ಕುಡಿದಷ್ಟು ಖುಷಿಕೊಡುವ 'ಒಂದು ಸ್ಟ್ರಾಂಗ್ ಕಾಫಿ'
ಕನ್ನಡದ ಹಿರಿತೆರೆಗಳಲ್ಲಿ ಪ್ರಯೋಗಗಳು ಆಗುತ್ತದೆಯೋ ಇಲ್ಲವೋ, ಆದರೆ, ಕಿರುಚಿತ್ರಗಳಲ್ಲಿ ಮಾತ್ರ ಹೊಸ ಹೊಸ ಪ್ರಯತ್ನಗಳು ನಡೆಯುತ್ತಲೇ ಇವೆ. ಈಗ ಅಭಿನಯ ತರಂಗ ಹುಡುಗರ ತಂಡವೊಂದು ಒಂದು ಒಳ್ಳೆಯ ಪ್ರಯತ್ನ ಮಾಡಿ ಗೆದ್ದಿದೆ.

'ಒಂದು ಸ್ಟ್ರಾಂಗ್ ಕಾಫಿ' ಕಿರುಚಿತ್ರ ಸದ್ಯ ಬಿಡುಗಡೆಯಾಗಿದ್ದು, ನೋಡುಗರಿಂದ ಅದ್ಬುತ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಒಂದು ಸೂಕ್ಷ್ಮ ವಿಷಯವನ್ನು ಸಿನಿಮಾದಲ್ಲಿ ಹೇಳಿರುವ ರೀತಿ ಮೆಚ್ಚಬೇಕಾಗಿದೆ. ಅನ್ವಿತಾ ಎನ್ನುವ ಹುಡುಗಿ ಸಂಬಂಧಗಳಿಂದ ಬಂಧನಗೊಂಡಿರುವ ಕಥೆಯನ್ನು ಇಲ್ಲಿ ಹೇಳಿದ್ದಾರೆ.
ಇಡೀ ಕಿರುಚಿತ್ರದಲ್ಲಿ ಬಹಳ ಇಷ್ಟ ಆಗುವುದು ಮ್ಯೂಸಿಕ್ ಹಾಗೂ ಕ್ಯಾಮರಾ ವರ್ಕ್. ಆ ಎರಡು ಕೆಲಸಗಳನ್ನು ರಾಕೇಶ್ ಹೊಸಮನೆ ಹಾಗೂ ಅಪರಾಜಿತ್ ಶ್ರೀಸ್ ಅಮೋಘವಾಗಿ ನಿರ್ವಹಿಸಿದ್ದಾರೆ. ಮದನ್ ರಾಮ್ ವೆಂಕಟೇಶ್ ಅವರ ನಿರ್ದೇಶನ ಅಚ್ಚುಕಟ್ಟಾಗಿದ್ದು, ಅವರ ನಿರೂಪಣೆ ಸುಂದರವಾಗಿದೆ.
ಶಿವಾನಿ, ಪ್ರಮುಖ್ ರಾಜ್, ಅರುಣ್ ಜಾನಕಿ ರಾಮ್, ಗುರುಪ್ರಸಾದ್, ಪ್ರಮುಖ್ ರಾಜ್, ಆಶಿಸ್, ಧನುಶ್ , ಲೋಕೇಶ್, ನಹೂಶ್, ನಿಂಗರಾಜು, ವಿನಯ್ ಕಶ್ಯಪ್ ಸೇರಿದಂತೆ ಅನೇಕರು ಚಿತ್ರದಲ್ಲಿ ನಟಿಸಿದ್ದಾರೆ. ಇಡೀ ಕಿರುಚಿತ್ರ ಒಂದು ಒಳ್ಳೆಯ ಅನುಭವ ನೀಡುತ್ತದೆ. ದೊಡ್ಡ ಸಿನಿಮಾಗೆ ಕಡಿಮೆ ಇರದ ಕ್ವಾಲಿಟಿ ಇಲ್ಲಿದೆ.
ಅಂದಹಾಗೆ, ನೀವು 'ಒಂದು ಸ್ಟ್ರಾಂಗ್ ಕಾಫಿ' ಯನ್ನು ಒಮ್ಮೆ ಕುಡಿದು ನೋಡಿ. ನಿಮಗೂ ಈ ಕಾಫಿ ಇಷ್ಟ ಆಗಬಹುದು.


Click it and Unblock the Notifications











