For Quick Alerts
  ALLOW NOTIFICATIONS  
  For Daily Alerts

  'ಯಜಮಾನ'ನಿಗೆ ಪ್ರೀತಿಯ ಉಡುಗೊರೆ ನೀಡಿದ ಸುನಿ 'ಬಜಾರ್'

  |

  ಸಿಂಪಲ್ ಸುನಿ ನಿರ್ದೇಶನದ ಬಜಾರ್ ಸಿನಿಮಾ ಬಿಡುಗಡೆಯಾಗಿ ಯಶಸ್ವಿಯಾಗಿ ಪ್ರದರ್ಶನ ಕಾಣ್ತಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಶಿಷ್ಯ ಅಂತಾನೇ ಗುರುತಿಸಿಕೊಂಡಿರುವ ಧನ್ವೀರ್ ಈ ಚಿತ್ರದ ಮೂಲಕ ನಾಯಕನಾಗಿ ಸ್ಯಾಂಡಲ್ ವುಡ್ ಗೆ ಪ್ರವೇಶ ಮಾಡಿದ್ದಾರೆ.

  ಸ್ವತಃ ದರ್ಶನ್ ಕೂಡ 'ಬಜಾರ್' ಚಿತ್ರವನ್ನ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಹೀಗೆ, ಬಜಾರ್ ಚಿತ್ರಕ್ಕೆ ಜೊತೆಯಾಗಿ ನಿಂತಿದ್ದ ದರ್ಶನ್ ಅವರಿಗೆ ನಿರ್ದೇಶಕ ಸುನಿ ಸ್ಪೆಷಲ್ ಉಡುಗೊರೆಯೊಂದನ್ನ ನೀಡಿದ್ದಾರೆ.

  ಬಜಾರ್ ಚಿತ್ರದ 'ಒಂದೂರಲ್ಲಿ ಒಬ್ಬ ಯಜಮಾನ....' ವಿಡಿಯೋ ಹಾಡನ್ನ ರಿಲೀಸ್ ಮಾಡಿ ''ಇದು ದರ್ಶನ್ ಅವರಿಗೆ ಅರ್ಪಣೆ'' ಎಂದಿದ್ದಾರೆ.

  ಹಸ್ತಿನಾಪುರದ ಯಜಮಾನನನ್ನು ಭೇಟಿ ಮಾಡಿದ ಸಿಂಪಲ್ ಸುನಿ

  ಸದ್ಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಯಜಮಾನ ಚಿತ್ರದಲ್ಲಿ ನಟಿಸಿದ್ದಾರೆ. ಇತ್ತೀಚಿಗಷ್ಟೆ ಟ್ರೈಲರ್ ಬಿಡುಗಡೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿದೆ.

  'ಬಜಾರ್' ಹೀರೋಗೆ ಪ್ರಾಂಕ್ ಕಾಲ್ ಮಾಡಿ ಕಾಲೆಳೆದ ದರ್ಶನ್

  ಸತತ ಮೂರು ದಿನಗಳಿಂದ ಟ್ರೆಂಡಿಂಗ್ ನಲ್ಲಿ ಮೊದಲ ಸ್ಥಾನದಲ್ಲಿದ್ದು, 15 ಮಿಲಿಯನ್ ವೀಕ್ಷಣೆ ಕಂಡಿದೆ. ಮಾರ್ಚ್ 1 ರಂದು ಯಜಮಾನ ತೆರೆಕಾಣುತ್ತಿದ್ದು, ಹರಿಕೃಷ್ಣ ಮತ್ತು ಪಿ ಕುಮಾರ್ ನಿರ್ದೇಶನ ಮಾಡಿದ್ದಾರೆ. ಬಿ ಸುರೇಶ್ ಮತ್ತು ಶೈಲಜಾ ನಾಗ್ ನಿರ್ಮಿಸಿದ್ದಾರೆ. ರಶ್ಮಿಕಾ ಮಂದಣ್ಣ ಮತ್ತು ತಾನ್ಯ ಹೋಪ್ ನಾಯಕಿಯಾಗಿ ನಟಿಸಿದ್ದಾರೆ.

  English summary
  Onduralli obba yajamana video song from simple suni directional bazaar movie has released. this song dedicated to darshan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X