ಮತ್ತೊಂದು ದಾಖಲೆ ಬರೆದ 'ಕೆಜಿಎಫ್ 2' ಟ್ರೇಲರ್
ಭಾರತದ ಬಹುನಿರೀಕ್ಷಿತ ಸಿನಿಮಾ 'ಕೆಜಿಎಫ್ 2' ಟ್ರೇಲರ್ ಜನವರಿ ತಿಂಗಳಲ್ಲಿ ಬಿಡುಗಡೆ ಆಗಿ ದಾಖಲೆಗಳ ಮೇಲೆ ದಾಖಲೆ ಬರೆದಿದೆ.
ಅತಿ ಹೆಚ್ಚು ಜನರಿಂದ ವೀಕ್ಷಣೆಗೊಳಗಾದ ಭಾರತದ ಸಿನಿಮಾ ಟ್ರೇಲರ್ ಎಂಬ ಖ್ಯಾತಿಯನ್ನುಕೆಜಿಎಫ್ 2 ಸಿನಿಮಾದ ಟ್ರೇಲರ್ ಪಡೆದಿದೆ. ಅತ್ಯಂತ ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ಜನ ನೋಡಿದ ಟ್ರೇಲರ್ ಸಹ ಇದೇ ಆಗಿದೆ.
ಟ್ರೇಲರ್ ಬಿಡುಗಡೆ ಆಗಿ ನಾಲ್ಕು ತಿಂಗಳ ಬಳಿಕ ಈಗ ಮತ್ತೊಂದು ಭರ್ಜರಿ ದಾಖಲೆ ಬರೆದಿದೆ 'ಕೆಜಿಎಫ್ 2'. ಹೊಸ ದಾಖಲೆಯ ವಿಷಯವನ್ನು ಕೆಜಿಎಫ್ 2 ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲಮ್ಸ್ ಹೆಮ್ಮೆಯಿಂದ ಹಂಚಿಕೊಂಡಿದೆ.

'ಕೆಜಿಎಫ್ 2' ಸಿನಿಮಾದ ಟ್ರೇಲರ್‌ಗೆ ಯೂಟ್ಯೂಬ್‌ನಲ್ಲಿ ಹತ್ತು ಲಕ್ಷಕ್ಕೂ ಹೆಚ್ಚು ಜನ ಕಮೆಂಟ್ ಮಾಡಿದ್ದಾರೆ. ಭಾರತದ ಇನ್ನಾವುದೇ ಟ್ರೇಲರ್‌ಗೆ ಇಷ್ಟೋಂದು ಕಮೆಂಟ್ಸ್ ಬಂದಿರುವ ಉದಾಹರಣೆ ಇಲ್ಲ. 'ಕೆಜಿಎಫ್ 2' ಟ್ರೇಲರ್ ಅನ್ನು 18 ಕೋಟಿಗೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಇದೂ ಸಹ ದಾಖಲೆಯೇ.
ಹಲವಾರು ದಾಖಲೆಗಳು ಈಗಾಗಲೇ 'ಕೆಜಿಎಫ್ 2' ಖಾತೆಯಲ್ಲಿದೆ. ಬುಕ್ ಮೈ ಶೋನಲ್ಲಿ ಅತಿ ಹೆಚ್ಚು ಜನ ನೋಡಲು ಬಯಸಿರುವ ಸಿನಿಮಾ ಸಹ 'ಕೆಜಿಎಫ್ 2' ಆಗಿದೆ.
Recommended Video
ಯಶ್, ಸಂಜಯ್ ದತ್, ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ ಇನ್ನೂ ಹಲವಾರು ಪ್ರಮುಖ ನಟರು ನಟಿಸಿರುವ 'ಕೆಜಿಎಫ್ 2' ಸಿನಿಮಾ ಜುಲೈ 16ಕ್ಕೆ ಬಿಡುಗಡೆ ಆಗಲು ಸಜ್ಜಾಗಿತ್ತು. ಆದರೆ ಈ ಮಧ್ಯೆ ಕೊರೊನಾ ಬಂದಿರುವ ಕಾರಣ ಸಿನಿಮಾದ ಬಿಡುಗಡೆ ತುಸು ತಡವಾಗುವ ಸಾಧ್ಯತೆ ಇದೆ.


Click it and Unblock the Notifications











