Oscars 2023: ಆಸ್ಕರ್‌ ಪ್ರಶಸ್ತಿಯ 16 ನಿರೂಪಕರ ಪಟ್ಟಿ ಪ್ರಕಟ; ದೀಪಿಕಾ ಪಡುಕೋಣೆಗೆ ಸ್ಥಾನ

ಸಿನಿಮಾ ಕ್ಷೇತ್ರದ ಅತಿದೊಡ್ಡ ಹಾಗೂ ಪ್ರತಿಷ್ಠಿತ ಪ್ರಶಸ್ತಿ ಎಂದೇ ಪರಿಗಣಿಸಲಾಗಿರುವ ಆಸ್ಕರ್‌ಗೆ ದಿನಗಣನೆ ಆರಂಭವಾಗಿದೆ. ಕಳೆದ ವರ್ಷ ಬಿಡುಗಡೆಗೊಂಡ ಚಿತ್ರಗಳು ಹಾಗೂ ಅವುಗಳಲ್ಲಿ ಕೆಲಸ ಮಾಡಿರುವ ಕೆಲಸಗಾರರ ಅತ್ಯುತ್ತಮ ಕೆಲಸವನ್ನು ಗುರುತಿಸಿ ಪ್ರಶಸ್ತಿ ನೀಡಲಾಗುತ್ತದೆ. ಈ ಬಾರಿಯ ಆಸ್ಕರ್ 95ನೇ ಅಕಾಡೆಮಿ ಅವಾರ್ಡ್ಸ್ ಆಗಿದ್ದು, ಲಾಸ್ ಏಂಜೆಲೀಸ್‌ನ ಡಾಲ್ಬಿ ಥಿಯೇಟರ್‌ನಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಜರುಗಲಿದೆ.

ಮಾರ್ಚ್ 12ರಂದು ಈ ಬಾರಿಯ ಆಸ್ಕರ್ ಅವಾರ್ಡ್ ಕಾರ್ಯಕ್ರಮ ಜರುಗಲಿದ್ದು, ಆ ದಿನದಂದು ಕಾರ್ಯಕ್ರಮದ ನಿರೂಪಣೆಯನ್ನು ಯಾರು ಮಾಡಲಿದ್ದಾರೆ ಎಂಬುದನ್ನು ಆಸ್ಕರ್ ಅಕಾಡೆಮಿ ತಿಳಿಸಿದೆ. ಸಾಮಾನ್ಯ ಅವಾರ್ಡ್ ಕಾರ್ಯಕ್ರಮಗಳಂತೆ ಕೇವಲ ಒಂದಿಬ್ಬರು ನಿರೂಪಕರು ಈ ಆಸ್ಕರ್ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ನಿರೂಪಣೆ ಮಾಡುವುದಿಲ್ಲ. ಬದಲಾಗಿ 16 ಕಲಾವಿದರು ನಿರೂಪಕರಾಗಿ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ.

Oscars 2023: Deepika Padukone will grace the event as presenter

16 ನಿರೂಪಕರು ಯಾರು ಯಾರು ಎಂಬ ಪಟ್ಟಿಯನ್ನು ಆಸ್ಕರ್ ಅಕಾಡೆಮಿ ಬಿಡುಗಡೆಗೊಳಿಸಿದ್ದು, ಈ ಪಟ್ಟಿಯಲ್ಲಿ ಬಾಲಿವುಡ್ ಸ್ಟಾರ್ ನಟಿ ದೀಪಿಕಾ ಪಡುಕೋಣೆ ಹೆಸರೂ ಸಹ ಇದೆ. ಇನ್ನು ಆಸ್ಕರ್ ವೇದಿಕೆಯಲ್ಲಿ ತಾನು ನಿರೂಪಣೆ ಮಾಡಲಿರುವುದರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ದೀಪಿಕಾ ಪಡುಕೋಣೆ ಸಂತಸ ವ್ಯಕ್ತಪಡಿಸಿದ್ದಾರೆ.

