ಸ್ಯಾಂಡಲ್‌ವುಡ್ ಡ್ರಗ್ಸ್ ಪ್ರಕರಣದ ಆರೋಪಿ ಡ್ಯಾನ್ಸರ್ ಕಿಶೋರ್‌ ಶರ್ಟ್ ಬಿಚ್ಚಿಸಿದ ಕಮೀಷನರ್

By ಮಂಗಳೂರು ಪ್ರತಿನಿಧಿ

ಸ್ಯಾಂಡಲ್ ವುಡ್ ಡ್ರಗ್ ಪ್ರಕರಣದಲ್ಲಿ ರಾಜ್ಯದ ಗಮನಸೆಳೆದ ಪ್ರಮುಖ ಆರೋಪಿಯಾಗಿ ಬಂಧಿತನಾಗಿದ್ದ ಮಂಗಳೂರಿನ ಡ್ಯಾನ್ಸರ್ ಕಿಶೋರ್ ಅಮನ್ ಶೆಟ್ಟಿಯನ್ನು ಪರೇಡ್ ವೇಳೆ ಪೊಲೀಸ್ ಕಮಿಷನರ್ ಎನ್‌.ಶಶಿಕುಮಾರ್ ಚಳಿ ಬಿಡಿಸಿದ್ದಾರೆ.

ಮಂಗಳೂರಿನ ಪೊಲೀಸ್ ಗ್ರೌಂಡ್ ನಲ್ಲಿ ರೌಡಿ ಪರೇಡ್ ನಲ್ಲಿ ಡ್ರಗ್ಸ್ ಪ್ರಕರಣದ ಆರೋಪಿಯಾಗಿದ್ದ ಡ್ಯಾನ್ಸರ್ ಕಿಶೋರ್ ಅಮನ್ ಶೆಟ್ಟಿಯ ಅಂಗಿ ಬಿಚ್ಚಿಸಿ ಆತನ ಕತ್ತಿನಲ್ಲಿದ್ದ ಚೈನುಗಳ ಬಗ್ಗೆ, ಆತನ ಎದೆಯ ಮೇಲಿದ್ದ ಟ್ಯಾಟೂ ನೊಡಿ 'ಏನಪ್ಪಾ ಮೈ ಮೇಲೆ ಇಷ್ಟು ಟ್ಯಾಟೋ ಹಾಕಿಸಿಕೊಂಡಿದ್ಯಾ' ಎಂದು ಪ್ರಶ್ನಿಸಿದ್ದಾರೆ.

ತಾಯಿಯ ಟ್ಯಾಟೂ ಹಾಕಿರುವೆ ಎಂದ ಕಿಶೋರ್ ಅಮನ್ ಶೆಟ್ಟಿಗೆ 'ಮಾಡೋದೆಲ್ಲಾ ಮಾಡಿ ತಾಯಿಯದ್ದು ಯಾಕೆ ಹಾಕಿಸಿಕೊಂಡಿದ್ದೀಯಾ‌. ನೆಟ್ಟಗೆ ಬಾಳಿದರೆ ಸಾಕು ಹಚ್ಚೆ ಹಾಕಿಸಿಕೊಳ್ಳಬೇಕಿಲ್ಲ. ಎಲ್ಲಿಂದ ಡ್ರಗ್ಸ್ ಸಪ್ಲೈ ಮಾಡಿಕೊಂಡಿದ್ದಿ. ನೀನೇ ತಿನ್ನೋದಾ ಅಥವಾ ಬೇರೆಯವರಿಗೆ ತಿನ್ನಿಸುತ್ತಿಯಾ?' ಎಂದು ಜೋರಾಗಿ ಗದರಿಸಿದ್ದಾರೆ‌.

ಅಲ್ಲದೆ ಆತ ಉದ್ದ ಕೂದಲು ಬಿಟ್ಟಿದ್ದನ್ನು, ಕಣ್ಣು-ಕಿವಿ-ಬಾಯಿ ಬಳಿ ಚುಚ್ಚಿಸಿರೋದನ್ನು ಪ್ರಶ್ನಿಸಿದ ಕಮೀಷನರ್ ಗೆ ಡ್ಯಾನ್ಸ್ ಗಾಗಿ ಈ ರೀತಿ ಮಾಡಿಕೊಂಡಿದ್ದೇನೆ ಎಂದು ಕಿಶೋರ್ ಅಮನ್ ಶೆಟ್ಟಿ ಹೇಳಿದ್ದಾನೆ.

ಕಿಶೋರ್ ಶರ್ಟ್‌ ಬಿಚ್ಚಿಸಿದ ಡಿಸಿಪಿ ಅಂಶುಕುಮಾರ್

ಕಿಶೋರ್ ಶರ್ಟ್‌ ಬಿಚ್ಚಿಸಿದ ಡಿಸಿಪಿ ಅಂಶುಕುಮಾರ್

ನಂತರ ಡಿಸಿಪಿ ಅಂಶುಕುಮಾರ್ ಕಿಶೋರ್ ಶೆಟ್ಟಿಯ ಶರ್ಟ್ ಬಿಚ್ಚಿಸಿದ್ದಾರೆ. ಕಿಶೋರ್ ಕುತ್ತಿಗೆಯಲ್ಲಿದ್ದ ವಿವಿಧ ಸರಗಳನ್ನು ಗಮನಿಸಿದ ಡಿಸಿಪಿ ಅಂಶುಕುಮಾರ್, ಇದು ಚಿನ್ನದ್ದಾ ಅಲ್ಲಾ ಪ್ಲಾಟಿನಂ ದ್ದಾ ಅಂತಾ ಕೇಳಿದ್ದಾರೆ. ಈ ವೇಳೆ‌ ಕಿಶೋರ್ ಇದು ಜಸ್ಟ್ ಫ್ಯಾಷನ್ ಗಾಗಿ ಅಂತಾ ಹೇಳಿದ್ದಾನೆ.

ಡ್ರಗ್ಸ್ ಯಾವಾಗ ಪಡೆದಿದ್ದೆ? ಎಂದ ಆಯುಕ್ತ ಶಶಿಕುಮಾರ್

ಡ್ರಗ್ಸ್ ಯಾವಾಗ ಪಡೆದಿದ್ದೆ? ಎಂದ ಆಯುಕ್ತ ಶಶಿಕುಮಾರ್

ಡ್ರಗ್ಸ್ ಪಡೆದ ಬಗ್ಗೆ ಕಿಶೋರ್ ಅಮನ್ ಶೆಟ್ಟಿಯ ವಿಚಾರಣೆ ಮಾಡಿದ ಕಮೀಷನರ್ ಎನ್ ಶಶಿಕುಮಾರ್, ''ಡ್ರಗ್ಸ್ ಯಾವಾಗ ಕೊನೆಯದಾಗಿ ಪಡೆದಿದ್ದೀಯಾ? ನೀನು ಡ್ರಗ್ಸ್ ಸಾಗಾಟ ಮಾಡಿದ್ದಾ? ಡ್ರಗ್ಸ್ ಪಡೆದಿದ್ದಾ? ನೀನು ಹೇಗೆ ಡ್ರಗ್ಸ್ ಸೇವನೆ ಮಾಡಿದ್ದು ಅಂತಾ ಕಮೀಷನರ್ ಕಿಶೋರ್ ಕುಮಾರ್ ನನ್ನು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಕಿಶೋರ್ ಒಮ್ಮೆ ಮಾತ್ರ ಸೇವನೆ ಮಾಡಿದ್ದು, ಅದು ನೀರಿನಲ್ಲಿ ಅಂತಾ ಹೇಳಿದ್ದಾನೆ.

ಡ್ಯಾನ್ಸ್ ಸ್ಪರ್ಧೆಯ ಜಡ್ಜ್ ಆಗಿರುವ ಕಿಶೋರ್

ಡ್ಯಾನ್ಸ್ ಸ್ಪರ್ಧೆಯ ಜಡ್ಜ್ ಆಗಿರುವ ಕಿಶೋರ್

ಎಲ್ಲಾ ಕ್ರಿಮಿನಲ್ ಗಳ ಜೊತೆ ಕಿಶೋರ್ ಶೆಟ್ಟಿ ಯೂ ಮೈದಾನದಲ್ಲಿ ನಡೆದ ಪರೇಡ್ ನಲ್ಲಿ ಲೆಫ್ಟ್ ರೈಟ್ ಹೆಜ್ಜೆ ಹಾಕಿದ್ದಾನೆ‌. ಕಿಶೋರ್ ಶೆಟ್ಟಿ ಸ್ಯಾಂಡಲ್ ವುಡ್ ಡ್ರಗ್ಸ್ ಕೇಸ್ ಸಂಧರ್ಭದಲ್ಲಿ ಕಿಶೋರ್ ಅಮನ್ ಶೆಟ್ಟಿ ಯನ್ನು ಡ್ರಗ್ಸ್ ಸೇವನೆ ಪ್ರಕರಣ ದಲ್ಲಿ ಬಂಧನ ಮಾಡಲಾಗಿತ್ತು. ಕಿಶೋರ್ ಜೊತೆ ರಾಜ್ಯದ ಖ್ಯಾತ ನಿರೂಪಕಿಯೋರ್ವರ ಹೆಸರೂ ತಳುಕು ಹಾಕಿಕೊಂಡಿತ್ತು. ಡ್ಯಾನ್ಸ್ ಕೊರಿಯೋಗ್ರಾಫಿ ಮಾಡುವ ಸಂಧರ್ಭದಲ್ಲಿ ಆ ನಿರೂಪಕಿಯೂ ಡ್ರಗ್ಸ್ ಸೇವನೆ ಮಾಡಿದ ಬಗ್ಗೆ ಸುದ್ದಿಯಾಗಿತ್ತು. ಕಿಶೋರ್ ಬಂಧನವಾಗಿ ಕೆಲ ಕಾಲ ಜೈಲಿನೊಳಗಿದ್ದ. ಸದ್ಯ ಜಾಮೀನು ಮೇಲೆ ಹೊರಗೆ ಬಂದಿರುವ ಕಿಶೋರ್ ಸದ್ಯ, ಮಂಗಳೂರಿನ ಖಾಸಗಿ ಟಿವಿ ವಾಹಿನಿಯೊಂದರ ಡ್ಯಾನ್ಸ್ ಸ್ಪರ್ಧೆಯ ಜಡ್ಜ್ ಆಗಿದ್ದಾನೆ.

ಅನುಶ್ರೀ ಹೆಸರು ಹೊರಬಂದಿತ್ತು

ಅನುಶ್ರೀ ಹೆಸರು ಹೊರಬಂದಿತ್ತು

ಪೊಲೀಸ್ ಪರೇಡ್‌ನಲ್ಲಿ ಪೊಲೀಸ್ ಆಯುಕ್ತರು ಕಿಶೋರ್‌ನ ಶರ್ಟ್ ಬಿಚ್ಚಿಸಿದ ವಿಡಿಯೋ ವೈರಲ್ ಆಗಿದೆ. ಸ್ಯಾಂಡಲ್‌ವುಡ್ ಡ್ರಗ್ಸ್ ಪ್ರಕರಣ ತೀವ್ರಗತಿಯಲ್ಲಿ ತನಿಖಾ ಹಂತದಲ್ಲಿರುವಾಗ ಡ್ಯಾನ್ಸರ್ ಕಿಶೋರ್, ಮಾದಕ ವಸ್ತುವಿನ ಜೊತೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದ. ರಾಗಿಣಿ, ಸಂಜನಾ ಇತರರು ಬಂಧಿತರಾಗಿದ್ದ ಪ್ರಕರಣದೊಂದಿಗೆ ಈತನಿಗೆ ಸಂಪರ್ಕ ಇರಲಿಲ್ಲವಾದರೂ, ಈತನ ಬಂಧನದಿಂದ ನಿರೂಪಕಿ ಅನುಶ್ರೀಯ ವಿಷಯ ಹೊರಬಿತ್ತು. ನಿರೂಪಕಿ ಅನುಶ್ರೀ ಸಹ ಕಿಶೋರ್ ಜೊತೆ ಮಾದಕ ವಸ್ತು ಸೇವಿಸಿದ್ದರು ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ಅನುಶ್ರೀಯ ಮೇಲೆ ಚಾರ್ಜ್‌ಶೀಟ್ ಹಾಕಲಿಲ್ಲ ಪೊಲೀಸರು.

More from Filmibeat

English summary
One of the sandalwood drug case accused Dancer Kishore participated in rowdy parade Mangalore. Police commissioner questioned him about drugs, his current work, style and other things.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X