ಆಡಿಯೋ ಕಂಪೆನಿಯಿಂದ 'ಅಮರ್' ಚಿತ್ರತಂಡಕ್ಕೆ ಎದುರಾದ ಸಮಸ್ಯೆ
ಸ್ಯಾಂಡಲ್ ವುಡ್ ನ ಬಹುನಿರೀಕ್ಷೆಯ ಚಿತ್ರಗಳಲ್ಲಿ ಅಭಿಷೇಕ್ ಅಂಬರೀಶ್ ಅಭಿನಯದ 'ಅಮರ್' ಸಿನಿಮಾವು ಒಂದು. ಈಗಾಗಲೇ ಚಿತ್ರೀಕರಣ ಮುಗಿಸಿರುವ 'ಅಮರ್' ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ನಿರತವಾಗಿದೆ. ಪ್ರಮೋಶನ್ ಗೆ ತಯಾರಿ ನಡೆಯುತ್ತಿದ್ದ ಚಿತ್ರತಂಡಕ್ಕೆ ಕಾಪಿ ರೈಟ್ ಸಮಸ್ಯೆ ಎದುರಾಗಿದೆ.
ಹೌದು, ಚಿತ್ರದ ಪ್ರಮುಖ ಹಾಡುಗಳಲ್ಲಿ ಒಂದಾಗಿದ್ದ 'ಒಲವಿನ ಉಡುಗೊರೆ' ಹಾಡಿಗೆ ಕಾಪಿ ರೈಟ್ ಸಮಸ್ಯೆ ಎದುರಾಗಿದೆ. ಅಂಬರೀಶ್ ಅಭಿನಯದ ಸೂಪರ್ ಹಿಟ್ 'ಒಲವಿನ ಉಡುಗೊರೆ' ಚಿತ್ರದ ಹಾಡನ್ನು 'ಅಮರ್' ಸಿನಿಮಾದಲ್ಲಿ ಬಳಸಿಕೊಳ್ಳಲಾಗಿದೆ. ಈ ಹಾಡನ್ನು ಚಿತ್ರದ ಪ್ರಮೋಶನ್ ಗೆ ಬಳಸಿಕೊಳ್ಳಲು ಪ್ಲಾನ್ ಮಾಡಿತ್ತು ಚಿತ್ರತಂಡ.
ಆದರೆ, ಈ ಹಾಡನ್ನು ಪ್ರಮೋಶನ್ ಗೆ ಬಳಸದಂತೆ ಸಂಗೀತ ಆಡಿಯೋ ಕಂಪನಿ ಸೂಚಿಸಿದೆ. ಕೇವಲ ಚಿತ್ರಮಂದಿರದಲ್ಲಿ ಮಾತ್ರ ಈ ಹಾಡು ಪ್ರಸಾರವಾಗಬೇಕು, ಸೋಷಿಯಲ್ ಮಿಡಿಯಾದಲ್ಲಿ ಈ ಹಾಡನ್ನು ಅಪ್ ಲೋಡ್ ಮಾಡಬಾರದು ಎಂದು ತಾಕೀತು ಮಾಡಿದೆ.

ಅರ್ಜುನ್ ಜನ್ಯ ಸಂಗೀತ ಇರುವ ಈ ಹಾಡು ಮತ್ತೊಮ್ಮೆ ಪ್ರೇಕ್ಷಕರನ್ನು ರಂಜಿಸಲು ಸಿದ್ದವಾಗಿದೆ. ಸದ್ಯದಲ್ಲೇ ರಿಲೀಸ್ ಕೂಡ ಮಾಡಲು ಚಿತ್ರತಂಡ ನಿರ್ದರಿಸಿತ್ತು. ಆದರೀಗ ಕಾಪಿ ರೈಟ್ ಸಮಸ್ಯೆ 'ಅಮರ್' ಸಿನಿಮಾತಂಡಕ್ಕೆ ನಿರಾಸೆ ಮೂಡಿಸಿದೆ.
'ಅಮರ್' ಅಭಿಷೇಕ್ ಅಂಬರೀಶ್ ಅಭಿನಯದ ಚೊಚ್ಚಲ ಸಿನಿಮಾ. ಈ ಚಿತ್ರಕ್ಕೆ ನಾಗಶೇಖರ್ ನಿರ್ದೇಶನವಿದೆ. 'ಅಮರ್' ಒಂದು ರೋಮ್ಯಾಂಟಿಕ್ ಚಿತ್ರವಾಗಿದೆ. ಕರ್ನಾಟಕದ ಕೆಲವು ಭಾಗಗಳಲ್ಲಿ ಮತ್ತು ಸ್ವಿಡ್ಜರ್ ಲ್ಯಾಂಡ್ ನಲ್ಲಿ 'ಅಮರ್' ಚಿತ್ರವನ್ನು ಸೆರೆಹಿಡಿಯಲಾಗಿದೆ. ನಾಯಕಿಯಾಗಿ ತಾನ್ಯ ಹೋಪ್ ಕಾಣಿಸಿಕೊಂಡಿದ್ದಾರೆ.
ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ವಿಶೇಷ. ಬಹುನಿರೀಕ್ಷೆಯ ಚಿತ್ರ ಏಪ್ರಿಲ್ ಕೊನೆಯಲ್ಲಿ ಅಥವಾ ಮೇ ತಿಂಗಳ ಪ್ರಾರಂಭದಲ್ಲಿ ಚಿತ್ರ ತೆರೆಗೆ ಬರುವ ಸಾದ್ಯತೆ ಇದೆ.


Click it and Unblock the Notifications











