»   » ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡುವ ಆಸಕ್ತರಿಗೆ ಸುವರ್ಣ ಅವಕಾಶ

ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡುವ ಆಸಕ್ತರಿಗೆ ಸುವರ್ಣ ಅವಕಾಶ

Posted By:
Subscribe to Filmibeat Kannada

ಎಸ್.ಎಸ್.ಎಲ್.ಸಿ. ಪಾಸಾದ ಮತ್ತು ಕರ್ನಾಟಕ ರಾಜ್ಯದಲ್ಲಿ ಕನಿಷ್ಠ 05 ವರ್ಷ ವ್ಯಾಸಂಗ ಮಾಡಿದ ಅಭ್ಯರ್ಥಿಗಳಿಗೆ ತಾಂತ್ರಿಕ ಶಿಕ್ಷಣ ಇಲಾಖೆಯ ಸರ್ಕಾರಿ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆಯ ವತಿಯಿಂದ 2017-18 ನೇ ಸಾಲಿಗೆ ಡಿಪ್ಲೋಮಾ ಸಿನಿಮಾಟೋಗ್ರಫಿ ಮತ್ತು ಸೌಂಡ್ ರೆಕಾರ್ಡಿಂಗ್ ಅಂಡ್ ಇಂಜಿನಿಯರಿಂಗ್ ಕೋರ್ಸ್ ಗಳ ಖಾಲಿ ಉಳಿದ ಸೀಟುಗಳ ಪ್ರವೇಶಕ್ಕಾಗಿ ಆನ್ ಲೈನ್ ನಲ್ಲಿ ಅರ್ಜಿ ಆಹ್ವಾನಿಸಿದೆ.

ಪ್ರವೇಶ ಬಯಸುವ ವಿದ್ಯಾರ್ಥಿಗಳು ಅರ್ಜಿ ನಮೂನೆ ಹಾಗೂ ಮಾಹಿತಿ ಪುಸ್ತಕವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಥವಾ ತಾಂತ್ರಿಕ ಶಿಕ್ಷಣ ಇಲಾಖೆಯ ಅಧಿಕೃತ ವೆಬೈ ಸೈಟ್‍ಗಳಾದ www.dte.kar.nic.in ಅಥವಾ www.kea.kar.nic.in ಮೂಲಕ ಡೌನ್ ಲೋಡ್ ಮಾಡಿಕೊಂಡು ಅರ್ಜಿ ಸಲ್ಲಿಸಬಹುದು.

Online Application for Cinematography

GM/2A/2B/3A/3B ವರ್ಗದ ಅಭ್ಯರ್ಥಿಗಳಿಗೆ ರೂ 100/- ನೋಂದಣಿ ಶುಲ್ಕ ಮತ್ತು SC/ST/CAT-1 ವರ್ಗದ ಅಭ್ಯರ್ಥಿಗಳಿಗೆ ರೂ 50/- ನೋಂದಣಿ ಶುಲ್ಕವನ್ನ ನಿಗದಿಗೊಳಿಸಲಾಗಿದೆ. ಕರ್ನಾಟಕ ರಾಜ್ಯದ ಯಾವುದೇ ಸ್ವೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಗಳಲ್ಲಿ (ಖಾತೆ ಹೆಸರು: ED-KEA-DCET-2017 & A/c 36843662415 - IFSC Code SBIN0007080) ಇವರ ಹೆಸರಿಗೆ ಪಾವತಿಸಬೇಕು.

ಹಣ ಪಾವತಿಸಿದ ನಂತರ ಬ್ಯಾಂಕ್ ಚಲನ್ ನ ಪ್ರತಿ ಮತ್ತು ಮಾಹಿತಿ ಪುಸ್ತಕದಲ್ಲಿ ಸೂಚಿಸಿರುವಂತೆ ಎಲ್ಲಾ ಮೂಲ ದಾಖಲೆಗಳು, ಒಂದು ಸೆಟ್ ಜೆರಾಕ್ಸ್ ಪ್ರತಿ ಮತ್ತು ಇತ್ತೀಚಿನ 04 ಪಾಸ್ ಪೋರ್ಟ್ ಅಳತೆಯ ಫೋಟೋಗಳೊಂದಿಗೆ ಹೆಸರಘಟ್ಟದಲ್ಲಿರುವ ಪ್ರಾಂಶುಪಾಲರ ಕಚೇರಿಗೆ ಸಲ್ಲಿಸಬೇಕು. ಅರ್ಜಿ ತಲುಪಿಸಲು ಕೊನೆಯ ದಿನಾಂಕ 02-08-2017 ರ ಸಂಜೆ 5.30 ಗಂಟೆ.

ಅರ್ಜಿ ತಲುಪಿಸಬೇಕಾದ ವಿಳಾಸ: ಪ್ರಾಂಶುಪಾಲರ ಕಚೇರಿ, ಹೆಸರಘಟ್ಟ. ಸರ್ಕಾರಿ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆ. ಬೆಂಗಳೂರು - 88

ಹೆಚ್ಚಿನ ವಿವರಗಳಿಗೆ ದೂರವಾಣಿ : 080 28466768 ಮತ್ತು 28446672 ಗಳನ್ನು ಸಂಪರ್ಕಿಸಬಹುದು.

English summary
Online Application opens for 1st year Diploma Courses Like cinematography, Sound recording and engineering from Government film and television institute.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada