ಪುನೀತ್ ರಾಜ್‌ಕುಮಾರ್ ನಿರ್ಮಾಣದ ಸಿನಿಮಾದಲ್ಲಿ ನಟಿಸಲು ಅವಕಾಶ
ಪುನೀತ್ ರಾಜ್‌ಕುಮಾರ್ ಎಷ್ಟೊಳ್ಳೆ ನಟರೋ ಅಷ್ಟೆ ಸದಭಿರುಚಿಯ ಸಿನಿಮಾ ನಿರ್ಮಾಪಕ ಎಂಬುದನ್ನು ಸಾಬೀತು ಮಾಡಿದ್ದಾರೆ ತಮ್ಮ ಪಿಆರ್‌ಕೆ ಪ್ರೊಡಕ್ಷನ್ ಮೂಲಕ.
ತಮ್ಮದೇ ಒಡೆತನದ ಪಿಆರ್‌ಕೆ ಪ್ರೊಡಕ್ಷನ್ ಮೂಲಕ ಹೊಸಬರಿಗೆ ಮತ್ತು ಪ್ರತಿಭಾವಂತರಿಗೆ ಅವಕಾಶ ನೀಡುತ್ತಿರುವ ಪುನೀತ್ ರಾಜ್‌ಕುಮಾರ್. ಕೆಲವು ಅತ್ಯುತ್ತಮ ಸಿನಿಮಾಗಳನ್ನು ಕನ್ನಡದಕ್ಕೆ ನೀಡಿದ್ದಾರೆ. ಕವಲುದಾರಿ ಅವುಗಳಲ್ಲಿ ಒಂದು.
ಸ್ವತಃ ದೊಡ್ಡ ನಟರಾಗಿದ್ದರೂ ಸಹ ಹೊಸಬರನ್ನು ಗುರುತಿಸುವುದರಲ್ಲಿ ಹಿಂದೆ ಉಳಿಯದ ಪುನೀತ್ ರಾಜ್‌ಕುಮಾರ್, ಇದೀಗ ಪಿಆರ್‌ಕೆ ಪ್ರೊಡಕ್ಷನ್‌ನ ಹೊಸ ಸಿನಿಮಾಕ್ಕೆ ಹೊಸ ನಟರನ್ನು ಹುಡುಕುವ ಯತ್ನದಲ್ಲಿದ್ದಾರೆ.

ಫ್ಯಾಮಿಲಿ ಪ್ಯಾಕ್ ಸಿನಿಮಾಕ್ಕೆ ಹೊಸ ನಟರು ಬೇಕಾಗಿದ್ದಾರೆ
ಪಿಆರ್‌ಕೆ ಪ್ರೊಡಕ್ಷನ್ಸ್ ನಿಂದ ನಿರ್ಮಾಣಗೊಳ್ಳುತ್ತಿರುವ 'ಫ್ಯಾಮಿಲಿ ಪ್ಯಾಕ್' ಎಂಬ ಸಿನಿಮಾಕ್ಕೆ ಹೊಸ ನಟರನ್ನು ಆಯ್ಕೆ ಮಾಡುತ್ತಿದ್ದು, ಯಾರು ಬೇಕಾದರೂ ಅವಕಾಶಕ್ಕಾಗಿ ಯತ್ನಿಸಬಹುದಾಗಿದೆ. ಪ್ರತಿಭೆ ಇದ್ದವರಿಗೆ ಅವಕಾಶ ಪಕ್ಕಾ.

ಒಂದು ನಿಮಿಷದ ನಟನೆಯ ವಿಡಿಯೋ ಕಳಿಸಬೇಕಿದೆ
18 ರಿಂದ 50 ವರ್ಷದ ಆಸಕ್ತರು ತಮ್ಮ ನಟನೆಯ ಒಂದು ನಿಮಿಷದ ವಿಡಿಯೋವನ್ನು ಚಿತ್ರೀಕರಿಸಿ ಚಿತ್ರತಂಡದ ಇ-ಮೇಲ್ ಗೆ ಕಳುಹಿಸಿಸಬೇಕಿದೆ. ಚಿತ್ರತಂಡದವರು ವಿಡಿಯೋಗಳನ್ನು ನೋಡಿ ಸೂಕ್ತವಾಗಿರರುವವರನ್ನು ಆಯ್ಕೆ ಮಾಡುತ್ತಾರೆ.

ಅಕ್ಟೋಬರ್ 10 ರ ಒಳಗಾಗಿ ಕಳಿಸಬೇಕಿದೆ
ವಿಡಿಯೋದ ಜೊತೆಗೆ ಹೆಸರು, ವಯಸ್ಸು, ವಿಳಾಸ, ಮೊಬೈಲ್ ಸಂಖ್ಯೆ ಕಡ್ಡಾಯವಾಗಿ ನೀಡಬೇಕಿದ್ದು, ಅಕ್ಟೋಬರ್ 10 ರ ಒಳಗಾಗಿ ವಿಡಿಯೋಗಳು ಚಿತ್ರತಂಡದ ಜಿಮೇಲ್‌ಗೆ ತಲುಪಬೇಕಿದೆ.
Recommended Video

ಎರಡು ಸಿನಿಮಾಗಳು ನಿರ್ಮಾಣಗೊಳ್ಳುತ್ತಿವೆ
ಪ್ರಸ್ತುತ ಪಿಆರ್‌ಕೆ ಪ್ರೊಡಕ್ಷನ್‌ನಿಂದ ಎರಡು ಸಿನಿಮಾಗಳು ನಿರ್ಮಾಣಗೊಳ್ಳುತ್ತಿವೆ. ಎಸ್ ಅರ್ಜುನ್ ಕುಮಾರ್ ನಿರ್ದೇಶಿಸಿ, ಲಿಖಿತ್ ನಾಯಕನಾಗಿ ನಟಿಸುತ್ತಿರುವ ಫ್ಯಾಮಿಲಿ ಪ್ಯಾಕ್ ಹಾಗೂ ಓ2 ಎಂಬ ಭಿನ್ನ ಕತೆಯ ಸಿನಿಮಾಗಳನ್ನು ನಿರ್ಮಿಸಲಾಗುತ್ತಿದೆ.


Click it and Unblock the Notifications











