»   » ರಕ್ಷಿತ್, ಸುನಿ ಜೊತೆ ಸಿಂಪಲ್ ಮಾತುಕತೆ-1

ರಕ್ಷಿತ್, ಸುನಿ ಜೊತೆ ಸಿಂಪಲ್ ಮಾತುಕತೆ-1

Posted By:
Subscribe to Filmibeat Kannada

ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಚಿತ್ರ ಹಲವರಿಗೆ ಸಿಂಪಲ್ ಆಗಿ ಕೆಲವರಿಗೆ ಮೋಸ್ಟ್ ಕಾಂಪ್ಲಿಕೇಟೆಡ್ ಆಗಿ ಕಂಡಿದೆ. ಆದರೆ, ಯಶಸ್ಸಿನ ರುಚಿ ಕಂಡಿರುವ ಚಿತ್ರ ತಂಡ ಮಾತ್ರ ಸಕತ್ ಸಿಂಪಲ್ ಗುರು. ಈ ಸಿಂಪಲ್ ತಂಡ ಮಂಗಳವಾರ ನಮ್ಮ ಒನ್ ಇಂಡಿಯಾ ಕಚೇರಿಗೆ ಭೇಟಿ ಕೊಟ್ಟು ನಮ್ಮೊಂದಿಗೆ ಕೆಲಹೊತ್ತು ಹರಟೆ ಹೊಡೆದರು.

ಫಸ್ಟ್ ಫಿಲಂ ಹಿಟ್ ಆಗಿದ್ದೆ ತಡ ಸಾಲು ಸಾಲು ನಿರ್ಮಾಪಕರಿಗೆ ಕಾಲ್ ಶೀಟ್ ನೀಡಿ ಬ್ಯುಸಿ ಆಗುವ ಈ ಕಾಲದಲ್ಲಿ ನಾಯಕ ರಕ್ಷಿತ್ ಸ್ವಲ್ಪ ಡಿಫೆರೆಂಟ್ ಆಗಿ ನಾನು ನಿರ್ದೇಶನ ಮಾಡುತ್ತೀನಿ ಎನ್ನುತ್ತಿದ್ದಾರೆ.

ಇನ್ನೊಂದೆಡೆ ಡೈಲಾಗ್ ಗಳಲ್ಲೇ ಚಿತ್ರ ಗೆಲ್ಲಿಸಿ ಗುರುಪ್ರಸಾದ್, ಯೋಗರಾಜ್ ಭಟ್ಟರ ಸಾಲಿಗೆ ಸೇರಿರುವ ನಿರ್ದೇಶಕ ಸುನಿ ಅವರು ತಮಿಳು ತೆಲುಗು ಚಿತ್ರಗಳಿಂದ ಇದೇ ಚಿತ್ರವನ್ನು ನಿರ್ದೇಶಿಸಿ ಎಂದು ಆಫರ್ ಬಂದರೂ ಅಯ್ಯೋ ನಂಗೆ ಆ ಭಾಷೆ ಬರಲ್ಲ, ಡೈಲಾಗ್ಸ್ ಮೇಲೆ ಹಿಡಿತ ಇರಲ್ಲ. ನಾನು ಮಾಡಲ್ಲ ಎಂದು ಆಫರ್ ರಿಜೆಕ್ಟ್ ಮಾಡಿದ್ದಾರೆ.

ಸಿಂಪಲ್ ಆಗಿರೋ ಈ ಇಬ್ಬರು ಪ್ರತಿಭಾವಂತರಿಗೆ ಮಾತಿಗಿಂತ ಕೃತಿ ಮುಖ್ಯ. ಎರಡು ಕಿವಿ ಒಂದು ಬಾಯಿ ಇರುವುದು ಏಕೆ ಎಂಬ ಅರಿವಿದೆ. ಚಿತ್ರರಂಗದಲ್ಲಿ ಹೊಸ ಬದಲಾವಣೆ ತಂದ ಈ ತಾರೆಗಳ ಜೊತೆ ಒನ್ ಇಂಡಿಯಾ ತಂಡ ನಡೆಸಿದ ಸಂದರ್ಶನದ ಸಾರಾಂಶ ಇಲ್ಲಿದೆ....[ಮುಂದುವರೆದ ಭಾಗ ಇಲ್ಲಿ ಓದಿ]

Oneindia Team Interview with Simple aagondu Love Story

ಮಹೇಶ್ ಮಲ್ನಾಡ್ ಪ್ರಶ್ನೆ : ರಕ್ಷಿತ್ ಗೆ ನಟನೆ, ನಿರ್ದೇಶನ ಯಾವುದು ಇಷ್ಟ?
* ನಾನು ಶಾರ್ಟ್ ಫಿಲಂಗಳನ್ನು ಮಾಡುತ್ತಾ ಇದ್ದೆ. ನಿರ್ದೇಶನ ಮಾಡುವುದು ನನ್ನ passion, ಒಳ್ಳೆ ಪ್ರಾಜೆಕ್ಟ್ ಬಂದರೆ ನಟನೆ ಕೂಡಾ ಮಾಡುತ್ತೇನೆ. ಎರಡಕ್ಕೂ ಸಮಾನ ಆದ್ಯತೆ ನೀಡುತ್ತೇನೆ

ಪ್ರಸಾದ್ ನಾಯಿಕ ಪ್ರಶ್ನೆ ರಕ್ಷಿತ್ ಗೆ : ನಿಮ್ಮ ಮುಂದಿನ ಚಿತ್ರ?
* ಉಳಿದವರು ಕಂಡಂತೆ ಎಂಬ ಚಿತ್ರ ನಿರ್ದೇಶಿಸುತ್ತಿದ್ದೇನೆ. ಮಲ್ಪೆ ಕಡಲ ತೀರದ ಸುತ್ತಾ ಚಿತ್ರ ಸಾಗಲಿದೆ. 5 ಪ್ರಮುಖ ಪಾತ್ರಗಳಿದೆ. ನಾನು ನಟಿಸ್ತಾ ಇದ್ದೀನಿ. ಸ್ಥಳೀಯ ಭಾಷೆ ಬಳಸಿದ್ದೇವೆ

ಪ್ರಸಾದ್ ನಾಯಿಕ to ರಕ್ಷಿತ್ ಕರಾವಳಿ, ಧಾರವಾಡ ಭಾಷೆ ಚಿತ್ರರಂಗ
* ಈ ಬಗ್ಗೆ ಒನ್ ಇಂಡಿಯಾಗೆ ಕೊಟ್ಟ ಈ ಹಿಂದಿನ ಸಂದರ್ಶನದಲ್ಲೂ ಸ್ಪಷ್ಟಪಡಿಸಿದ್ದೆ. ಕರಾವಳಿ ಭಾಗ ಹಾಗೂ ಧಾರವಾಡ ಕಡೆ ಕನ್ನಡ ತೆರೆ ಮೇಲೆ ಹಾಸ್ಯಾಸ್ಪದವಾಗಬಾರದು. ನಮ್ಮ ಭಾಷೆ ವೈವಿಧ್ಯತೆ ನಮ್ಮಲ್ಲಿ ಅಭಿಮಾನ ಉಕ್ಕಿಸಬೇಕು ಎಂಬುದು ನನ್ನ ಇಚ್ಛೆ

ಮಲ್ನಾಡ್ t೦ ಸುನಿ : ನಿಮ್ಮ ಹಿನ್ನೆಲೆ

* ನಾನು ಬೆಂಗಳೂರಿನವನು. ಕೆಎಲ್ ಇ ಕಾಲೇಜಿನಲ್ಲಿ ಬಿಎಸ್ಸಿ ಬಯೋಟೆಕ್ ಪದವಿ ಪಡೆದೆ. ಆದರೆ, ಚಿಕ್ಕಂದಿನಿಂದಲೇ ಕವನಗಳನ್ನು ಬರೀತಾ ಇದ್ದೆ. ಕವನ ಹಿಡಿದುಕೊಂಡು ಚಿತ್ರರಂಗಕ್ಕೆ ಎಂಟ್ರಿ ಕೊಡಲು ಯತ್ನಿಸಿ ಸೋತೆ.

ಆಮೇಲೆ ದಿನೇಶ್ ಬಾಬು ಅವರ ಮಿ, ಗರಗಸ ಚಿತ್ರ ಸೇರಿದಂತೆ ತಾರೆ, ಜನುಮದ ಗೆಳತಿ ಮುಂತಾದ ಚಿತ್ರಗಳಲ್ಲಿ ಸಹಾಯಕ ನಿರ್ದೇಶಕನಾಗಿ ದುಡಿದೆ.

ಮಲ್ನಾಡ್ to ಸುನಿ ಹಾಗೂ ರಕ್ಷಿತ್ : ಸಾಮಾಜಿಕ ಜಾಲ ತಾಣವನ್ನು ಸಮರ್ಥವಾಗಿ ಬಳಸಿಕೊಂಡು ಚಿತ್ರಕ್ಕೆ ಒಳ್ಳೆ ಪ್ರಚಾರ ಕೊಟ್ರಿ, ಆದ್ರೆ ಆಂಡ್ರಾಯ್ಡ್ ಆಪ್ ಅಪ್ಡೇಟ್ ಆಗಿಲ್ಲ ಏಕೆ?
* ಆಂಡ್ರಾಯ್ಡ್ ಆಪ್ ಹೊಸ ಪ್ರಯತ್ನವಾಗಿತ್ತು, ಇದನ್ನು ನಮ್ಮ ಸ್ನೇಹಿತರೊಬ್ಬರು ಡೆವಲಪ್ ಮಾಡಿದ್ರು, ಅಪ್ಡೇಡ್ಸ್ ಬಗ್ಗೆ ನಮಗೂ ಗೊತ್ತಿಲ್ಲ. ನೀವು ಹೇಳಿದ್ದು ಒಳ್ಳೆದಾಯ್ತು, ಚೆಕ್ ಮಾಡ್ತೀವಿ

ಯೂ ಟ್ಯೂಬ್ ವಿಡಿಯೋ, ಫೇಸ್ ಬುಕ್ ಪ್ರಮೋಷನ್ ಬಗ್ಗೆ ನನಗೆ ಗೊತ್ತೇ ಇರಲಿಲ್ಲ. ರಕ್ಷಿತ್, ಮನೋಹರ್, ಭರತ್ ಜೊತೆ ಸೇರಿ ಕಲಿತುಕೊಂಡೆ. ಪ್ರೇಕ್ಷಕರ ಜೊತೆ ಮಾತುಕತೆಗೆ ಒಳ್ಳೆ ಮಾಧ್ಯಮವಾಗಿ ಬಳಕೆಯಾಯ್ತು ಎಂದು ಸುನಿ ಹೇಳಿದರು.

ಸಿಂಪಲ್ ಚಿತ್ರದ ಗಳಿಕೆ ಎಷ್ಟಾಗಿದೆ? ಚಿತ್ರದ ಮುಂದಿನ ಪ್ರಮೋಷನ್ ಕಥೆ ಏನು? ಸಂವಾದ ಮಾಡ್ತಾರಾ? ಮಲ್ಟಿಪೆಕ್ಸ್ ಮೆಚ್ಚಿದ್ದು ಏಕೆ? ಸುನಿಗೆ ಕಾಡಿದ್ದ ಭಯವಾದರೂ ಏನು? ಎಂಬ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಮುಂದಿನ ಭಾಗದಲ್ಲಿ ನಿರೀಕ್ಷಿಸಿ

Read more about: sols, ಸಂದರ್ಶನ, interview
English summary
Actor Rakshit Shetty and Director Suni visited Oneindia office today (Mar.20). Rakshit and Suni narrated how Socia Media helped in making Movie Success.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada