For Quick Alerts
  ALLOW NOTIFICATIONS  
  For Daily Alerts

  ಸೌತ್ ಇಂಡಿಯಾದ ಮೊದಲ 'ಹಾರರ್ ಆಂಥಾಲಜಿ ' ಸಿನಿಮಾ ನಾಳೆ ರಿಲೀಸ್

  |

  ಈ ವಾರ ಬಿಡುಗಡೆಯಾಗುತ್ತಿರುವ ಸಿನಿಮಾ ಪೈಕಿ ಒಂದಾಗಿರುವ 'ಒಂದು ಕಥೆ ಕೇಳ್ಲಾ' ಚಿತ್ರ ತನ್ನ ವಿಭಿನ್ನತೆಯಿಂದ ಗಮನ ಸೆಳೆಯುತ್ತಿದೆ. ಈಗಾಗಲೇ, ಟ್ರೇಲರ್ ಹಿಟ್ ಆಗಿದ್ದು, ಸಿನಿಮಾ ಕೂಡ ಯಶಸ್ವಿಯಾಗುತ್ತದೆ ಎನ್ನುವ ಆತ್ಮವಿಶ್ವಾಸದಲ್ಲಿ ಚಿತ್ರತಂಡ ಇದೆ.

  ಹಾರರ್ ಸಿನಿಮಾ ಬರುವುದು ಕಾಮನ್. ಆದರೆ ಇದು ಹಾರರ್ ಆಂಥಾಲಜಿ ಸಿನಿಮಾ. ವಿಶೇಷ ಅಂದರೆ, 'ಒಂದು ಕಥೆ ಕೇಳ್ಲಾ' ಸೌತ್ ಇಂಡಿಯಾದ ಮೊದಲ ಹಾರರ್ ಐತಾಲಾಜಿ ಚಿತ್ರವಾಗಿದೆ. ಸಿನಿಮಾದಲ್ಲಿ ಒಂದು ಮುಖ್ಯ ಅಧ್ಯಾಯ ಇದ್ದು, ಐದು ಉಪಕಥೆಗಳು ಬರುತ್ತದೆ.

  'ಒಂದ್ ಕಥೆ ಹೇಳ್ಲಾ' : ಹೊಸ ಹುಡುಗರು, ಹೊಸದೊಂದು ಪ್ರಯತ್ನ

  ಸಿನಿಮಾದ ಉಪಕಥೆಗಳಲ್ಲಿ ರಿಯಲ್ ಆಗಿ ನಡೆದ ಘಟನೆಗಳನ್ನು ಸೇರಿಸಲಾಗಿದೆ. ಸಿನಿಮಾದಲ್ಲಿ ಬರುವ ನರಸಿಂಹಸ್ವಾಮಿ ಎಪಿಸೋಡ್ ಹೈಲೆಟ್ ಆಗಿದೆಯಂತೆ. ಈ ಪಾತ್ರದಲ್ಲಿ ನಿರ್ದೇಶಕ ಗಿರೀಶ್ ಅವರೇ ಕಾಣಿಸಿಕೊಂಡಿದ್ದಾರೆ. 'ಜೋಡಿ ಹಕ್ಕಿ' ಧಾರಾವಾಹಿ ಖ್ಯಾತಿಯ ತಾಂಡವ್ ರಾಮ್ ಸೇರಿದಂತೆ ಐದು ಪಾತ್ರಗಳು ಮುಖ್ಯವಾಗಿರುತ್ತದೆ.

  ರೋಣದ ಬಕ್ಕೇಶ್ ಮ್ಯೂಸಿಕ್, ಪ್ರತೀಕ್ ಎಡಿಟಿಂಗ್ ಹಾಗೂ ಕೀರ್ತನ್ ಪೂಜಾರಿ ಕ್ಯಾಮರಾ ವರ್ಕ್ ಮಾಡಿದ್ದಾರೆ. 'ವಿಕ್ರಮ್ ವೇದಾ' ಹಾಗೂ 'ಕಬಾಲಿ' ಖ್ಯಾತಿಯ ಗಾಯಕ ಶಿವಂ ಚಿತ್ರದ ಹಾಡಿಗೆ ಧ್ವನಿ ನೀಡಿದ್ದಾರೆ.

  ಈ ವಾರ 5 ಕನ್ನಡ ಚಿತ್ರಗಳ ಜೊತೆ ಒಂದು ಡಬ್ಬಿಂಗ್ ಸಿನಿಮಾ ಬಿಡುಗಡೆ

  ಇದೊಂದು ಕ್ರೌಂಡ್ ಫಂಡಿಂಗ್ ಸಿನಿಮಾ ಆಗಿದ್ದು, ದೀಪಕ್ ಗಂಗಾಧರ್ ಮೂವಿಸ್ ಸಿನಿಮಾವನ್ನ ಹಂಚಿಕೆ ಮಾಡುತ್ತಿದೆ. ಗಾಂಧಿನಗರದ ಅನುಪಮ ಸೇರಿದಂತೆ ರಾಜ್ಯಾದಂತ್ಯ ಸಿನಿಮಾ ನಾಳೆ ಬಿಡುಗಡೆ ಆಗುತ್ತಿದೆ.

  English summary
  'Ondu Kathe Hella' kannada movie will be releasing on tomorrow (March 6th).

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X