ರಾಮ್ - ಜಾನು ಲವ್ ಸ್ಟೋರಿಗೆ ವರ್ಷದ ಸಂಭ್ರಮ
'96' ಸಿನಿಮಾ ಕಾಲಿವುಡ್ ಇಂಡಸ್ಟ್ರಿಯಲ್ಲಿ ಬಂದ ಬೆಸ್ಟ್ ಲವ್ ಸ್ಟೋರಿಗಳಲ್ಲಿ ಒಂದು. ಈ ಸಿನಿಮಾ ಇಂದು ಒಂದು ವರ್ಷದ ಸಂಭ್ರಮದಲ್ಲಿ ಇದೆ.
ಅಕ್ಟೋಬರ್ 4, 2018 ರಲ್ಲಿ '96' ಸಿನಿಮಾ ಬಿಡುಗಡೆ ಆಗಿತ್ತು. ವಿಜಯ್ ಸೇತುಪತಿ ಮತ್ತು ತ್ರಿಷಾ ಕೃಷ್ಣನ್ ಚಿತ್ರದಲ್ಲಿ ನಟಿಸಿದ್ದರು. ರಾಮ್ ಹಾಗೂ ಜಾನು ಪಾತ್ರಕ್ಕೆ ಇಬ್ಬರು ಜೀವ ತುಂಬಿದ್ದರು. ಈ ಪಾತ್ರಗಳೆ ಸಿನಿಮಾದ ಹೈಲೈಟ್ ಆಗಿತ್ತು.
ನೈಜತೆಯಿಂದ ಕೂಡಿದ್ದ ಸಿನಿಮಾ ಪ್ರೇಮಿಗಳಿಗೆ ಬಹಳ ಹತ್ತಿರ ಆಯ್ತು. ಅದೇ ಕಾರಣದಿಂದ ಸಿನಿಮಾ ಯಶಸ್ವಿಯಾಗಿ ನೂರು ದಿನ ಪೂರೈಸಿತು. ವಿಜಯ್ ಸೇತುಪತಿ ಹಾಗೂ ತ್ರಿಷಾ ಕೃಷ್ಣನ್ ಇಬ್ಬರ ಕೆರಿಯರ್ ನಲ್ಲಿ '96' ಸಿನಿಮಾ ಮರೆಯಲಾಗದಂತೆ ಆಯ್ತು.

ಸಿ ಪ್ರೇಮ್ ಕುಮಾರ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಗೊವಿಂದ್ ವಸಂತ್ ತಮ್ಮ ಸಂಗೀತದ ಮೂಲಕ ಸಿನಿಮಾಗೆ ಶಕ್ತಿ ತುಂಬಿತ್ತು. ಇದರ ಜೊತೆಗೆ ಶಾಲಾ ಬಾಲಕಿಯಾಗಿ ಕಾಣಿಸಿಕೊಂಡ ಗೌರಿ ಹಾಗೂ ಬಾಲಕ ಆದಿತ್ಯ ಬಾಸ್ಕರ್ ನಟನೆಗೆ ಒಳ್ಳೆಯ ಮಾತುಗಳು ಕೇಳಿಬಂದವು.
ಈ ಸಿನಿಮಾ ಕನ್ನಡದಲ್ಲಿ '99' ಎಂಬ ಹೆಸರಿನಲ್ಲಿ ರಿಮೇಕ್ ಆಗಿದೆ. ಗಣೇಶ್ ಹಾಗೂ ಭಾವನ ಸಿನಿಮಾದಲ್ಲಿ ನಟಿಸಿದ್ದಾರೆ.
ಅಂದಹಾಗೆ, ತಮ್ಮ ಸಿನಿಮಾದ ಒಂದು ವರ್ಷದ ಸಂಭ್ರಮವನ್ನು ವಿಜಯ್ ಸೇತುಪತಿ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಹಂಚಿಕೊಂಡಿದ್ದಾರೆ.


Click it and Unblock the Notifications











