»   » ಯಶಸ್ವಿ 'ಆಪರೇಷನ್' ನಂತರ ನಟ ರಿಷಿಗೆ ಸಖತ್ ಡಿಮ್ಯಾಂಡ್

ಯಶಸ್ವಿ 'ಆಪರೇಷನ್' ನಂತರ ನಟ ರಿಷಿಗೆ ಸಖತ್ ಡಿಮ್ಯಾಂಡ್

Posted By:
Subscribe to Filmibeat Kannada

'ಆಪರೇಶನ್ ಅಲಮೇಲಮ್ಮ' ಚಿತ್ರ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ನಿರ್ದೇಶಕ ಸುನಿ, ನಾಯಕ ನಟ ರಿಷಿ ಹಾಗೂ ನಟಿ ಶ್ರದ್ಧಾ ಶ್ರೀನಾಥ್ ಅಭಿನಯಕ್ಕೆ ಮೆಚ್ಚುಗೆ ಸಿಕ್ಕಿದೆ.

ಈ ಖುಷಿಯ ಜೊತೆ ನಟ ರಿಷಿಗೆ ಮತ್ತೊಂದು ಖುಷಿ ಸಂಗತಿ ಏನಂದ್ರೆ, ಜಯಣ್ಣ ಕಂಬೈನ್ಸ್ ನಲ್ಲಿ ತಯಾರಾಗಲಿರುವ ಹೊಸ ಚಿತ್ರಕ್ಕೆ ನಾಯಕನಾಗಿ ಆಯ್ಕೆ ಆಗಿದ್ದಾರೆ. ಈ ಮೂಲಕ ತಮ್ಮ ಮೂರನೇ ಚಿತ್ರವನ್ನ ರಿಷಿ ಒಪ್ಪಿಕೊಂಡಿದ್ದಾರೆ. ಈ ಚಿತ್ರಕ್ಕೆ 'ಮಹಾರಥಿ' ಎಂದು ಟೈಟಲ್ ಕೂಡ ಅಂತಿಮವಾಗಿದೆ.

'ಅಲಮೇಲಮ್ಮ' ವಿಮರ್ಶೆ: ಸಿಂಪಲ್ಲಾಗ್ ಒಂದು 'ಕಿಡ್ನಾಪ್' ಸ್ಟೋರಿ

Operation Alamelamma Hero Rishi's Next Movie With Jayanna

ಈ ಹಿಂದೆ ತುಳುವಿನ 'ಚಾಲಿ ಪೋಲಿಲು' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ವೀರೇಂದ್ರ ಶೆಟ್ಟಿ 'ಮಹಾರಥಿ' ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಸದ್ಯ, ನಾಯಕನನ್ನ ಆಯ್ಕೆ ಮಾಡಿಕೊಂಡಿರುವ ಚಿತ್ರತಂಡ ಉಳಿದ ಕಲಾವಿದರು ಮತ್ತು ತಂತ್ರಜ್ಞರನ್ನ ಆಯ್ಕೆ ಮಾಡಿಕೊಳ್ಳಬೇಕಿದೆ.

'ಆಪರೇಷನ್ ಅಲಮೇಲಮ್ಮ' ಚಿತ್ರದ ನಂತರ 'ಗೋಧಿಬಣ್ಣ ಸಾಧರಣ ಮೈಕಟ್ಟು' ಖ್ಯಾತಿಯ ಹೇಮಂತ್ ರಾವ್ ನಿರ್ದೇಶನದಲ್ಲಿ ಸಿದ್ದವಾಗಲಿರುವ 'ಕವಲು ದಾರಿ' ಚಿತ್ರಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರವನ್ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿರ್ಮಾಣ ಮಾಡುತ್ತಿದ್ದಾರೆ. ಹೀಗಾಗಿ, ಮೊದಲು 'ಕವಲುದಾರಿ' ಸಿನಿಮಾ ಚಿತ್ರೀಕರಣ ಶುರು ಮಾಡಲಿದೆ. ನಂತರ 'ಮಹಾರಥಿ' ಸೆಟ್ಟೇರಲಿದ್ದು, ಈ ವರ್ಷದ ಕೊನೆಗೆ 'ಮಹಾರಥಿ' ಲಾಂಚ್ ಆಗಬಹುದು.

ಹಾಸ್ಯದಲ್ಲಿ ಸಸ್ಪೆನ್ಸ್ ತೋರಿಸಿದ ಸುನಿಯ 'ಅಲಮೇಲಮ್ಮ'ನಿಗೆ ವಿಮರ್ಶಕರು ಏನಂದ್ರು?

English summary
After Success of Operation Alamelamma, Actor Rishi sign a new Project With Producer Jayanna.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada