ರಾಮನ ಅವತಾರದ ಬಳಿಕ ಮತ್ತೊಂದು ಸಿನಿಮಾ; ಫುಲ್ ಬ್ಯುಸಿ 'ಕವಲುದಾರಿ' ನಟ ರಿಷಿ
ಕನ್ನಡದ ನಟ ರಿಷಿ ಅವರು ಇದೀಗ 'ರಾಮನ ಅವತಾರ' ಸಿನಿಮಾ ಮೂಲಕ ಬಹಳಷ್ಟು ಮುನ್ನೆಲೆಗೆ ಬಂದಿದ್ದಾರೆ. ಸದ್ಯ ಇವರ 'ರಾಮನ ಅವತಾರ' ಸಿನಿಮಾ ಥಿಯೇಟರ್‌ಗಳಲ್ಲಿ ಓಡುತ್ತಿದ್ದು, ಒಳ್ಳೆ ರೆಸ್ಪಾನ್ಸ್ ಪಡೆಯುತ್ತಿದೆ. ಪ್ರೇಕ್ಷಕರಿಗಂತೂ ಇದರಲ್ಲಿ ರಿಷಿ ಅವರ ನಟನೆ ಹಾಗೂ ರಾಮನ ಅವತಾರ ಸಿನಿಮಾ ಕಥೆ ಬಹಳ ಹಿಡಿಸಿದೆ.
ಇದರ ಬೆನ್ನಲ್ಲೇ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲು ರೆಡಿಯಾಗಿದ್ದಾರೆ ನಟ ರಿಷಿ. ಅಂದರೆ ಈ 'ರಾಮನ ಅವತಾರ' ಸಿನಿಮಾ ಥಿಯೇಟರ್‌ನಲ್ಲಿ ಇರುವಾಗಲೇ ಇನ್ನೊಂದು ಸಿನಿಮಾಗೆ ಸಹಿ ಹಾಕಿದ್ದಾರೆ ರಿಷಿ. ಹೌದು, ರಿಷಿ ಸದ್ಯಕ್ಕೆ ಸಿನಿಮಾ ರಂಗದಲ್ಲಿ ಬಹಳಷ್ಟು ಬ್ಯುಸಿ ಆಗುತ್ತಿರುವುದು ಅವರ ಅಭಿಮಾನಿಗಳಿಗೆ ಸಂತಸ ತಂದಿದೆ.

ಅಂದ ಹಾಗೆ ಹೊಸ ಸಿನಿಮಾ ಒಂದಕ್ಕೆ ಸಹಿ ಹಾಕಿರುವ ನಟ ರಿಷಿ ಅವರು ಮತ್ತೆ ಕನ್ನಡ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಟ ರಿಷಿ ಕನ್ನಡದಲ್ಲಿ 'ಆಪರೇಷನ್ ಅಲಮೇಲಮ್ಮ' ಸೇರಿದಂತೆ ಹಲವು ಸಿನಿಮಾಗಳನ್ನು ನೀಡಿದ್ದಾರೆ. ಅದಾದ ಮೇಲೆ ಇತ್ತೀಚೆಗೆ ತೆಲುಗು ಹಾಗು ತಮಿಳು ಸಿನಿಮಾ ಇಂಡಸ್ಟ್ರಿಗೂ ಪರಿಚಯವಾಗಿರುವ ರಿಷಿ ತಮ್ಮ ನಟನೆ ಮೂಲಕ ಅಲ್ಲಿಯ ಪ್ರೇಕ್ಷಕರನ್ನು ತನ್ನಡೆಗೆ ಸೆಳೆದುಕೊಳ್ಳುತ್ತಿದ್ದಾರೆ.
ತೆಲುಗಿನಲ್ಲಿ 'ಸೈತಾನ್' ಎಂಬ ವೆಬ್ ಸೀರೀಸ್ ಅನ್ನು ನೀಡಿದ ರಿಷಿ ಅಲ್ಲಿನ ಪ್ರೇಕ್ಷಕರ ಮನ ಗೆದ್ದಿರುವುದಂತೂ ನಿಜ. 'ಸೈತಾನ್' ವೆಬ್ ಸೀರೀಸ್ ನಲ್ಲಿನ ರಿಷಿ ಅವರ ನಟನೆಯವರಿಗೆ ಮತ್ತಷ್ಟು ಅವಕಾಶಗಳನ್ನು ನೀಡಿತು.
ಹೀಗಿರುವಾಗಲೇ ಇವರ 'ರಾಮನ ಅವತಾರ' ಸಿನಿಮಾ ಸದ್ಯಕ್ಕೆ ಬಹಳ ಸದ್ದು ಮಾಡುತ್ತಿದೆ. ಇದರ ಬೆನ್ನಲ್ಲೇ ಹೊಸ ಸಿನಿಮಾಗೆ ಸಹಿ ಹಾಕಿರುವ ರಿಷಿ ಅವರು ಹೊಸದೊಂದು ಪಾತ್ರದ ಮೂಲಕ ಪ್ರೇಕ್ಷಕರ ಮುಂದೆ ಬರಲು ತಯಾರಾಗುತ್ತಿದ್ದಾರೆ. ಅಂದ ಹಾಗೆ ಈ ಸಿನಿಮಾಗೆ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರ ಶಿಷ್ಯ ಕಿಶೋರ್ ಭಾರ್ಗವ ನಿರ್ದೇಶನ ಮಾಡಲಿದ್ದಾರೆ. ಈ ಮೂಲಕ ಮೊದಲ ಕನ್ನಡ ಸಿನಿಮಾ ಅವರದ್ದಾಗಲಿದೆ.

ಈ ಸಿನಿಮಾಗೆ ಪ್ರಮೋದ್ ನಾರಾಯಣ ಅವರು ನಿರ್ಮಾಪಕರು. ಅಂದಹಾಗೆ ಪ್ರಮೋದ್ ನಾರಾಯಣ್ ಅವರು ಈ ಮೊದಲು 'ಹಾಗೆ ಸುಮ್ಮನೆ', 'ಸಂಜು ವೆಡ್ಸ್ ಗೀತಾ' ಮುಂತಾದ ಸಿನಿಮಾಗಳನ್ನು ನಿರ್ಮಾಣ ಮಾಡಿ ಬಹಳಷ್ಟು ಯಶಸ್ಸು ಪಡೆದ್ದಿದ್ದರು. ಅದೇ ಸಂದರ್ಭದಲ್ಲಿ ಈ ಹೊಸ ಚಿತ್ರಕ್ಕೆ ಮತ್ತೆ ನಿರ್ಮಾಣ ಮಾಡಲು ಮುಂದೆ ಬಂದಿರುವವರು ಚಿತ್ರದ ಕಥೆ ಚೆನ್ನಾಗಿದೆ ಹಾಗಾಗಿ ಈ ನಿರ್ಧಾರಕ್ಕೆ ಬಂದಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಹೊಸ ಚಿತ್ರಕ್ಕೆ ಇನ್ನೂ ಹೆಸರು ಪಕ್ಕ ಆಗಿಲ್ಲದಿದ್ದರೂ ಚಿತ್ರದ ಕಥೆ ಬಹಳ ವಿಭಿನ್ನವಾಗಿದೆ ಎಂಬುದು ತಿಳಿದು ಬಂದಿದೆ. ರಿಷಿ ಅವರಿಂದ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಹೊರತು ಸಿನಿಮಾ ಯಾವಾಗ ಶೂಟಿಂಗ್ ಆರಂಭವಾಗಲಿದೆ ಹಾಗೂ ಇತರೆ ಪಾತ್ರಗಳನ್ನು ಯಾರು ನಿರ್ವಹಿಸಲಿದ್ದಾರೆ ಎಂಬಿತ್ಯಾದಿ ಮಾಹಿತಿ ಇನ್ನೂ ಹೊರಬಿದ್ದಿಲ್ಲ.
ಈ ಹೊಸ ಚಿತ್ರದ ಟೈಟಲ್ಲಿ ಇನ್ನೇನು ಸದ್ಯದಲ್ಲೇ ಬಿಡುಗಡೆಯಾಗಲಿದ್ದು, ಇದು ಬಹುಭಾಷಾ ಚಿತ್ರವಾಗಲಿದೆ ಎಂಬ ಸುದ್ದಿ ಹೊರ ಬಂದಿದೆ. ಈ ಬಗ್ಗೆ ಚಿತ್ರತಂಡವು ಸ್ಪಷ್ಟಣೆ ನೀಡಿದ್ದು ಈ ಸಿನಿಮಾ ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಬರಲಿದೆ. ಸಿನಿಮಾ ಕಥೆ ಯಾವ ರೀತಿ ಇರಲಿದೆ, ನಾಯಕ ನಟಿ ಯಾರು ಎಂಬುದರ ಬಗ್ಗೆ ಇನ್ನೂ ಮಾಹಿತಿ ಹೊರಬಿದ್ದಿಲ್ಲ ನಟ ರಿಷಿ ಅವರು ಕೂಡ ಈ ವಿಚಾರವಾಗಿ ಏನು ಹಂಚಿಕೊಂಡಿಲ್ಲ. ಆದರೆ ಪ್ರೊಡಕ್ಷನ್ ಹೌಸ್ ಹಾಗೂ ನಿರ್ದೇಶಕರನ್ನು ನೋಡಿ ಈಗಾಗಲೇ ಸಿನಿಮಾ ಒಳ್ಳೆಯ ರೀತಿಯಲ್ಲಿ ಹೊರ ಬರಲಿದೆ ಎಂಬ ಊಹಾಪೋಹ ಆರಂಭವಾಗಿದೆ.
ಅಂದಹಾಗೆ ನಟ ರಿಷಿ ಅವರು ಕನ್ನಡ ಸಿನಿ ಪ್ರೇಮಿಗಳನ್ನು ತನ್ನತ್ತ ಸೆಳೆದಂತೆಯೇ ತೆಲುಗು ಸಿನಿಪ್ರಿಯರಿಗೂ ಇಷ್ಟವಾಗಿದ್ದಾರೆ. ಸದ್ಯಕ್ಕೆ ತಮಿಳು ಚಿತ್ರರಂಗದಲ್ಲೂ ಬಹಳಷ್ಟು ಹೆಸರು ಮಾಡುತ್ತಿರುವ ರಿಷಿ ಉದಯೋನ್ಮುಖ ನಟನಾಗಿ ಗುರುತಿಸಿಕೊಳ್ಳುತ್ತಿದ್ದಾರೆ.
ನಟ ರಿಷಿ ಅವರ ಪರ್ಸನಾಲಿಟಿ, ವಾಯ್ಸ್, ಹಾಗೂ ನಟನೆಗೆ ವಿಶೇಷ ಫ್ಯಾನ್ ಬೇಸ್ ಇದೆ ಎಂದರೆ ತಪ್ಪಾಗಲ್ಲ. ಅಂದ ಹಾಗೆ ರಿಷಿಯವರು ಮೊದಲು 'ಅನುರೂಪ' ಸೇರಿದಂತೆ ಹಲವು ಕನ್ನಡ ಧಾರಾವಾಹಿಗಳಲ್ಲಿ ನಟಿಸಿದ್ದರು. ನಾಯಕ ನಟನಾಗಿ ಕಿರುತೆರೆಯಲ್ಲಿ ಮಿಂಚಿ ಇವರು ಕ್ರಮೇಣ ಸ್ಯಾಂಡಲ್ ವುಡ್ ಗೆ ಕಾಲಿಟ್ಟರು. 'ಆಪರೇಷನ್ ಅಲಮೇಲಮ್ಮ', 'ಕವಲುದಾರಿ', 'ನೋಡಿ ಸ್ವಾಮಿ ಇವನು ಇರೋದೇ ಹೀಗೆ', 'ಸಾರ್ವಜನಿಕರಿಗೆ ಸುವರ್ಣ ಅವಕಾಶ', 'ಆಟಗಾರ' ಸೇರಿದಂತೆ ಹಲವು ಸಿನಿಮಾಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿದ್ದಾರೆ. ಈ ಮೂಲಕ ಬಹಳಷ್ಟು ಹೆಸರನ್ನು ಮಾಡಿದ್ದಾರೆ.


Click it and Unblock the Notifications











