»   » ರಾಜಕೀಯವೂ ಬೇಡ, ಸಿನೆಮಾನೂ ಬೇಡ, ಮದುವೆಯಾಗಿ 'ರಮ್ಯ'ವಾಗಿರಲಿ!

ರಾಜಕೀಯವೂ ಬೇಡ, ಸಿನೆಮಾನೂ ಬೇಡ, ಮದುವೆಯಾಗಿ 'ರಮ್ಯ'ವಾಗಿರಲಿ!

Posted By:
Subscribe to Filmibeat Kannada

ಗಾಂಧಿನಗರದಲ್ಲಿ 'ಊರಿಗೊಬ್ಳೇ ಪದ್ಮಾವತಿ..' ಎನ್ನುವ ಹಾಗೆ 'ಸ್ಯಾಂಡಲ್ ವುಡ್ ಕ್ವೀನ್' ಆಗಿ ಮೆರೆಯುತ್ತಿದ್ದ ರಮ್ಯಾ ಏಕ್ದಂ ರಾಜಕೀಯಕ್ಕೆ ಧುಮುಕಿದರು.

ಒಂದೇ ಏಟಿಗೆ ಮಂಡ್ಯ ಜಿಲ್ಲೆಯಿಂದ ಸಂಸದೆ ಆಗಿ ಆಯ್ಕೆ ಆದ ರಮ್ಯಾ, ಅಷ್ಟೇ ಬೇಗ ಮನೆ ಸೇರಿದರು. ರಾಜಕೀಯಕ್ಕೆ ಬಂದ್ಮೇಲೆ ಸಿನಿಮಾಗೆ 'ಟಾಟಾ ಬೈಬೈ' ಹೇಳಿದ ರಮ್ಯಾ ಈಗ 'ಇತ್ತ ಇಲ್ಲೂ ನಿಲ್ಲದೇ, ಅತ್ತ ಅಲ್ಲೂ ಇರದ' ಪರಿಸ್ಥಿತಿಯಲ್ಲಿದ್ದಾರೆ.

ಇದೇ ಗ್ಯಾಪ್ ನಲ್ಲಿ ಸಚಿವ ಸ್ಥಾನದಿಂದ ರೆಬೆಲ್ ಸ್ಟಾರ್ ಅಂಬರೀಶ್ ರವರನ್ನ ಕೈಬಿಟ್ಟ ಬೆನ್ನಲ್ಲೇ, 'ಹಿಂಬಾಗಿಲ' ಮೂಲಕ ನಟಿ ರಮ್ಯಾ ಕ್ಯಾಬಿನೆಟ್ ಸೇರ್ತಾರೆ ಅಂತ ಕಾಂಗ್ರೆಸ್ ವಲಯದಲ್ಲಿ ಗುಲ್ಲೆದ್ದಿದೆ. [ಸ್ಯಾಂಡಲ್ ವುಡ್ ಗೆ ಬಾಯ್ ಬಾಯ್ ಹೇಳಿದ ಲಕ್ಕಿ ಸ್ಟಾರ್ ರಮ್ಯಾ]

ನಟಿ ರಮ್ಯಾಗೆ ಕ್ಯಾಬಿನೆಟ್ ದರ್ಜೆ ಸಿಗುತ್ತೋ, ಬಿಡುತ್ತೋ ಸದ್ಯಕ್ಕೆ ಪಕ್ಕಾ ಆಗಿಲ್ಲ. ಒಂದ್ವೇಳೆ ಅವರು ಮಿನಿಸ್ಟರ್ ಆದ್ರೆ ನಿಮ್ಮ ಅಭಿಪ್ರಾಯ ಏನು.? ರಮ್ಯಾ ರಾಜ್ಯ ರಾಜಕೀಯದಲ್ಲಿ ಇದ್ರೆ ಚೆಂದ ಅನ್ಸುತ್ತಾ? ಅಥವಾ ಮುಂಚಿನ ಹಾಗೆ ಬರೀ ಆಕ್ಟಿಂಗ್ ಮಾಡ್ಕೊಂಡ್ ಇರ್ಬೇಕಾ.?

