»   » ಮಂಗಳೂರು 'ಮೊಟ್ಟೆ'ಗೆ ಇರುವ ಡಿಮ್ಯಾಂಡ್ ಅಷ್ಟಿಷ್ಟಲ್ಲ.!

ಮಂಗಳೂರು 'ಮೊಟ್ಟೆ'ಗೆ ಇರುವ ಡಿಮ್ಯಾಂಡ್ ಅಷ್ಟಿಷ್ಟಲ್ಲ.!

Posted By:
Subscribe to Filmibeat Kannada

ಯಾವುದೇ ಗಿಮಿಕ್ ಮಾಡದೇ... ಸಿಕ್ಕಾಪಟ್ಟೆ ಪ್ರಚಾರ ಬಯಸದೆ... ಸೈಲೆಂಟ್ ಆಗಿ ತೆರೆಗೆ ಬಂದ 'ಒಂದು ಮೊಟ್ಟೆಯ ಕಥೆ' ಇದೀಗ ಎಲ್ಲರ ಗಮನ ಸೆಳೆಯುತ್ತಿದೆ.

ಮಲ್ಟಿಪ್ಲೆಕ್ಸ್ ಗಳಲ್ಲಿ 'ಒಂದು ಮೊಟ್ಟೆಯ ಕಥೆ' ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಪರಭಾಷೆಯ ಸಿನಿಮಾಗಳಿಗೆ ಫಿಕ್ಸ್ ಆಗಿದ್ದ 'ಶಾರದಾ ಟಾಕೀಸ್'ನಲ್ಲಿ 'ಒಂದು ಮೊಟ್ಟೆಯ ಕಥೆ' ಕಮಾಲ್ ಮಾಡುತ್ತಿದೆ.

ಬೋಳು ತಲೆಯ ವ್ಯಕ್ತಿಯ ಕಥೆ-ವ್ಯಥೆ ಹೊಂದಿರುವ 'ಒಂದು ಮೊಟ್ಟೆಯ ಕಥೆ' ನೋಡಲು ಕ್ಲಾಸ್-ಮಾಸ್ ಎಂಬ ಭೇದಭಾವ ಇಲ್ಲದೆ ಎಲ್ಲರೂ ಚಿತ್ರಮಂದಿರದ ಕಡೆಗೆ ಮುಗಿಬೀಳುತ್ತಿದ್ದಾರೆ. ಹೀಗಾಗಿಯೇ, ಮಂಗಳೂರು ಸೊಗಡು ತುಂಬಿರುವ 'ಒಂದು ಮೊಟ್ಟೆಯ ಕಥೆ' ರೀಮೇಕ್ ರೈಟ್ಸ್ ಗೆ ಬೇಡಿಕೆ ಕೂಡ ಹೆಚ್ಚಾಗಿದೆ. ಮುಂದೆ ಓದಿರಿ....

'ಮೊಟ್ಟೆ'ಯ ರೀಮೇಕ್ ರೈಟ್ಸ್ ಗೆ ಸಖತ್ ಬೇಡಿಕೆ

ಸ್ಯಾಂಡಲ್ ವುಡ್ ನಲ್ಲಿ ಎಲ್ಲರ ಕಣ್ಣುಕುಕ್ಕುತ್ತಿರುವ 'ಒಂದು ಮೊಟ್ಟೆಯ ಕಥೆ' ಚಿತ್ರದ ರೀಮೇಕ್ ರೈಟ್ಸ್ ಗೆ ಬೇಡಿಕೆ ಹೆಚ್ಚಾಗಿದೆ. ಕಾಲಿವುಡ್ ನಿಂದ ಹಲವು ನಿರ್ಮಾಪಕರು/ವಿತರಕರು 'ಒಂದು ಮೊಟ್ಟೆಯ ಕಥೆ' ರೀಮೇಕ್ ರೈಟ್ಸ್ ಪಡೆಯಲು ಮಾತುಕತೆ ನಡೆಸಿದ್ದಾರಂತೆ.

ಒಂದು ಮೊಟ್ಟೆಯ ಕಥೆ : ಡಬ್ಬಲ್ ಮೀನಿಂಗ್ ಇಲ್ಲದ ಕಾಶೀನಾಥ್ ಚಿತ್ರ

ಎಲ್ಲರಿಗೂ ಮೆಚ್ಚುಗೆ ಆಗಿದೆ.!

ಈಗಾಗಲೇ 'ಒಂದು ಮೊಟ್ಟೆಯ ಕಥೆ' ಚಿತ್ರವನ್ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಗೋಲ್ಡನ್ ಸ್ಟಾರ್ ಗಣೇಶ್, ರಕ್ಷಿತ್ ಶೆಟ್ಟಿ ಸೇರಿದಂತೆ ಹಲವು ಸ್ಟಾರ್ ನಟರು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನಟಿ ಶ್ರದ್ಧಾ ಶ್ರೀನಾಥ್ ಬರೆದ 'ಒಂದು ಮೊಟ್ಟೆಯ ಕಥೆ' ವಿಮರ್ಶೆ

ಜನಪ್ರಿಯತೆ ಹೆಚ್ಚಾಗಿದೆ

'ಒಂದು ಮೊಟ್ಟೆಯ ಕಥೆ' ಚಿತ್ರದ ಜನಪ್ರಿಯತೆ ದಿನೇ ದಿನೇ ಹೆಚ್ಚಾಗುತ್ತಿರುವುದರಿಂದ, ಮಲ್ಟಿಪ್ಲೆಕ್ಸ್ ಗಳಲ್ಲಿ ಶೋಗಳ ಸಂಖ್ಯೆ ಡಬಲ್ ಆಗುವ ಸಾಧ್ಯತೆ ಇದೆ.

'ಒಂದು ಮೊಟ್ಟೆಯ ಕಥೆ' ಕುರಿತು....

ತಲೆಗೂದಲು ಇಲ್ಲದಿರುವ ವ್ಯಕ್ತಿ ಮದುವೆ ಆಗಲು ಹೊರಟಾಗ ಎದುರಿಸುವ ಅಪಹಾಸ್ಯ, ಅವಮಾನ ಕುರಿತಾದ ಒಂದು ಸರಳ ಹಾಗೂ ಸುಂದರ ಸಿನಿಮಾ 'ಒಂದು ಮೊಟ್ಟೆಯ ಕಥೆ'. ಮಂಗಳೂರು ಮೂಲಕ ರಾಜ್.ಬಿ.ಶೆಟ್ಟಿ ಈ ಚಿತ್ರವನ್ನ ನಿರ್ದೇಶಿಸಿರುವುದರ ಜೊತೆಗೆ ಮುಖ್ಯಪಾತ್ರದಲ್ಲಿ ಅಭಿನಯಿಸಿದ್ದಾರೆ.

English summary
Kannada Movie 'Ondu Motteya Kathe' Remake rights in demand
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada