ನಮ್ಮ ಪ್ರಚಂಡಕುಳ್ಳ ದ್ವಾರ್ಕಿಗೆ ಅಭಿನಂದನೆಗಳು
ಮೂರನೆಯದು ಅವರ ಬ್ಯಾನರ್‌ನಿಂದ ಮೂರು ಭಾಷೆಗಳಲ್ಲಿ ನಿರ್ಮಾಣವಾಗಿರುವ 'ಚಾರುಲತಾ' ಇನ್ನೇನು ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಈ ಮೂರು ಸಿಹಿ ಸುದ್ದಿಗಳನ್ನೂ ಒಂದೇ ವೇದಿಕೆ ಮೇಲೆ ಹಂಚಿಕೊಳ್ಳಲು ಅವರೀಗ ಸಜ್ಜಾಗಿ ನಿಂತುಕೊಂಡಿದ್ದಾರೆ.
ಇದೇ ಸೋಮವಾರ [ಆಗಸ್ಟ್ 20] ದ್ವಾರಕೀಶ್ ಅಭಿನಂದನಾ ಸಮಾರಂಭಕ್ಕೆ ಸಿದ್ಧತೆಗಳಾಗಿವೆ. ತಮ್ಮ ಹಿತೈಷಿ ಹಾಗೂ ಮಾಧ್ಯಮದವರ ಸಮ್ಮುಖ ದ್ವಾರಕೀಶ್ ಈ ಸಂತೋಷ ಹಂಚಿಕೊಳ್ಳಲಿದ್ದಾರೆ. ಹೀರೋಗಳಿಗೆ ಸೀಮಿತವಾದ ಅಭಿನಂದನೆಗಳು ನಮ್ಮನ್ನು ನಕ್ಕು ನಲಿಸಿದವರಿಗೂ ದಕ್ಕುತ್ತಿರುವುದು ಸಂತೋಷ.
ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ವಾಮನ ರೂಪದಿ ಬಂದು ತ್ರಿವಿಕ್ರಮನಾಗಿ ಬೆಳೆದ ದ್ವಾರಕೀಶ್ ಸಾಧನೆ ಅಪೂರ್ವವಾದ್ದು ಮತ್ತು ಸ್ತುತ್ಯಾರ್ಹವಾದದ್ದು. ಚಿತ್ರರಂಗದಲ್ಲಿ ಐವತ್ತು ವರ್ಷಗಳನ್ನ ಸವೆಸುವುದು ಅಷ್ಟು ಸುಲಭವಾದದ್ದಲ್ಲ.
ಅಲ್ಲದೆ ಇವತ್ತಿಗೂ ಸಕ್ರಿಯವಾಗುಳಿಯುವುದು ದ್ವಾರಕೀಶ್ ರಂಥವರಿಗೆ ಮಾತ್ರ ಸಾಧ್ಯವಾಗುವಂಥದ್ದು. ಈ ಐವತ್ತು ವರ್ಷಗಳಲ್ಲಿ ದ್ವಾರಕೀಶ್ ಬೇರೆ ಬೇರೆ ರೂಪಾಂತರಗಳನ್ನ ಹೊಂದಿದರು. ನಟನಾಗಿ ಪ್ರವೇಶ ಪಡೆದವರು ನಿರ್ಮಾಪಕನಾದರು, ನಿರ್ದೇಶನದಲ್ಲೂ ಸೈ ಎನ್ನಿಸಿಕೊಂಡರು. ಹೊಸ ಹೊಸ ಪ್ರತಿಭೆಗಳನ್ನ ಚಿತ್ರರಂಗಕ್ಕೆ ಪರಿಚಯಿಸಿದರು.
ಯಶಸ್ಸಿನ ಉತ್ತುಂಗದಲ್ಲಿದ್ದ ದ್ವಾರಕೀಶ್, ಆಮೇಲೆ ಪಾತಾಳಕ್ಕೆ ಬಿದ್ದು ಚಡಪಡಿಸಿದ್ದೂ ಇದೆ. ಆದರೆ ಅವನ್ನೆಲ್ಲ ಮೆಟ್ಟಿ ನಿಂತ ಈ ಕುಳ್ಳ, ಇವತ್ತು ಬದುಕಿನ ಉಜ್ವಲ ಭೂಮಿಕೆಯಲ್ಲಿ ನೆಲೆಗೊಂಡಿದ್ದಾರೆ. ಅದು ಅವರ ಛಲ ಹಠಕ್ಕೆ ಸಾಕ್ಷಿ. ಅದೇ ಅವರನ್ನ ಪಾತಾಳದಿಂದ ಮತ್ತೆ ನೆಲಕ್ಕೆ ತಂದು ನಿಲ್ಲಿಸಿದಂಥದ್ದು.
ನಲವತ್ತಕ್ಕೂ ಹೆಚ್ಚು ಚಿತ್ರಗಳನ್ನ ಕನ್ನಡ ಚಿತ್ರರಂಗಕ್ಕೆ ಕೊಡುಗೆಯಾಗಿ ನೀಡಿರುವ ದ್ವಾರಕಿಶ್‌ರ ಎಷ್ಟೋ ಸಿನಿಮಾಗಳು, ಯಾವತ್ತಿಗೂ ಹಸಿರಾಗಿ ಉಳಿವಂಥ ಕ್ಲಾಸಿಕ್ ಚಿತ್ರಗಳೆಂದೇ ಕರೆಯಿಸಿಕೊಂಡಿವೆ. ಅದು ಅವರ ಸಾಧನೆಗೆ ಸಾಕ್ಷಿ. ಇಂಥ ದ್ವಾರಕೀಶ್ ಒಂದು ಕಡೆ ತಮ್ಮ ಜೀವಿತದ ಎಪ್ಪತ್ತನೇ ವರ್ಷಾಚರಣೆಯ ಸಂಭ್ರಮದಲ್ಲಿದ್ದರೆ, ಮತ್ತೊಂದು ಕಡೆ ಅವರ ಸಿನಿಮಾ ಜೀವನ ಐವತ್ತು ವಸಂತಗಳನ್ನ ಪೂರೈಸಿ ನಿಂತಿದೆ.
ಇಂಥ ಅಪರೂಪದ ಸಂದರ್ಭದಲ್ಲಿ ದ್ವಾರಕೀಶ್ ಬಂಧು- ಮಿತ್ರರು, ಅವರ ಅಭಿಮಾನಿಗಳು ಸೇರಿಕೊಂಡು ದ್ವಾರಕಿಶ್‌ಗೊಂದು ಅಭಿನಂದನೆ ಹೇಳಲು ವೇದಿಕೆ ಸಿದ್ಧಪಡಿಸಿದ್ದಾರೆ. ಕುಳ್ಳನಿಗೆ ಶುಭಾಶಯಗಳು. (ಒನ್ ಇಂಡಿಯಾ ಕನ್ನಡ)


Click it and Unblock the Notifications