ದೀಪಿಕಾ ಪಡುಕೋಣೆ ಜತೆಗೆ ರಿಜ್ ಅಹ್ಮದ್, ಎಮಿಲಿ ಬ್ಲಂಟ್, ಗ್ಲೆನ್ ಕ್ಲೋಸ್, ಜೆನ್ನಿಫರ್ ಕೊನ್ನೆಲ್ಲಿ, ಏರಿಯಾನಾ ಡಿಬೋಸ್, ಸ್ಯಾಮುವೆಲ್ ಎಲ್ ಜ್ಯಾಕ್‌ಸನ್, ಡ್ವೇನ್ ಜಾನ್‌ಸನ್, ಮೈಕೆಲ್ ಬಿ ಜಾರ್ಡನ್, ಟ್ರಾಯ್ ಕಾಟ್‌ಸರ್, ಜೋನಾಥನ್ ಮೇಜರ್ಸ್, ಮೆಲಿಸ್ಸಾ ಮೆಕ್‌ಕಾರ್ತಿ, ಜೇನೆಲ್ಲ್ ಮೋನೆ, ಕ್ವೆಸ್ಟ್‌ಲವ್, ಜೋ ಸಲ್ಡಾನಾ ಹಾಗೂ ಡೊನ್ನಿ ಎನ್ ಈ ಬಾರಿಯ ಆಸ್ಕರ್ ಕಾರ್ಯಕ್ರಮದ ನಿರೂಪಣೆ ಮಾಡಲಿದ್ದಾರೆ.

ಕಳೆದ ವರ್ಷ ಬಿಡುಗಡೆಗೊಂಡು ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದ ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಚಿತ್ರದ ನಾಟು ನಾಟು ಹಾಡು ಸಹ ಈ ಬಾರಿಯ ಆಸ್ಕರ್ ಪ್ರಶಸ್ತಿಯಲ್ಲಿ ಬೆಸ್ಟ್ ಒರಿಜಿನಲ್ ಸಾಂಗ್ ಕೆಟಗರಿ ಅಡಿಯಲ್ಲಿ ನಾಮಿನೇಟ್ ಆಗಿದೆ. ಗೋಲ್ಡನ್ ಗ್ಲೋಬ್ ಅವಾರ್ಡ್ ಅನ್ನು ಮುಡಿಗೇರಿಸಿಕೊಂಡಿರುವ ನಾಟು ನಾಟು ಆಸ್ಕರ್ ಪ್ರಶಸ್ತಿಯನ್ನೂ ಸಹ ಗೆಲ್ಲಲಿದೆ ಎಂಬ ವಿಶ್ವಾಸ ಭಾರತದ ಸಿನಿ ರಸಿಕರಲ್ಲಿದೆ.

Oscars 2023: Deepika Padukone will grace the event as presenter

ಇನ್ನು ಚಿತ್ರದಲ್ಲಿ ನಾಟು ನಾಟು ಹಾಡಿಗೆ ಸ್ಟೆಪ್ ಹಾಕಿರುವ ನಟರಾದ ರಾಮ್ ಚರಣ್ ಹಾಗೂ ಜೂನಿಯರ್ ಎನ್‌ಟಿಆರ್ ಆಸ್ಕರ್ ಅವಾರ್ಡ್ ಲೈವ್ ಕಾರ್ಯಕ್ರಮದಲ್ಲಿಯೂ ಸಹ ಸ್ಟೇಜ್ ಹತ್ತಿ ನಾಟು ನಾಟು ಹಾಡಿಗೆ ಹೆಜ್ಜೆ ಹಾಕಲಿದ್ದಾರೆ. ಹಾಡನ್ನು ಹಾಡಿರುವ ರಾಹುಲ್ ಸಿಂಪ್ಲಿರಾಜ್ ಹಾಗೂ ಕಾಲ ಭೈರವ ಸಹ ಲೈವ್ ಪರ್ಫಾಮೆನ್ಸ್ ನೀಡಲಿದ್ದಾರೆ.

ಆರ್ ಆರ್ ಆರ್ ಜತೆಗೆ ಆಲ್ ದಟ್ ಬ್ರೀಥ್ಸ್ ಹಾಗೂ ದಿ ಎಲಿಫೆಂಟ್ ವಿಸ್ಪರರ್ಸ್ ಚಿತ್ರಗಳೂ ಸಹ ಈ ಬಾರಿಯ ಆಸ್ಕರ್ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡಿವೆ. ಈ ಚಿತ್ರಗಳ ಪೈಕಿ ಭಾರತದ ಪರ ಯಾವ ಚಿತ್ರ ಆಸ್ಕರ್ ಗೆದ್ದು ಬರಲಿದೆಯೋ ಕಾದು ನೋಡಬೇಕಿದೆ.

More from Filmibeat

English summary
Oscars 2023: Deepika Padukone will grace the event as presenter. Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X