ಓಹ್... ಆ ಪತ್ರ ಬರೆದವರು ರಕ್ಷಿತಾ ಪ್ರೇಮ್ ಅಲ್ವಂತೆ.!

ನಿನ್ನೆ (ಅಕ್ಟೋಬರ್ 21) ಮಧ್ಯಾಹ್ನದ ಹೊತ್ತಿಗೆ ನಟಿ, ನಿರ್ಮಾಪಕಿ ಹಾಗೂ ಪ್ರೇಮ್ ಪತ್ನಿ ರಕ್ಷಿತಾ ಪ್ರೇಮ್ ಫೇಸ್ ಬುಕ್ ಅಕೌಂಟ್ ನಲ್ಲಿ ಒಂದು ಪತ್ರ ಪೋಸ್ಟ್ ಆಯ್ತು.

''ಕನ್ನಡದ 'ದಿ ವಿಲನ್' ಸಿನಿಮಾ ಬಗ್ಗೆ, ಪ್ರೇಮ್ ಬಗ್ಗೆ, ಉರ್ಕೊಂಡ್, ಸಿಲ್ಲಿಯಾಗಿ, ಪ್ರಶ್ನೆ, ಗೇಲಿ, ಟೀಕೆ, ವಿಮರ್ಶೆ, ಮಾಡ್ಕಂಡ್ ಉರಿಯುವ ಗೆಳೆಯರಿಗೊಂದು ಅರಿಯುವ ಪತ್ರ'' ಎಂದು 'ದಿ ವಿಲನ್' ಚಿತ್ರದ ಬಗ್ಗೆ ಸಮರ್ಥಿಸಿಕೊಳ್ಳುವ ಪತ್ರ ಅದಾಗಿತ್ತು.

ಆ ಪತ್ರವನ್ನ ನೋಡಿ ''ಇದನ್ನ ರಕ್ಷಿತಾ ರವರೇ ಬರೆದಿರಬೇಕು'' ಅಂತ ಎಲ್ಲರೂ ಅಂದುಕೊಂಡರು. ಪತ್ರ ಫೇಸ್ ಬುಕ್ ನಲ್ಲಿ ಯದ್ವಾತದ್ವಾ ವೈರಲ್ ಆಯ್ತು. ಅದೇ ಪತ್ರವನ್ನ ನಾವೂ 'ಫಿಲ್ಮಿಬೀಟ್ ಕನ್ನಡ'ದಲ್ಲಿ ಪ್ರಕಟ ಮಾಡಿದ್ವಿ.

Open letter to all those who criticized The Villain was not written by Rakshita Prem

ವಾಸ್ತವ ಏನಪ್ಪಾ ಅಂದ್ರೆ, ಆ ಪತ್ರವನ್ನ ರಕ್ಷಿತಾ ಪ್ರೇಮ್ ಬರೆದಿಲ್ಲವಂತೆ. ಯಾರೋ ಕಳುಹಿಸಿದ್ದನ್ನ ತಮ್ಮ ಫೇಸ್ ಬುಕ್ ನಲ್ಲಿ ರಕ್ಷಿತಾ ಪ್ರೇಮ್ ಹಾಕೊಂಡಿದ್ದಾರೆ ಅಷ್ಟೇ. ಹೀಗಂತ ಸ್ವತಃ ರಕ್ಷಿತಾ ಪ್ರೇಮ್ ಫೇಸ್ ಬುಕ್ ನಲ್ಲಿ ಸ್ಪಷ್ಟ ಪಡಿಸಿದ್ದಾರೆ.

ರಕ್ಷಿತಾ ಪ್ರೇಮ್ ಫೇಸ್ ಬುಕ್ ಅಕೌಂಟ್ ನಿಂದ ಪೋಸ್ಟ್ ಆಗಿರುವ ಪತ್ರದ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಪರ-ವಿರೋಧ ಚರ್ಚೆ ನಡೆಯುತ್ತಿದೆ. 'ದಿ ವಿಲನ್' ಚಿತ್ರದಲ್ಲಿ ಕಥೆ ಇಲ್ಲ ಎಂದವರಿಗೆ ಪತ್ರದಲ್ಲಿ ತಿರುಗೇಟು ನೀಡಲಾಗಿದೆ.

'ದಿ ವಿಲನ್' ಚಿತ್ರದ ಬಗ್ಗೆಯಂತೂ ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗುತ್ತಿದೆ. 'ದಿ ವಿಲನ್' ಚಿತ್ರದ ನಿಜವಾದ ವಿಲನ್ ಪ್ರೇಮ್ ಎಂದು ಕೆಲವರು ಆಡಿಕೊಳ್ಳುತ್ತಿದ್ದಾರೆ. ಅಂಥವರಿಗೆಲ್ಲ ಬಿಸಿ ಮುಟ್ಟಿಸುವ ಪತ್ರ ಅದಾಗಿತ್ತು.

More from Filmibeat

English summary
Open letter to all those who criticized The Villain was not written by Rakshita Prem.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X