»   » ಒಸಾಮಾ ಬಗೆಗೊಂದು ಸಿನಿಮಾ

ಒಸಾಮಾ ಬಗೆಗೊಂದು ಸಿನಿಮಾ

Posted By: Staff
Subscribe to Filmibeat Kannada

ಕಳ್ಳರು ಸಮಾಜ ದ್ರೋಹಿಗಳೇ ಆದರೂ ಅವರ ಬಗ್ಗೆ ತಿಳಿಯುವ ಆಸೆ ಎಲ್ಲರಲ್ಲಿ ಇದ್ದೇ ಇರುತ್ತೆ ಅಲ್ವೇ ? ಸಿನೆಮಾದವರು ಜನರ ಈ ಆಸೆಯನ್ನೇ ಗಾಳ- ಬಂಡವಾಳವಾಗಿಸಿಕೊಂಡು ಭಾರೀ ಕಳ್ಳರ, ಸಮಾಜಘಾತುಕರ ಬಗ್ಗೆ ಚಿತ್ರ ತೆಗೆದು ಪ್ರೇಕ್ಷಕರ ಮುಂದಿಕ್ಕಿ ಗಂಟು ಮಾಡಿಕೊಂಡ ಉದಾಹರಣೆಗಳಿವೆ.

ಸದ್ಯಕ್ಕೆ ಸುದ್ದಿಯಲ್ಲಿರುವಾತ ಒಸಾಮಾ ಬಿನ್‌ ಲ್ಯಾಡೆನ್‌. ಇವನದು ಅಂತರರಾಷ್ಟ್ರೀಯ ಅಪಖ್ಯಾತಿಯಾದ್ದರಿಂದ ಸಿನೆಮಾದ ಪ್ಲಾನ್‌ ಹಾಕಿದ್ದು ಹಾಲಿವುಡ್‌ ಮಹಾನುಭಾವರು. ಬಲಿಷ್ಟ ರಾಷ್ಟ್ರ ಅಮೆರಿಕಾದ ಬುಡಕ್ಕೆ ಚಳಿನೀರು ಬಿಟ್ಟ ಒಸಾಮನ ಬಗ್ಗೆ ಬ್ರೇವೋ ಟು ರಿkುೕರೋ ಖ್ಯಾತಿಯ ಬ್ರಿಟಿಷ್‌ ಲೇಖಕ ಆ್ಯಂಡಿ ಮ್ಯಾಕ್‌ನಬ್‌ ಆಗಲೇ ಪುಸ್ತಕ ಬರೆದಿಟ್ಟಿದ್ದಾರೆ. ಪುಸ್ತಕದ ಹೆಸರು ಕ್ರೆೃಸಿಸ್‌ ಫೋರ್‌.

ಒಸಾಮನ ಬೇಟೆ ಸಾಗಿರುವಾಗ ಕ್ರೆೃಸಿಸ್‌ ಫೋರ್‌ ಪುಸ್ತಕ ಮಾರ್ಕೆಟ್‌ನಲ್ಲಿ ಚಕಚಕಅಂತ ಮಾರಾಟವಾಗುತ್ತಿದೆ. ಚಿತ್ರ ತಯಾರಿಸುವ ಉದ್ದೇಶದಿಂದ ಪುಸ್ತಕದ ಹಕ್ಕನ್ನು ಖರೀದಿಸಿದವರು ಹಾಲಿವುಡ್‌ನ ಮಿರಮ್ಯಾಕ್ಸ್‌.

ಕಾದಂಬರಿಕಾರ ಆ್ಯಂಡಿ ಮ್ಯಾಕ್‌ನಬ್‌ ಈ ವಿಷಯವನ್ನು ತಿಳಿಸಿರುವುದಾಗಿ ಟೆಲಿಗ್ರಾಫ್‌ ಪತ್ರಿಕೆ ವರದಿ ಹೇಳಿದೆ. ಕ್ರೆೃಸಿಸ್‌ ಫೋರ್‌ ಕಾದಂಬರಿ ಸೆಪ್ಟೆಂಬರ್‌ 11ರ ನ್ಯೂಯಾರ್ಕ್‌ ದುರಂತಕ್ಕಿಂತ ಬಹಳ ಮುಂಚೆಯೇ ಅಂದರೆ 1999ರಲ್ಲಿ ಪ್ರಕಟವಾಗಿತ್ತು. ಗಲ್ಫ್‌ ಯುದ್ಧದ ಸಂದರ್ಭದಲ್ಲಿ ಇರಾಕ್‌ನಲ್ಲಿ ತಮ್ಮ ತಂಡದ ಅನುಭವಗಳ ಬಗ್ಗೆ ಮ್ಯಾಕ್‌ನಬ್‌ ಬರೆದಿರುವ ಬ್ರೇವೋ ಟು ರಿkುೕರೋ ಎಂಬ ಪುಸ್ತಕ ಕೂಡ ಸಾಕಷ್ಟು ಪ್ರಸಿದ್ಧಿ ತಂದುಕೊಟ್ಟಿತ್ತು. 1.5 ಮಿಲಿಯನ್‌ ಪ್ರತಿಗಳು ಕೇವಲ ಬ್ರಿಟನ್‌ನಲ್ಲಿಯೇ ಮಾರಾಟವಾಗಿದ್ದವು.

ಕ್ರೆೃಸಿಸ್‌ ಫೋರ್‌ ಕಾದಂಬರಿಯಲ್ಲಿ ಸಾರಾ ಗ್ರೀನ್‌ವುಡ್‌ ಎಂಬ ಬ್ರಿಟಿಷ್‌ ಮಹಿಳೆಯ ಪಾತ್ರವಿದೆ. ಆಕೆ ತುಂಬ ಸುಂದರಿ ಹಾಗೂ ಜಾಣೆ ಕೂಡ . ಜೊತೆಗೆ ಮೋಸಗಾತಿ ಬೇರೆ. ಅಮೆರಿಕದ ರಕ್ಷಣಾದಳ ಹಾಗೂ ಶ್ವೇತಭವನ ರಹಸ್ಯ ಬೇಧಿಸಲು ಈಕೆಯನ್ನು ಲ್ಯಾಡೆನ್‌ ನೇಮಿಸುತ್ತಾನೆ. ಆ ಮೂಲಕ ಅಮೆರಿಕದ ಅಧ್ಯಕ್ಷರನ್ನು ಕೊಲ್ಲುವ ಸಂಚು ಲ್ಯಾಡೆನ್‌ನದು.

ಕಾದಂಬರಿಯ ನಾಯಕ ನಿಕ್‌ಸ್ಟೋನ್‌ ಎಂಬಾತನಿಗೆ ಲ್ಯಾಡೆನ್‌ನನ್ನು ಬೇಟೆಯಾಡುವ ಕಾಯಕ. ಮ್ಯಾಕನಬ್‌ ಹೇಳುವ ಪ್ರಕಾರ ಈ ಪಾತ್ರ ಭಾಗಶಃ ಆತ್ಮ ಕತೆ. ಸೆಪ್ಟೆಂಬರ್‌ 11ರ ದುರಂತ ಒಂದು ಆಕಸ್ಮಿಕವಾದರೂ ಆ ನಂತರ ಮ್ಯಾಕ್‌ನಬ್‌ ಅವರ ಈ ಪುಸ್ತಕಕ್ಕೆ ಸಿಕ್ಕಾಪಟ್ಟೆ ಬೇಡಿಕೆ ಬಂದುಬಿಟ್ಟಿದೆ. (ಇನ್ಫೋ ವಾರ್ತೆ)

English summary
A novel featuring Osama bin Laden behind a plot to blow up the White House is to be made into a Hollywood feature film by Miramax

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada