»   » ಶ್ರೀನಿಯ 'ಬೀರ್‌ಬಲ್' ಚಿತ್ರದಲ್ಲಿ ನಟಿಸಲು ಇಲ್ಲಿದೆ ಉತ್ತಮ ಅವಕಾಶ!

ಶ್ರೀನಿಯ 'ಬೀರ್‌ಬಲ್' ಚಿತ್ರದಲ್ಲಿ ನಟಿಸಲು ಇಲ್ಲಿದೆ ಉತ್ತಮ ಅವಕಾಶ!

Posted By:
Subscribe to Filmibeat Kannada

ನಿರ್ದೇಶಕ ಮತ್ತು ನಟ ಎಂ.ಜಿ ಶ್ರೀನಿವಾಸ್ 'ಶ್ರೀನಿವಾಸ ಕಲ್ಯಾಣ' ಚಿತ್ರದ ನಂತರ ಈಗ ಒಂದೇ ಟೈಟಲ್ ನ ಚಿತ್ರವನ್ನು ಮೂರು ಸೀಕ್ವೆಲ್ ಗಳಲ್ಲಿ ತೆರೆಮೇಲೆ ತರಲು ಮುಂದಾಗಿದ್ದಾರೆ. ಈ ಬಗ್ಗೆ ಇತ್ತೀಚೆಗೆ ತಾನೆ ನಿಮಗೆ ತಿಳಿಸಿದ್ವಿ. ಇದೇ ಚಿತ್ರಕ್ಕೆ ಈಗ ಆನ್‌ಲೈನ್ ಮೂಲಕ ಆಡಿಷನ್ ಸಹ ನಡೆಸಲಾಗುತ್ತಿದೆ.

'ಶ್ರೀನಿವಾಸ ಕಲ್ಯಾಣ'ದ ನಂತರ 'ಬೀರ್‌ಬಲ್' ಆದ ಶ್ರೀನಿ

ಹೌದು, ಎಂ.ಜಿ.ಶ್ರೀನಿವಾಸ್ ಅವರೇ ಆಕ್ಷನ್ ಕಟ್ ಹೇಳಲಿರುವ 'ಬೀರ್‌ಬಲ್' ಚಿತ್ರಕ್ಕೆ ಇತ್ತೀಚೆಗಷ್ಟೆ ಮೈಸೂರಿನಲ್ಲಿ ಕಲಾವಿದರ ಆಯ್ಕೆಗಾಗಿ ಆಡಿಷನ್ ಮಾಡಲಾಗಿತ್ತು. ಈಗ ಆನ್‌ಲೈನ್ ಮೂಲಕವು ಆಡಿಷನ್ ನಡೆಸುತ್ತಿದೆ ಚಿತ್ರತಂಡ.

Online Auditons for M G Srinivas starrer 'Birbal' Movie

'ಬೀರ್‌ಬಲ್' ಚಿತ್ರದಲ್ಲಿ ನಟಿಸಬೇಕು ಎನ್ನುವ ಆಕಾಂಕ್ಷಿತರು 8310900613 ನಂಬರ್ ಗೆ ವಾಟ್ಸಾಪ್ ಮೂಲಕ ತಮ್ಮ ನಟನೆಯ ಒಂದು ವಿಡಿಯೋ ಮತ್ತು ಎರಡು ಫೋಟೋಗಳನ್ನು ಕಳುಹಿಸಿಕೊಡಬಹುದು. ವಿಡಿಯೋ ಕೇವಲ ಒಂದು ನಿಮಿಷ ಮಾತ್ರ ಇರಬೇಕು ಎಂದು ಸೂಚಿಸಲಾಗಿದೆ. ಅಲ್ಲದೇ ತಮ್ಮ ಪ್ರೊಫೈಲ್‌ನಲ್ಲಿ ಹೆಸರು ಮತ್ತು ತಮ್ಮ ಜಿಲ್ಲೆಗಳನ್ನು ಹೆಸರಿಸಬೇಕಿದೆ. ಆನ್‌ಲೈನ್‌ ಮೂಲಕ ಆಡಿಷನ್ ಕೊಡುವವರು ತಮ್ಮ ವಿಡಿಯೋ ಮತ್ತು ಫೋಟೋಗಳನ್ನು ಕಳುಹಿಸಲು ಆಗಸ್ಟ್ 5 ನೇ ತಾರೀಖು ಕೊನೆ ದಿನಾಂಕ ಎಂದು ತಿಳಿಸಲಾಗಿದೆ.

'ಬೀರ್‌ಬಲ್' ಚಿತ್ರವನ್ನು 'ಕ್ರಿಸ್ಟಲ್ ಪಾರ್ಕ್' ಸಿನಿಮಾಸ್' ಬ್ಯಾನರ್ ಅಡಿಯಲ್ಲಿ ಟಿ.ಆರ್.ಚಂದ್ರಶೇಖರ್ ರವರು ನಿರ್ಮಾಣ ಮಾಡಲಿದ್ದಾರೆ. ಈ ಚಿತ್ರದಲ್ಲಿ ನಿರ್ದೇಶನದ ಜೊತೆಗೆ ಅಭಿನಯಿಸಲಿರುವ ಶ್ರೀನಿವಾಸ್ ರವರು ಲಾಯರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

English summary
M G Srinivas starrer 'Birbal' Movie team has conducted Online Auditons. One who interested to act in this movie can send their one minute video and two photos to whatsapp number 8310900613 before August 5th.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada