ದರ್ಶನ್ ಹುಟ್ಟುಹಬ್ಬಕ್ಕೆ ಅಭಿಮಾನಿಯ ಉಡುಗೊರೆ: 2560kg ತರಕಾರಿ ದಾನ!

ನಟ ಚಾಲೆಂಜಿಂಗ್ ಸ್ವಾರ್ ದರ್ಶನ್ ಹುಟ್ಟುಹಬ್ಬಕ್ಕೆ ದಿನಗಣನೆ ಶುರುವಾಗಿದೆ. ಅಭಿಮಾನಿಗಳು ಬೆಟಾಲಿಯನ್ ಜೊತೆಗೆ ಸಂಭ್ರಮಕ್ಕೆ ರೆಡಿ ಆಗುತ್ತಿದ್ದಾರೆ. ತಿಂಗಳಿಗೂ ಮೊದಲೇ ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಹೇಗೆ ಆಚರಿಸಬೇಕು ಎನ್ನುವ ಯೋಜನೆಯನ್ನು ಅಭಿಮಾನಿಗಳು ಹಾಕಿಕೊಂಡಿದ್ದಾರೆ.

Recommended Video

ದರ್ಶನ್ ಅಭಿಮಾನಿಗಳಿಂದ ವಿಶೇಷ ಅಭಿಯಾನ

ಈ ಬಾರಿ ದರ್ಶನ್ ಅಭಿಮಾನಿಗಳು ವಿಶೇಷವಾದ ಯೋಜನೆ ಒಂದನ್ನು ಕೈ ಗೊಂಡಿದ್ದಾರೆ. ದರ್ಶನ್ ಅವರ ಹುಟ್ಟುಹಬ್ಬದ ಪ್ರಯುಕ್ತ ತಮ್ಮ ಕೈಲಾದ ಸಹಾಯ ಮಾಡಲು ಮುಂದಾಗಿದ್ದಾರೆ. ದಾನ ಮಾಡುವ ಮೂಲಕ ದರ್ಶನ್ ಹುಟ್ಟುಹಬ್ಬವನ್ನು ಅರ್ಥ ಪೂರ್ಣವಾಗಿ ಆಚರಿಸಲು ಮುಂದಾಗಿದ್ದಾರೆ.

ಈ ನಿಟ್ಟಿನಲ್ಲಿ ದರ್ಶನ್ ಅಭಿಮಾನಿಗಳು ಮೊದಲ ಹೆಜ್ಜೆ ಇಟ್ಟಿದ್ದಾರೆ. ಹುಟ್ಟುಹಬ್ಬಕ್ಕೆ ಇನ್ನೂ 9 ದಿನಗು ಬಾಕಿ ಇವೆ. ಆದರೆ ಈಗಾಗಲೇ ದರ್ಶನ್ ಹುಟ್ಟುಹಬ್ಬಕ್ಕೆ ಮಾಡಬೇಕಾದ ಕೆಲಸಗಳು ಆರಂಭ ಆಗಿವೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿಯೂ ಹೆಚ್ಚು ಚರ್ಚೆ ಆಗುತ್ತುದೆ.

ದರ್ಶನ್ ಹುಟ್ಟುಹಬ್ಬಕ್ಕೆ ದಿನಗಣನೆ!

ದರ್ಶನ್ ಹುಟ್ಟುಹಬ್ಬಕ್ಕೆ ದಿನಗಣನೆ!

ನಟ ದರ್ಶನ್ ಅವರ ಹುಟ್ಟುಹಬ್ಬ ಬಂತು ಅಂದರೆ ಸಾಕು, ಅವರ ಅಭಿಮಾನಿಗಳು ದಾಸನಿಗೆ ಯಾವ ಗಿಫ್ಟ್ ಕೊಡಬೇಕು ಎನ್ನುವ ಚಿಂತೆಗೆ ಜಾರುತ್ತಾರೆ. ಆದರೆ ಇತ್ತೀಚೆಗೆ ದರ್ಶನ್ ಹುಟ್ಟುಹಬ್ಬಕ್ಕೆ ದವಸ, ಧಾನ್ಯಗಳೇ ಹರಿದು ಬರ್ತಿವೆ. ದರ್ಶನ್ ಅವರಿಗೆ ದುಬಾರಿ ಗಿಫ್ಟ್ ತರುವ ಬದಲು ಧಾನ್ಯಗಳನ್ನು ಕೊಟ್ಟರೆ ಅದು ಅನಾಥಾಶ್ರಮ ಸೇರಿದಂತೆ, ಹಲವು ಆಶ್ರಮಗಳಿಗೆ ಸೇರುತ್ತದೆ. ಇದನ್ನು ಹಲವು ಬಾರಿ ದರ್ಶನ್ ಕೂಡ ಹೇಳಿದ್ದಾರೆ. ಅಂತೆಯೇ ದರ್ಶನ್ ಅಭಿಮಾನಿಗಳು ಇದೇ ಮಾರ್ಗದಲ್ಲಿ ನಡೆಯುತ್ತಿದ್ದು, ಈ ವರ್ಷವೂ ಅರ್ಥಪೂರ್ಣವಾಗಿ ದರ್ಶನ್ ಅವರ ಹುಟ್ಟುಹಬ್ಬವನ್ನು ಆಚರಿಸಲು ಸಜ್ಜಾಗಿದ್ದಾರೆ.

ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ 2560 KG ತರಕಾರಿ ದಾನ!

ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ 2560 KG ತರಕಾರಿ ದಾನ!

ದರ್ಶನ್ ಅವರ ಹುಟ್ಟುಹಬ್ಬ ಹತ್ತಿರ ಬರುತ್ತಿದ್ದ ಹಾಗೆ, ಅವರ ಅಭಿಮಾನಿಗಳು ಕೂಡ ಅರ್ಥಪೂರ್ಣವಾಗಿ ಹುಟ್ಟುಹಬ್ಬ ಆಚರಿಸಲು ಮುಂದಾಗಿದ್ದಾರೆ. ಹೊಸ ಕೋಟೆ ಮೂಲದ ಅಭಿಮಾನಿ ಒಬ್ಬರು ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ದರ್ಶನ್ ಅವರ ಹೆಸರಲ್ಲಿ ತರಕಾರಿ ದಾನ ಮಾಡಿದ್ದಾರೆ. ಸುಮಾರು 2560 ಕೆಜಿಯ 65 ಸಾವಿರ ಬೆಲೆಯ ತರಕಾರಿ ಕೊಟ್ಟಿದ್ದಾರೆ. ಇದನ್ನೆ ದರ್ಶನ್ ಅವರ ಹುಟ್ಟುಹಬ್ಬಕ್ಕೆ ಗಿಫ್ಟ್ ಆಗಿ ನೀಡಿದ್ದಾರೆ ಹೊಸಕೋಟೆಯ ಅಭಿಮಾನಿ.

ಟ್ರೆಂಡ್ ಹುಟ್ಟು ಹಾಕಲು ಸಜ್ಜಾದ ದರ್ಶನ್ ಅಭಿಮಾನಿಗಳು!

ಟ್ರೆಂಡ್ ಹುಟ್ಟು ಹಾಕಲು ಸಜ್ಜಾದ ದರ್ಶನ್ ಅಭಿಮಾನಿಗಳು!

ಈ ಬಾರಿ ತಮ್ಮ ನೆಚ್ಚಿನ ನಾಯಕ ಹುಟ್ಟುಹಬ್ಬವನ್ನು ವಿಶೇಷಗೊಳಿಸಲು ಹೊಸ ಯೋಜನೆ ಕೈಗೊಂಡಿದ್ದಾರೆ ದರ್ಶನ್ ಅಭಿಮಾನಿಗಳು. ದರ್ಶನ್ ಬಾಸ್ ಅಭಿಮಾನಿಗಳ ಸಂಘದ ಸಾಮಾಜಿಕ ಜಾಲತಾಣದ ನಿರ್ವಾಹಕರಿಂದ ಪತ್ರ ಒಂದು ಬಿಡುಗಡೆ ಮಾಡಲಾಗಿತ್ತು. ದರ್ಶನ್ ಅವರ ಅಧಿಕೃತ ಅಭಿಮಾನಿ ಸಂಘವಾದ 'ಡಿ ಕಂಪನಿ' ಕಡೆಯಿಂದ ಎಲ್ಲಾ ಅಭಿಮಾನಿಗೆ ಬಹಿರಂಗ ಪತ್ರ ಬರೆದು ಈ ಮೂಲಕ ಟ್ವಿಟ್ಟರ್‌ನಲ್ಲಿ ದೊಡ್ಡ ಮಟ್ಟದ ಟ್ರೆಂಡ್ ಸೃಷ್ಟಿಸಲು ದರ್ಶನ್ ಅಭಿಮಾನಿಗಳು ಪಣ ತೊಟ್ಟಿದ್ದಾರೆ.

ದರ್ಶನ್ ಹುಟ್ಟುಹಬ್ಬಕ್ಕೆ ಕ್ರಾಂತಿ ಚಿತ್ರದ ಅಪ್ಡೇಟ್ ಬರಲಿದೆ!

ದರ್ಶನ್ ಹುಟ್ಟುಹಬ್ಬಕ್ಕೆ ಕ್ರಾಂತಿ ಚಿತ್ರದ ಅಪ್ಡೇಟ್ ಬರಲಿದೆ!

ಇನ್ನು ದರ್ಶನ್ ಅವರ ಹುಟ್ಟುಹಬ್ಬಕ್ಕೆ ಕ್ರಾಂತಿ ಚಿತ್ರದ ಅಪ್ಡೇಟ್ ಹೊರ ಬೀಳಲಿದೆ. ಕ್ರಾಂತಿ ಚಿತ್ರದಲ್ಲಿನ ದಶರ್ನ್ ಅವರ ಲುಕ್‌ ರಿವೀಲ್ ಆಗಲಿದೆ ಎನ್ನಲಾಗುತ್ತಿದೆ. ದರ್ಶನ್ ಫಸ್ಟ್ ಲುಕ್ ಟೀಸರ್ ರಿಲೀಸ್ ಆಗಲಿದೆ. ಇದಕ್ಕಾಗಿ ದರ್ಶನ್ ಅಭಿಮಾನಿಗಳು ಕೂಡ ಕಾಯುತ್ತಿದ್ದಾರೆ.

More from Filmibeat

English summary
Actor Darshan Fan Donate 2560 Kg Vegetables For shree Kshethra Dharmasthala Is Darshan Birthday Gift
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X