ಮೂರನೇ ವಾರಕ್ಕೆ ಮುನ್ನುಗಿದ 'ಒಂದ್ ಕಥೆ ಹೇಳ್ಲಾ' ಚಿತ್ರ
ನೀವು ಆಮೆ ಮೊಲದ ಕಥೆಯನ್ನು ಬಾಲ್ಯದಲ್ಲಿ ಕೇಳಿರಬಹುದು. ಆ ಕಥೆಯಲ್ಲಿ ಆಮೆ ಹೇಗೆ ನಿಧಾನವಾಗಿ ಸಾಗಿ ತನ್ನ ಗುರಿಯನ್ನು ಮುಟ್ಟುತ್ತದೆಯೋ ಅದೇ ರೀತಿ ಕನ್ನಡದ ಹೊಸ ಸಿನಿಮಾವೊಂದು ಸೈಲೆಂಟ್ ಆಗಿ ಮೂರನೇ ವಾರಕ್ಕೆ ಕಾಲಿಟ್ಟಿದೆ.
'ಒಂದ್ ಕಥೆ ಹೇಳ್ಲಾ' ಸಿನಿಮಾ ಮಾರ್ಚ್ 8 ರಂದು ಬಿಡುಗಡೆಯಾಗಿತ್ತು. ಬಿಡುಗಡೆಯಾದ ದಿನದಿಂದ ಸಿನಿಮಾಗೆ ಒಳ್ಳೆಯ ಪ್ರತಿಕ್ರಿಯೆ ಇದೆ. ಸಿನಿಮಾ ನೋಡಿದವರು ಖುಷಿಯಿಂದ ಚಿತ್ರಮಂದಿರದಿಂದ ಆಚೆ ಬರುತ್ತಿದ್ದಾರೆ. ಹೊಸ ರೀತಿಯ ಸಿನಿಮಾವನ್ನು ಮಾಡಿ ನಿರ್ದೇಶಕ ಗಿರೀಶ್ ಮೆಚ್ಚುಗೆ ಪಡೆದಿದ್ದಾರೆ.
ವಿಶೇಷ ಅಂದರೆ, ಇದು ಸೌತ್ ಇಂಡಿಯಾದ ಮೊದಲ ಆಂಥಾಲಜಿ ಸಿನಿಮಾ. ಈ ಸಿನಿಮಾದಲ್ಲಿ ಐದು ಕಥೆಗಳು ಇದ್ದು ಎಲ್ಲ ಕಥೆಗಳು ಥಿಲ್ಲಿಂಗ್ ಆಗಿತ್ತು. ಸಿನಿಮಾದ ಮೇಕಿಂಗ್ ಹಾಗೂ ಸೌಂಡ್ ದೊಡ್ಡ ಪ್ರಶಂಸೆ ಪಡೆದಿತ್ತು.

ಪ್ರೇಕ್ಷಕರಿಗೆ ಇಷ್ಟ ಆದ ಈ ಸಿನಿಮಾದ ಕನ್ನಡದ ನಿರ್ದೇಶಕ, ನಟ, ನಟಿರಿಗೂ ಇಷ್ಟ ಆಯ್ತು. 'ಕೆಜಿಎಫ್' ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್, ಸಿಂಪಲ್ ಸುನಿ, ನಟ ಧನಂಜಯ್, ನಟಿ ಕೃಷಿ ತಾಪಂಡ ಹೀಗೆ ಅನೇಕರು ಸಿನಿಮಾದ ಬಗ್ಗೆ ಮಾತನಾಡಿದರು.
'ಒಂದ್ ಕಥೆ ಹೇಳ್ಲಾ' ಚಿತ್ರದ ಜೊತೆಗೆ ಆ ವಾರ ಚಿತ್ರಮಂದಿರಕ್ಕೆ ಬಂದಿದ್ದ ಯಾವ ಸಿನಿಮಾಗಳೂ ಹೆಚ್ಚು ದಿನ ಉಳಿಯಲಿಲ್ಲ. ಆದರೆ, ಈ ಸಿನಿಮಾ ಮೂರನೇ ವಾರಕ್ಕೆ ಕಾಲಿಟ್ಟಿದೆ. ಮತ್ತೆ ಹೊಸ ಪ್ರಯತ್ನವನ್ನು ಕನ್ನಡಿಗರು ಒಪ್ಪಿಕೊಂಡಿದ್ದಾರೆ.


Click it and Unblock the Notifications











