For Quick Alerts
  ALLOW NOTIFICATIONS  
  For Daily Alerts

  'ರೊಮ್ಯಾಂಟಿಕ್ ಕ್ರೈಂ ಕಥೆ'ಯಿಂದ ವರ್ಮಾ ಶಿಷ್ಯ ಔಟ್

  By Rajendra
  |

  ಮಲಿನಿನೇಣಿ ಪ್ರೊಡಕ್ಷನ್ ಅಡಿಯಲ್ಲಿ ಇತ್ತೀಚಿಗೆ ಪ್ರಾರಂಬಗೊಂಡ 'ಒಂದು ರೊಮ್ಯಾಂಟಿಕ್ ಕ್ರೈಂ ಕಥೆ' ಸಿನೆಮಾದ ನಿರ್ದೇಶಕ ಶಶನರಾಜು ಅವರ ಸ್ಥಳಕ್ಕೆ ಈಗ ಶ್ಯಾಮ್ ಜೆ ಚೈತನ್ಯ ಅವರು ಬಂದಿದ್ದಾರೆ. ಕೆಲವು ದಿವಸಗಳ ಚಿತ್ರೀಕರಣದ ನಂತರ ಈ ಬದಲಾವಣೆ ಆಗಿದೆ ಎಂದು ನಿರ್ಮಾಪಕ ಡಾಕ್ಟರ್ ಮಲಿನೇಣಿ ಲಕ್ಷ್ಮಯ್ಯ ಅವರು ತಿಳಿಸಿದ್ದಾರೆ.

  ಅಂದಹಾಗೆ ಶ್ಯಾಮ್ ಜೆ ಚೈತನ್ಯ ಅವರು ಈ ಹಿಂದೆ 'ನಂತರ', 'ಸ್ನೇಹಯಾತ್ರೆ' ಎಂಬ ಸಿನೆಮಗಳನ್ನು ಕನ್ನಡದಲ್ಲಿ ನಿರ್ದೇಶನ ಮಾಡಿರುವರು. 'ಸ್ನೇಹಯಾತ್ರೆ' ಮಕ್ಕಳ ಸಿನೆಮಕ್ಕೆ ಗೋಲ್ಡನ್ ಎಲಿಫೆಂಟ್ ಪ್ರಶಸ್ತಿ ಸಹ ಒದಗಿ ಬಂದಿತ್ತು.

  ಬದಲಾವಣೆ ಆದ ನಿರ್ದೇಶಕರು ಈಗ ನಿರ್ಮಾಪಕರ ತವರುರಾದ ಸಿಂಗರಾಯಕೊಂಡ ಗುಂಟೂರು ಜಿಲ್ಲೆ, ಸ್ವಂತ ಕಾಲೇಜಿನ ಆಸುಪಾಸಿನಲ್ಲಿ ಚಿತ್ರೀಕರಣವನ್ನು ಮಾಡುತ್ತಲಿದ್ದಾರೆ. ಇದಾದ ನಂತರ ಮಂಗಳೂರಿಗೆ ಬಂದು ಅಲ್ಲಿ ಕೆಲವು ಸನ್ನಿವೇಶಗಳನ್ನು ಚಿತ್ರಿಕರಿಸಿಕೊಳ್ಳಲಿದ್ದಾರೆ.

  ಆಂಧ್ರ ಪ್ರದೇಶದಲ್ಲಿ ಹೆಸರಾದ ಉದ್ಯಮಿ ಡಾಕ್ಟರ್ ಮಲಿನೇಣಿ ಲಕ್ಷ್ಮಯ್ಯ ಅವರು 'ಮಲಿನೇಣಿ ಪ್ರೊಡಕ್ಷನ್ ಪ್ರೈವೇಟ್ ಲಿಮಿಟೆಡ್' ಅಡಿಯಲ್ಲಿ ಈ ಚಿತ್ರವನ್ನು ಕನ್ನಡದಲ್ಲಿ ತಯಾರಿಸುತ್ತಿದ್ದಾರೆ. ಮಲಿನೇಣಿ ಇನ್ಸ್ಟಿಟ್ಯೂಟ್ ಆಫ್ ಇಂಜಿನೀರಿಂಗ್, ಟೆಕ್ನಾಲಜಿ, ಮೆಡಿಸಿನ್ ಅವರ ನೇತೃತ್ವದಲ್ಲಿ ಜನಪ್ರಿಯತೆ ಪಡೆದಿದೆ.

  ಈ ಚಿತ್ರದ ಕಥಾ ಹಂದರ ಇಂದಿನ ಸಾಮಾಜಿಕ ಬದುಕಿಗೆ ಸಂಬಂಧಪಟ್ಟ ವಿಚಾರ ಆಗಿದೆ. ದೂರದ ಊರುಗಳಿಂದ ಶ್ರೀಮಂತ ಮನೆತನದ ಮಕ್ಕಳು ವಿದ್ಯೆಗಾಗಿ ಬೇರೆ ರಾಜ್ಯಗಳಿಗೆ ಬಂದು ಸಹವಾಸವನ್ನು ಬದಲಿಸಿಕೊಂಡು ಮೋಜು, ಮಸ್ತಿಯಲ್ಲಿ ತೊಡಗಿಕೊಂಡು ಸಮಾಜಕ್ಕೆ ಒಂದು ಪಿಡುಗಾಗಿ ಬಿಡುವುದು ಈ ಚಿತ್ರದ ಎಳೆ.

  ತಾರಾಗಣದಲ್ಲಿ 'ಗೊಂಬೆಗಳ ಲವ್' ಸಿನೆಮಾದ ನಾಯಕ ಅರುಣ್, ಅಶ್ವಿನಿ ಚಂದ್ರಶೇಖರ್, ಪ್ರಿಯಾಂಕ ಶುಕ್ಲ, ವಿನೋದ್, ಅರ್ಚನ ಹಾಗೂ ಇನ್ನಿತರರು ಇದ್ದಾರೆ. ಪ್ರಭು ಅವರು ಛಾಯಾಗ್ರಾಹಕ ಈ ಚಿತ್ರಕ್ಕಿದೆ. (ಒನ್ಇಂಡಿಯಾ ಕನ್ನಡ)

  English summary
  Kananda movie Ondu Romantic Crime Kathe director replaced by Shashuna Raju Nayakula to Shyam J Chiatanya. P Sunil Kumar Reddy’s ‘Oka Romantic Crime Katha’ is going to be remade in Kannada. Speaking on this occasion director Sunil said The Kannada remake will be made with all new comers.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X