'ಒಂಥರಾ ಬಣ್ಣಗಳು' ಚಿತ್ರ ಹೊಸತರ ಪ್ರಯೋಗಗಳು
'ಒಂಥರಾ ಬಣ್ಣಗಳು' ಸ್ಯಾಂಡಲ್ ವುಡ್ ನಲ್ಲಿ ತೆರೆಗೆ ಬರುವುದಕ್ಕೆ ಸಿದ್ದವಾಗಿರುವ ಮಲ್ಟಿ ಸ್ಟಾರರ್ ಸಿನಿಮಾ. ಸೋನು ಗೌಡ, ಹಿತಾ ಚಂದ್ರಶೇಖ್,ಪ್ರವೀಣ್, ಕಿರಣ್ ಶ್ರೀನಿವಾಸ್, ಹಾಗೂ ಪ್ರತಾಪ್ ನಾರಾಯಣ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಚಿತ್ರ.
ಚಿತ್ರೀಕರಣ ಮುಗಿಸಿ ಹಾಡುಗಳನ್ನು ಬಿಡುಗಡೆ ಮಾಡಿ ಟೀಸರ್ ಮತ್ತು ಟ್ರೇಲರ್ ರಿಲೀಸ್ ಮಾಡಿರುವ 'ಒಂಥರಾ ಬಣ್ಣಗಳು' ಚಿತ್ರತಂಡ ಹೊಸದೊಂದು ಪ್ರಯೋಗಕ್ಕೆ ಮುಂದಾಗಿದೆ. ಮಾಧ್ಯಮಗಳ ಮುಂದೆ ಕೂತು ಚಿತ್ರದ ಬಗ್ಗೆ ಹೇಳಿಕೊಳ್ಳುವುದು, ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ಹಂಚಿಕೊಳ್ಳುವ ರೆಗ್ಯುಲರ್ ಫಾರ್ಮ್ಯಾಟನ್ನು ಬಿಟ್ಟು ಹೊಸ ರೀತಿ ಪ್ರಚಾರಕ್ಕೆ ಮುಂದಾಗಿದ್ದಾರೆ.
ತಮ್ಮ ಚಿತ್ರ ಪ್ರಚಾರ ಮಾಡಲು 'ಒಂಥರಾ ಬಣ್ಣಗಳು' ಚಿತ್ರತಂಡ ಬೈಕ್ ರೈಡ್ ಹೋಗಲು ನಿರ್ಧಾರ ಮಾಡಿದ್ದಾರೆ. ಮುಂದಿನ ಭಾನುವಾರ ಜುಲೈ 22 ರಂದು ಬೈಕ್ ರೈಡ್ ಗಾಗಿ ಸಿದ್ದತೆ ಮಾಡಿಕೊಂಡಿದ್ದು ಅಭಿಮಾನಿಗಳು ಕೂಡ ಇವರ ಜೊತೆಯಲ್ಲಿ ಭಾಗಿ ಆಗಬಹುದಾಗಿದೆ.

ಬೆಂಗಳೂರಿನಿಂದ, ಬಿಡದಿ, ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ, ಮೈಸೂರು ಮೂಲಕ ಚಾಮುಂಡಿ ಬೆಟ್ಟದ ವರೆಗೂ ಬೈಕ್ ನಲ್ಲಿ ಪ್ರಯಾಣ ಮಾಡಿ ದಾರಿಯುದ್ದಕ್ಕೂ ಸಿಗುವ ಜನರಿಗೆ ತಮ್ಮ ಚಿತ್ರದ ಬಗ್ಗೆ ಪ್ರಚಾರ ಮಾಡಲಿದ್ದಾರೆ.

ಅಂದ್ಹಾಗೆ 'ಒಂಥರಾ ಬಣ್ಣಗಳು' ಚಿತ್ರವನ್ನು ಸುನೀಲ್ ಭೀಮ್ ರಾವ್ ನಿರ್ದೇಶನ ಮಾಡಿ ನಿರ್ಮಾಣ ಮಾಡಿದ್ದಾರೆ. ಭರತ್ ಬಿ ಜೆ ಸಂಗೀತ ನಿರ್ದೇಶನವಿರುವ ಚಿತ್ರದಲ್ಲಿ ಶರತ್ ಲೋಹಿತಾಶ್ವ, ಆಶಾಲತಾ, ಮಾಲತಿ ದೇಶಪಾಂಡೆ, ಸುಚೇಂದ್ರ ಪ್ರಸಾದ್ ಇನ್ನು ಅನೇಕರು ಅಭಿನಯ ಮಾಡಿದ್ದಾರೆ. ಒಟ್ಟಾರೆ ಚಿತ್ರರಂಗದಲ್ಲಿ ಹೊಸ ಹೊಸ ಪ್ರಯೋಗಗಳು ಆಗಬೇಕು ಎಲ್ಲೋ ಕೂತು ಚಿತ್ರದ ಬಗ್ಗೆ ಮಾತನಾಡುವ ಬದಲು ಪ್ರೇಕ್ಷಕರ ಎದುರಿಗೆ ನಿಂತು ಮಾತನಾಡುವುದು ಒಂಥರಾ ಚೆನ್ನಾಗಿರುತ್ತೆ.


Click it and Unblock the Notifications











