»   » ಅಭಿಮಾನಿಗಳ ಬಹುದಿನದ ಕನಸನ್ನು ನನಸು ಮಾಡಿದ ಕಿಚ್ಚ

ಅಭಿಮಾನಿಗಳ ಬಹುದಿನದ ಕನಸನ್ನು ನನಸು ಮಾಡಿದ ಕಿಚ್ಚ

Posted By:
Subscribe to Filmibeat Kannada

ಅಭಿಮಾನಿಗಳ ಅಭಿಮಾನಿ ನಟ ಕಿಚ್ಚ ಸುದೀಪ್ ತಮ್ಮನ್ನ ಇಷ್ಟ ಪಡುವ ಫ್ಯಾನ್ಸ್ ಗಳ ಬಹುದಿನದ ಕನಸನ್ನು ನನಸು ಮಾಡಿದ್ದಾರೆ. ಸದಾ ಚಿತ್ರೀಕರಣದಲ್ಲಿ ಬ್ಯುಸಿ ಆಗಿರುವ ಸುದೀಪ್ ಅವರನ್ನ ಭೇಟಿ ಮಾಡುವುದು ಅಭಿಮಾನಿಗಳಿಗೆ ದೊಡ್ಡ ಕನಸಾಗಿ ಉಳಿದುಕೊಂಡಿದೆ.

ಸ್ಟಾರ್ ಗಳನ್ನ ಭೇಟಿ ಮಾಡುವ ಅವಕಾಶ ಅಂದರೆ ಅವರ ಹುಟ್ಟುಹಬ್ಬದಂದು. ಆದರೆ ಸುದೀಪ್ ಹುಟ್ಟುಹಬ್ಬವನ್ನ ಆಚರಣೆ ಮಾಡಿಕೊಳ್ಳಬಾರದು ಎನ್ನುವ ನಿರ್ಧಾರಕ್ಕೆ ಬಂದು ವರ್ಷವೇ ಕಳೆದು ಹೋಗಿದೆ. ಬರ್ತಡೇ ಹೆಸರಿನಲ್ಲಿ ಸಂಭ್ರಮ ಸಡಗರದ ಜೊತೆಯಲ್ಲಿ ದುಂದುವೆಚ್ಚ ಮಾಡಬಾರದು ಎಂದು ನಿರ್ಧರಿಸಿದ್ದಾರೆ.

'ಡ್ರೀಮ್ ಗರ್ಲ್' ಶ್ರೀದೇವಿ ವಿಧಿವಶ: ಕಿಚ್ಚ ಸುದೀಪ್ ಹೃದಯ ಛಿದ್ರ

ಆದರೆ ಅಭಿಮಾನಿಗಳಿಗೆ ತಮ್ಮ ನೆಚ್ಚಿನ ಸ್ಟಾರ್ ರನ್ನ ಒಮ್ಮೆಯಾದರೂ ಭೇಟಿ ಮಾಡಬೇಕು. ಕೈ ಮುಟ್ಟಿ ವಿಷ್ ಮಾಡಬೇಕು ಎನ್ನುವ ಆಸೆಗಳು ಇರುತ್ತವೆ. ಆದರೆ ಈ ವಿಚಾರವನ್ನೆಲ್ಲಾ ಕಿಚ್ಚನಿಗೆ ಮುಟ್ಟಿಸುವುದು ಯಾರು? ಸುದೀಪ್ ಅವರನ್ನ ಭೇಟಿ ಮಾಡಲು ಸಾಧ್ಯವೇ ಆಗುವುದಿಲ್ಲವೇ ಎನ್ನುತ್ತಿದ್ದ ಅಭಿಮಾನಿಗಳ ಕನಸನ್ನ ನಿನ್ನೆ ಕಿಚ್ಚ ಸುದೀಪ್ ನನಸು ಮಾಡಿದ್ದಾರೆ. ಅದು ಹೇಗೆ ಅಂತೀರಾ ಮುಂದೆ ಓದಿ?

ಅಭಿಮಾನಿಯ ಅಭಿಮಾನಿಯ ದರ್ಶನ

ಕಳೆದ ವರ್ಷ ಸೆಪ್ಟೆಂಬರ್ 2 ರಂದು ಸುದೀಪ್ ಅವರನ್ನ ಭೇಟಿ ಮಾಡಿ ಫೋಟೋ ತೆಗೆಸಿಕೊಂಡಿದ್ದ ಅಭಿಮಾನಿಗಳು ಸುಮಾರು ಒಂದುವರೆ ವರ್ಷದ ನಂತರ ಮತ್ತೆ ಸುದೀಪ್ ಅವರನ್ನ ಭೇಟಿ ಮಾಡಿದ್ದಾರೆ. ಜೊತೆಯಲ್ಲೇ ಕೇಕ್ ಕತ್ತರಿಸಿ ಸಂಭ್ರಮವನ್ನ ಆಚರಣೆ ಮಾಡಿದ್ದಾರೆ. .

ಅಭಿಮಾನಿಗಳಿಂದ ಕಿಚ್ಚನ ಭೇಟಿ ಕಾರ್ಯಕ್ರಮ

ಅಖಿಲ ಕರ್ನಾಟಕ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸೇನಾ ಸಮಿತಿಯಿಂದ ಇತ್ತೀಚಿಗಷ್ಟೆ ಸುದೀಪ್ ಅವರಿಗಾಗಿ ಅಭಿನಂದನಾ ಸಮಾರಂಭವನ್ನ ಆಯೋಜನೆ ಮಾಡಲಾಗಿತ್ತು. ಕಿಚ್ಚ ಚಿತ್ರರಂಗದಲ್ಲಿ 22 ವರ್ಷ ಪೂರೈಸಿರುವ ಹಿನ್ನಲೆಯಲ್ಲಿ ಅಭಿಮಾನಿಗಳು ಸುದೀಫ್ ಅವರನ್ನ ಭೇಟಿ ಮಾಡಿ ಖುಷಿಯನ್ನ ಹಂಚಿಕೊಂಡರು.

ಕಿಚ್ಚನನ್ನ ಕಾಣಲು ಬಂದರು ಸಾವಿರಾರು ಜನರು

ಹುಟ್ಟುಹಬ್ಬದಂದು ಸುದೀಪ್ ಅವರನ್ನ ಭೇಟಿ ಮಾಡಲು ಸಾಧ್ಯವಾಗದ ಅಭಿಮಾನಿಗಳು ನಿನ್ನೆ (ಫೆ 26) ಸುದೀಪ್ ಅವರ ಮನೆಯ ಬಳಿ ಜಮಾಯಿಸಿದ್ದರು. ಸಾವಿರಾರು ಅಭಿಮಾನಿಗಳ ಜೊತೆ ಕಿಚ್ಚ ಕೆಲ ಸಮಯ ಕಾಲ ಕಳೆದರು.

ಕಾತುರರಾಗಿದ್ದಾರೆ ಅಭಿಮಾನಿಗಳು

ಬೆಂಗಳೂರು ಹಾಗೂ ಸುತ್ತಾ ಮುತ್ತ ಇರುವ ಅಭಿಮಾನಿಗಳನ್ನ ಕಿಚ್ಚ ಬೇಟಿ ಮಾಡಿದ್ದಾರೆ. ಆದರೆ ರಾಜ್ಯದ ಹೊರ ಜಿಲ್ಲೆಯಲ್ಲಿರುವ ಅಭಿಮಾನಿಗಳಿಗೆ ಸುದೀಪ್ ಅವರನ್ನ ಭೇಟಿ ಮಾಡಬೇಕೆಂದು ಆಸೆ ಇದೆ. ಅದನ್ನ ಯಾವಾಗ ನಸು ಮಾಡುತ್ತಾರೆ ಅನ್ನುವುದನ್ನ ಕಾದು ನೋಡಬೇಕು.

English summary
Kannada actor Kichcha Sudeep recently meet his fans. After a one and a half year Sudeep has meet a large number of fans.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada