಲಭ್ಯ ಸಿಗುತ್ತಿಲ್ಲ ಎಂದು ದರ್ಶನ್ ಪರ ವಕೀಲರು ಪದೇ ಪದೆ ಕೋರ್ಟ್ ಮೆಟ್ಟಿಲೇರುತ್ತಿದ್ದಾರೆ. ನೆಚ್ಚಿನ ನಟನ ಸಂಕಷ್ಟ ನೆನೆದು ಅಭಿಮಾನಿಗಳು ಬೇಸರಗೊಂಡಿದ್ದಾರೆ. ದರ್ಶನ್ ಮನೆಯಲ್ಲಿ ದಸರಾ ಸಂಭ್ರಮ ಜೋರಾಗಿ ಇರುತ್ತಿತ್ತು. ಆದರೆ ಪತಿಯ ಅನುಪಸ್ಥಿತಿಯಲ್ಲಿ ಮಗನ ಜೊತೆ ಮನೆಯಲ್ಲಿರುವ ವಾಹನಗಳಿಗೆ ಪೂಜೆ ಮಾಡಿ ವಿಜಯಲಕ್ಷ್ಮಿ ಆಯುಧಪೂಜೆ ಆಚರಿಸಿದ್ದಾರೆ. ಅದಕ್ಕೆ ಸಂಬಂಧಿಸಿದ ಫೋಟೊಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

ಅಂದಾಜು 40 ಕೋಟಿ ರೂ. ಬಜೆಟ್‌ನಲ್ಲಿ 'ಡೆವಿಲ್' ಸಿನಿಮಾ ನಿರ್ಮಾಣವಾಗಿದೆ. ದೇಶ ವಿದೇಶಗಳಲ್ಲಿ ಚಿತ್ರೀಕರಣ ಮಾಡಿದ್ದಾರೆ. ಬೆಂಗಳೂರು, ಮೈಸೂರು, ರಾಜಸ್ಥಾನ ಹಾಗೂ ಥಾಯ್ಲೆಂಡ್‌ನಲ್ಲಿ ದೃಶ್ಯಗಳನ್ನು ಸೆರೆ ಹಿಡಿದಿದ್ದಾರೆ. ಚಿತ್ರದಲ್ಲಿ ಒಟ್ಟು 4 ಹಾಡುಗಳಿವೆ. ಮುಂದೆ ಟ್ರೈಲರ್ ಜೊತೆ ಇನ್ನೆರಡು ಹಾಡುಗಳನ್ನು ತಂಡ ಬಿಡುಗಡೆ ಮಾಡಲಿದೆ. ಸರೆಗಮ ಆಡಿಯೋ ಸಂಸ್ಥೆಗೆ ರೈಟ್ಸ್ ಸೇಲ್ ಆಗಿದೆ.

'ಡೆವಿಲ್' ಸಿನಿಮಾ ಚಿತ್ರೀಕರಣ ಆರಂಭಿಸಿದ ಬೆನ್ನಲ್ಲೇ ರೇಣುಕಾಸ್ವಾಮಿ ಪ್ರಕರಣ ಬಯಲಿಗೆ ಬಂದಿತ್ತು. ಹಾಗಾಗಿ ದರ್ಶನ್ ಜೈಲು ಸೇರಿ ಸಿನಿಮಾ ಚಿತ್ರೀಕರಣ ನಿಂತಿತ್ತು. ಜಾಮೀನು ಪಡೆದು ಹೊರ ಬಂದಿದ್ದ ದರ್ಶನ್ ಬೆನ್ನು ನೋವಿನಿಂದ ನೋವು ಅನುಭವಿಸಿದ್ದರು. ಬಳಿಕ ಚಿತ್ರೀಕರಣದಲ್ಲಿ ಭಾಗಿ ಆಗಿದ್ದರು. ಸುಪ್ರೀಂ ಕೋರ್ಟ್‌ನಲ್ಲಿ ಜಾಮೀನು ರದ್ದಾಗಿ ಮತ್ತೆ ಜೈಲು ಸೇರುವಂತಾಯಿತು.

More from Filmibeat

English summary
Second Single from ‘Devil’ Titled ‘Onde Onde Sala’ to Drop Soon
Read more about: devil darshan song
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X