ಈ ಪ್ರಶ್ನೆಗಳನ್ನ ಮುಂದಿಟ್ಟುಕೊಂಡು ನಿಮ್ಮ 'ಒನ್ ಇಂಡಿಯಾ ಕನ್ನಡ' ಹಾಗೂ 'ಫಿಲ್ಮಿಬೀಟ್ ಕನ್ನಡ' POLL ಆಯೋಜಿಸಿತ್ತು. ಅದರಲ್ಲಿ ನಮ್ಮ ಓದುಗರಿಂದ ಬಂದ ಪ್ರತಿಕ್ರಿಯೆ ಸಿಂಪ್ಲಿ ಸೂಪರ್.! ಮುಂದೆ ಓದಿ....

ಅಭಿಪ್ರಾಯ ಮಹಾಪೂರ.!

ನಟಿ ರಮ್ಯಾರನ್ನು ಯಾವ ಕ್ಷೇತ್ರದಲ್ಲಿ ನೋಡಬಯಸುತ್ತೀರಾ.? ಎಂದು ನಿಮ್ಮ 'ಫಿಲ್ಮಿಬೀಟ್ ಕನ್ನಡ' ಪುಟ, ಟ್ವಿಟ್ಟರ್ ಹಾಗೂ ಫೇಸ್ ಬುಕ್ ಪೇಜ್ ನಲ್ಲಿ ಕೇಳಿದ ಪ್ರಶ್ನೆಗೆ ಸಾವಿರಾರು ಮಂದಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. [ಮಂಡ್ಯ ಮಾಜಿ ಸಂಸದೆ ರಮ್ಯಾಗೆ ಹುಚ್ಚ ವೆಂಕಟ್ ಫುಲ್ ಆವಾಝ್.!]

ಬಹುತೇಕ ಜನರ ಅಭಿಪ್ರಾಯ

ನಿಮ್ಮ 'ಫಿಲ್ಮಿಬೀಟ್ ಕನ್ನಡ' ಪುಟದಲ್ಲಿ ಸಾವಿರಾರು ಜನರು ವೋಟ್ ಮಾಡಿರುವ ಪ್ರಕಾರ ರಮ್ಯಾ ಮೇಡಂ 'ಕನ್ನಡ ಚಿತ್ರರಂಗದಲ್ಲಿ' ಇದ್ರೆ ಸೂಕ್ತ.! ['ನಾಗರಹಾವು' ಬಗ್ಗೆ 'ನಾಗಿಣಿ' ರಮ್ಯಾ ಉದುರಿಸಿದ ಮಾತಿನ ಮುತ್ತು]

ಟ್ವಿಟ್ಟರ್ ನಲ್ಲೂ ಸೇಮ್ ಟು ಸೇಮ್.!

ಸಾಮಾಜಿಕ ಜಾಲತಾಣವಾದ ಟ್ವಿಟ್ಟರ್ ನಲ್ಲೂ 67% ಮಂದಿ ರಮ್ಯಾ 'ಕನ್ನಡ ಚಿತ್ರರಂಗದಲ್ಲಿ' ಇದ್ರೆ ಚೆನ್ನ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. [ರಮ್ಯಾ 'Whatsapp' ನಲ್ಲಿಲ್ಲ ಯಾಕೆ ನಿಮ್ಗೊತ್ತಾ?]

ಫೇಸ್ ಬುಕ್ ನಲ್ಲಿ ಯದ್ವಾ-ತದ್ವಾ ಕಾಮೆಂಟ್ ಗಳು.!

ಇನ್ನೂ ಬಹು ಜನಪ್ರಿಯ ಸಾಮಾಜಿಕ ಜಾಲತಾಣವಾದ ಫೇಸ್ ಬುಕ್ ನಲ್ಲಿ ನಟಿ ರಮ್ಯಾ ಬಗ್ಗೆ ಇದೇ POLL ಸಲುವಾಗಿ ಯದ್ವಾ-ತದ್ವಾ ಕಾಮೆಂಟ್ ಗಳು ಬಂದಿವೆ.

ರಮ್ಯಾ ಅಭಿಮಾನಿಗಳಿಗೆ 'ಫಿಲ್ಮ್' ಇಷ್ಟ.!

ರಮ್ಯಾ ಆಕ್ಟಿಂಗ್ ನೋಡಿ 'ಫ್ಯಾನ್' ಆಗಿರುವವರು, ರಮ್ಯಾ ನಟಿಸುವುದೇ ಲೇಸು ಎಂದಿದ್ದಾರೆ.

ಚಿತ್ರರಂಗಕ್ಕೆ 'ಗುಡ್ ಬೈ' ಹೇಳಿದ ರಮ್ಯಾ ಇದಕ್ಕೆ ಏನಂತಾರೋ.?

ರಾಜಕೀಯದಲ್ಲಿ ತುಂಬಾ ಸಮಯ ಬೇಕು. ನಟನೆಗೆ ಬಿಡುವು ಇಲ್ಲ ಅಂತ್ಹೇಳಿ ಬಣ್ಣದ ಬದುಕಿಗೆ ಗುಡ್ ಬೈ ಹೇಳಿದ ರಮ್ಯಾ ಮೇಡಂ ಸ್ವಲ್ಪ ಅಭಿಮಾನಿಗಳ ಮಾತಿಗೂ ಕಿವಿ ಕೊಡಬೇಕು....

ರಾಜಕೀಯ ಅಂತ ಹೇಳಿದವರು ಬೆರಳೆಣಿಕೆಯಷ್ಟು ಮಂದಿ!

ರಮ್ಯಾ ರಾಜಕಾರಣಿ ಆಗಿರಲಿ, ಸಮಾಜ ಸೇವೆ ಮಾಡಲಿ ಅಂತ ಒನ್ ಇಂಡಿಯಾ ಕನ್ನಡ/ಫಿಲ್ಮಿಬೀಟ್ ಕನ್ನಡ ಆಯೋಜಿಸಿದ್ದ POLL ನಲ್ಲಿ ಹೇಳಿದವರು ಬೆರಳೆಣಿಕೆಯಷ್ಟು ಮಂದಿ ಮಾತ್ರ.

ನಟ-ನಟಿಯರು ಚಿತ್ರರಂಗದಲ್ಲಿ ಇದ್ರೆ ಚೆನ್ನ.!

'ನಟ-ನಟಿಯರು ಚಿತ್ರರಂಗದಲ್ಲಿ ಇದ್ರೆ ಚೆನ್ನ' ಅಂತ ಅಂತ ಹೇಳುವ ಕಾಮೆಂಟ್ ಗಳು ಇಲ್ಲಿದೆ ನೋಡಿರಿ...

ಸಾಲು ಸಾಲು ಕಾಮೆಂಟ್ಸ್..!

ಇವೆಲ್ಲಾ ಸ್ಯಾಂಪಲ್ ಅಷ್ಟೇ. ನಟಿ ರಮ್ಯಾ ಎಲ್ಲಿದ್ದರೆ, ಏನು ಮಾಡಿದರೆ ಚೆನ್ನ ಎಂಬ ಬಗ್ಗೆ ನಿಮ್ಮ ಒನ್ ಇಂಡಿಯಾ ಫೇಸ್ ಬುಕ್ ಪೇಜ್ ನಲ್ಲಿ ಸಾಲು ಸಾಲು ಕಾಮೆಂಟ್ಸ್ ದಾಖಲಾಗಿವೆ.

ನಿಮ್ಮ ಅಭಿಪ್ರಾಯ ಏನು.?

ನಟಿ ರಮ್ಯಾ ವಿಧಾನಸಭೆ ಅಥವಾ ವಿಧಾನ ಪರಿಷತ್ ಸದಸ್ಯೆ ಆಗ್ಬೇಕಾ.? ಪಾರ್ಲಿಮೆಂಟ್ ಗೆ ಹೋಗ್ಬೇಕಾ.? ಸಮಾಜ ಸೇವೆ ಮಾಡ್ಬೇಕಾ.? ಯಾವುದು ಬೇಡ ಅಂತ ಕನ್ನಡ ಚಿತ್ರರಂಗದಲ್ಲಿ ಇರ್ಬೇಕಾ.? ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ, ಕೆಳಗಿರುವ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡಿ....

English summary
According to the Poll Survey conducted by Oneindia Kannada and Filmibeat Kannada, Readers opine that Kannada Actress, EX MP, Congress Politician Ramya/Divya Spandana should continue to act in Kannada Films.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada