twitter
    For Quick Alerts
    ALLOW NOTIFICATIONS  
    For Daily Alerts

    ಪ್ರಥಮ್ ಹೇಳಿದ ಮನಕಲುಕುವ ಕತೆ: ಅಣ್ಣ-ತಂಗಿ ಒಂದು ಆಂಡ್ರಾಯ್ಡ್‌ ಮೊಬೈಲ್

    |

    ಬಿಗ್‌ ಬಾಸ್ ಪ್ರಥಮ್ ಈ ಕೊರೊನಾ ಸಂಕಷ್ಟದ ಸಮಯದಲ್ಲಿ ಸಾಕಷ್ಟು ಸಕ್ರಿಯವಾಗಿ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ.

    Recommended Video

    Akshay Kumar only Indian in the top 100 richest celebrities list | Akshay Kumar | Forbes

    ಲಾಕ್‌ಡೌನ್ ಬಿಗಿಯಾಗಿದ್ದ ಸಮಯದಲ್ಲಿ ಜನರಿಗೆ ದಿನಸಿ ಕಿಟ್ ವಿತರಿಸುವ, ಏರಿಯಾ ಗಳಿಗೆ ತೆರಳಿ ತರಕಾರಿ, ದಿಸನಿ ಇನ್ನಿತರೆ ಅವಶ್ಯಕ ವಸ್ತುಗಳನ್ನು ಕೊಡುವ ಕಾರ್ಯವನ್ನು ತಮ್ಮ ನಟಭಯಂಕರ ಸಿನಿಮಾ ತಂಡದೊಂದಿಗೆ ಸೇರಿ ಮಾಡಿದ್ದಾರೆ ಪ್ರಥಮ್.

    ದೊಡ್ಡ ಮನೆತನದ ಹುಡುಗಿಯೊಂದಿಗೆ ನಡೆದಿದೆ ಪ್ರಥಮ್ ಮದುವೆ ಮಾತುಕತೆ: ಮದುವೆ ಯಾವಾಗ?ದೊಡ್ಡ ಮನೆತನದ ಹುಡುಗಿಯೊಂದಿಗೆ ನಡೆದಿದೆ ಪ್ರಥಮ್ ಮದುವೆ ಮಾತುಕತೆ: ಮದುವೆ ಯಾವಾಗ?

    ಇದೀಗ ಲಾಕ್‌ಡೌನ್ ಸಡಿಲಿಕೆಯಾದ ನಂತರ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳ ನಿವಾರಣೆಗೆ ಪ್ರಯತ್ನ ಪಡುತ್ತಿದ್ದಾರೆ ಪ್ರಥಮ್. ಆನ್‌ಲೈನ್ ತರಗತಿಗಳ ಅವಾಂತರ, ಕೊರೊನಾ ಮುಗಿಯುವ ಮುನ್ನಾ ಶಾಲೆ ಪ್ರಾಂಭದ ನಿರ್ಧಾರ ಇವುಗಳ ವಿರುದ್ಧ ದನಿ ಎತ್ತರಿಸಿರುವ ಪ್ರಥಮ್. ಆನ್‌ಲೈನ್ ತರಗತಿಗಳು ಉಂಟು ಮಾಡುತ್ತಿರುವ ಸಮಸ್ಯೆಗಳನ್ನು ಮನದಟ್ಟು ಮಾಡುವ ಸಲುವಾಗಿ ಒಂದು ನಿಜ ಘಟನೆಯನ್ನು ತಮ್ಮ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ.

    ಅಣ್ಣ ಡಿಪ್ಲೆಮೊ, ತಂಗಿ ಎಂಜಿನಿಯರಿಂಗ್

    ಅಣ್ಣ ಡಿಪ್ಲೆಮೊ, ತಂಗಿ ಎಂಜಿನಿಯರಿಂಗ್

    ಅಣ್ಣ ಡಿಪ್ಲೆಮೊ ಓಡುತ್ತಿದ್ದಾನೆ. ತಂಗಿ ಎಂಜಿನಿಯರಿಂಗ್ ಓದುತ್ತಿದ್ದಾಳೆ. ಇಬ್ಬರಿಗೂ ಒಂದೇ ಸಮಯಕ್ಕೆ ಆನ್‌ಲೈನ್ ತರಗತಿ ಆರಂಭವಾಗುತ್ತದೆ. ಆದರೆ ಇರುವುದು ಒಂದೇ ಆಂಡ್ರಾಯ್ಡ್‌ ಮೊಬೈಲ್. ತಂಗಿ ಫೇಲ್ ಆದರೆ ಆಕೆಗೆ ಮದುವೆ ಮಾಡಿಬಿಡುತ್ತಾರೆ ಎಂಬ ಭಯದಲ್ಲಿ ಅಣ್ಣ ಆಂಡ್ರಾಯ್ಡ್ ಮೊಬೈಲ್‌ ಅನ್ನು ತಂಗಿಯ ಓದಿಗಾಗಿ ಕೊಟ್ಟುಬಿಟ್ಟಿದ್ದಾನೆ.

    ಈ ವಿಷಯ ಪ್ರಥಮ್‌ ಗಮನಕ್ಕೆ ಬಂದಿದೆ

    ಈ ವಿಷಯ ಪ್ರಥಮ್‌ ಗಮನಕ್ಕೆ ಬಂದಿದೆ

    ಈ ವಿಷಯ ಅದೇ ಊರಿನವರೊಬ್ಬರಿಂದ ಪ್ರಥಮ್ ಅವರಿಗೆ ಗೊತ್ತಾಗಿದೆ. ಕೂಡಲೇ ಆ ಊರಿನ ಸಮೀಪದ ಮೊಬೈಲ್ ಅಂಗಡಿಯೊಬ್ಬರನ್ನು ಸಂಪರ್ಕಿಸಿ, ಕೂಡಲೆ ಒಂದೊಳ್ಳೆ ಆಂಡ್ರಾಯ್ಡ್ ಮೊಬೈಲ್ ಹಾಗೂ ಇಂಟರ್ನೆಟ್ ವೈಫೈ ಸಂಪರ್ಕವನ್ನು (ಮೂರು ತಿಂಗಳಿನದ್ದು) ಆ ಅಣ್ಣ-ತಂಗಿಯ ಮನೆಗೆ ನೀಡಿರೆಂದು ಮನವಿ ಮಾಡಿದ್ದಾರೆ ಪ್ರಥಮ್.

    ಆನ್‌ಲೈನ್‌ನಲ್ಲಿ ಹನಿಮೂನ್ ಮಾಡಿದ್ರೆ ಮಕ್ಕಳಾಗುತ್ತಾ?: ಪ್ರಥಮ್ ಪ್ರಶ್ನೆಆನ್‌ಲೈನ್‌ನಲ್ಲಿ ಹನಿಮೂನ್ ಮಾಡಿದ್ರೆ ಮಕ್ಕಳಾಗುತ್ತಾ?: ಪ್ರಥಮ್ ಪ್ರಶ್ನೆ

    ಮುಂಗಡವಾಗಿ 4500 ಹಣ ಕೊಟ್ಟಿದ್ದಾರೆ

    ಮುಂಗಡವಾಗಿ 4500 ಹಣ ಕೊಟ್ಟಿದ್ದಾರೆ

    ಮೊಬೈಲ್‌ ನೀಡಲು ಮುಂಗಡವಾಗಿ 4500 ಹಣವನ್ನೂ ನೀಡಿದ್ದಾರೆ. ಇನ್ನೂ 13,000 ಹಣ ನೀಡಬೇಕಿದೆ. ಅದನ್ನು ಶೀಘ್ರದಲ್ಲಿಯೇ ನೀಡುತ್ತೇನೆ ಎಂದು ಬರೆದುಕೊಂಡಿದ್ದಾರೆ ಪ್ರಥಮ್. ಮೊಬೈಲ್ ಅಂಗಡಿಯವರೂ ಸಹ ಹೆಚ್ಚಿನ ಹಣಕ್ಕೆ ಬೇಡಿಕೆ ಇಡಲಿಲ್ಲವೆಂಬುದನ್ನೂ ಪೋಸ್ಟ್‌ನಲ್ಲಿ ಹೇಳಿದ್ದಾರೆ.

    ವಿದ್ಯಾರ್ಥಿಗಳಿಗೋಸ್ಕರ ಹಲವು ಪ್ರಯತ್ನ

    ವಿದ್ಯಾರ್ಥಿಗಳಿಗೋಸ್ಕರ ಹಲವು ಪ್ರಯತ್ನ

    ವಿದ್ಯಾರ್ಥಿಗಳಿಗೋಸ್ಕರ ಹಲವು ಕಾರ್ಯಗಳನ್ನು ಪ್ರಥಮ್ ಮಾಡುತ್ತಿದ್ದಾರೆ. ಆನ್‌ಲೈನ್ ತರಗತಿಗಳು ಹಳ್ಳಿಗಾಡಿನ ವಿದ್ಯಾರ್ಥಿಗಳನ್ನು ತಲುಪುವುದಿಲ್ಲ. ಕೊರೊನಾ ಮುಗಿಯುವ ಮುನ್ನವೇ ಶಾಲೆಗಳು ತೆರೆಯುವುದು ಬೇಡ ಎಂಬ ನಿಲವನ್ನು ಇಟ್ಟುಕೊಂಡು ಈ ಬಗ್ಗೆ ರಾಜಕಾರಣಿಗಳನ್ನು ಸಂಪರ್ಕ ಮಾಡಿ ಅರ್ಥೈಸುವ ಕಾರ್ಯದಲ್ಲಿ ಪ್ರಥಮ್ ಮಗ್ನರಾಗಿದ್ದು, ಈ ಬಗ್ಗೆ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ.

    'ನಟ ಭಯಂಕರ'ನಿಗೆ ಸಾಥ್ ನೀಡಿದ ಧ್ರುವ ಸರ್ಜಾಗೆ ವಿಶೇಷ ಗಿಫ್ಟ್ ಕೊಟ್ಟ ಪ್ರಥಮ್?'ನಟ ಭಯಂಕರ'ನಿಗೆ ಸಾಥ್ ನೀಡಿದ ಧ್ರುವ ಸರ್ಜಾಗೆ ವಿಶೇಷ ಗಿಫ್ಟ್ ಕೊಟ್ಟ ಪ್ರಥಮ್?

    English summary
    Bigg Boss winner Pratham posted an incident as an example of online classes. He said online classes are not reachable for rural students.
    Thursday, June 4, 2020, 15:55
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X