»   » ಪರಭಾಷೆಯಲ್ಲಿ 'ರಾಜಕುಮಾರ'ನ ಹವಾ ಹೇಗಿದೆ ನೋಡಿ ಸ್ವಾಮಿ!

ಪರಭಾಷೆಯಲ್ಲಿ 'ರಾಜಕುಮಾರ'ನ ಹವಾ ಹೇಗಿದೆ ನೋಡಿ ಸ್ವಾಮಿ!

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನಲ್ಲಿ ಸದ್ಯ ಪುನೀತ್ ರಾಜ್ ಕುಮಾರ್ ಅಭಿನಯದ 'ರಾಜಕುಮಾರ' ಚಿತ್ರದ್ದೇ ಅಬ್ಬರ, ಸೌಂಡ್, ಕ್ರೇಜ್. ಆದ್ರೆ, ಈ ಅಬ್ಬರ, ಸೌಂಡ್, ಕ್ರೇಜ್ ಕೇವಲ ಸ್ಯಾಂಡಲ್ ವುಡ್ ನಲ್ಲಿ ಮಾತ್ರವಲ್ಲ, ಪರಭಾಷೆಯಲ್ಲೂ ಜೋರಾಗಿದೆ ಅಂದ್ರೆ ನೀವು ನಂಬಲೇಬೇಕು.

ಸಾಮಾನ್ಯವಾಗಿ 'ಕನ್ನಡ' ಚಿತ್ರಗಳ ಮೇಲೆ ಕನ್ನಡ ಕಲಾಭಿಮಾನಿಗಳು ಮತ್ತು ಕರ್ನಾಟಕದ ಜನತೆ ನಿರೀಕ್ಷೆ, ಕುತೂಹಲವನ್ನ ಇಟ್ಕೊಂಡಿರ್ತಾರೆ. ಆದ್ರೆ, 'ರಾಜಕುಮಾರ' ಚಿತ್ರಕ್ಕಾಗಿ, ಕನ್ನಡಿಗರ ಜೊತೆ ಪರಭಾಷಾ ಸಿನಿಪ್ರಿಯರು ಕೂಡ ಕಾದುಕುಂತಿದ್ದಾರೆ ಎನ್ನುವುದು 'ರಾಜಕುಮಾರ' ಚಿತ್ರದ ಸಿಕ್ಕ ಜಯ. ಮುಂದೆ ಓದಿ....

'ರಾಜಕುಮಾರ'ನಿಗೆ ಪರಭಾಷಾ ಅಭಿಮಾನಿಗಳಿಂದ ಪ್ರಶಂಸೆ

'ರಾಜಕುಮಾರ' ಚಿತ್ರದ ಟ್ರೈಲರ್ ಗೆ ಸಿನಿದುನಿಯಾದಲ್ಲಿ ಭರ್ಜರಿ ಪ್ರಶಂಸೆ ಸಿಕ್ಕಿದೆ. ಅದರಲ್ಲೂ ಪರಭಾಷಾ ತಾರೆಯರ ಅಭಿಮಾನಿಗಳು ರಾಜಕುಮಾರ ಟ್ರೈಲರ್ ನೋಡಿ ಮೆಚ್ಚಿಕೊಂಡು, ಕೊಂಡಾಡುತ್ತಿರುವುದು ನಿಜಕ್ಕೂ ವಿಶೇಷವೇ ಸರಿ.

ಮಹೇಶ್ ಬಾಬು ಫ್ಯಾನ್ಸ್!

''ಅದ್ಭುತವಾದ ಟ್ರೈಲರ್. ಪುನೀತ್ ರಾಜ್ ಕುಮಾರ್ ಅವರ ಕೆಲಸ ಯವಾಗಲೂ ಇಷ್ಟವಾಗುತ್ತೆ. ಅದು ಈ ಟ್ರೈಲರ್ ನಲ್ಲಿ ಮತ್ತಷ್ಟು ಹೆಚ್ಚು ಇಷ್ಟವಾಗುತ್ತೆ. ಸೂಪರ್ ಸ್ಟಾರ್ ಮಹೇಶ್ ಬಾಬು ಅಭಿಮಾನಿಗಳ ಕಡೆಯಿಂದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ 'ಆಲ್ ದಿ ಬೆಸ್ಟ್''

ಪ್ರಭಾಸ್ ಅಭಿಮಾನಿಗಳು!

''ಟ್ರೈಲರ್ ತುಂಬಾ ಚೆನ್ನಾಗಿದೆ. ಅಪ್ಪು ಸರ್ ಗ್ರೇಟ್ ಡ್ಯಾನ್ಸರ್. ಸಾಂಗ್ಸ್ ಸಖತ್ ಆಗಿದೆ. ಕಿಂಗ್ ಈಸ್ ಬ್ಯಾಕ್. ಪ್ರಭಾಸ್ ಅಭಿಮಾನಿಗಳು ಲವ್ ಯೂ ಅಪ್ಪು.....''

ಎನ್.ಟಿ.ಆರ್ ಫಾಲೋವರ್ಸ್!

''ಉತ್ತಮವಾದ ಟ್ರೈಲರ್. ರಾಜ್ ಕುಮಾರ್ ಸರ್ ತುಂಬಾ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಬ್ಲ್ಯಾಕ್ ಬಸ್ಟರ್ ಆಗುತ್ತೆ ಎನ್ನುವ ನಿರೀಕ್ಷೆ ಇದೆ. ಎನ್.ಟಿ.ಆರ್ ಅಭಿಮಾನಿಗಳ ಕಡೆಯಿಂದ ''ಆಲ್ ದಿ ಬೆಸ್ಟ್''

ಅಜಿತ್ ಅಭಿಮಾನಿಗಳು

''ಟ್ರೈಲರ್ ಸೂಪರ್ ಆಗಿದೆ. ಅಜಿತ್ ಅಭಿಮಾನಿಗಳಿಂದ 'ಆಲ್ ದಿ ಬೆಸ್ಟ್'' ಎಂದು ತಲಾ ಅಜಿತ್ ಅಭಿಮಾನಿಗಳು ರಾಜಕುಮಾರ ಟ್ರೈಲರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪವನ್ ಕಲ್ಯಾಣ್ ಫ್ಯಾನ್ಸ್!

''ಟ್ರೈಲರ್ ಮತ್ತು ಡ್ಯಾನ್ಸ್ ಎರಡು ಅದ್ಭುತವಾಗಿದೆ. ಪವನ್ ಕಲ್ಯಾಣ್ ಅಭಿಮಾನಿಗಳ ಕಡೆಯಿಂದ 'ರಾಜಕುಮಾರ' ಚಿತ್ರಕ್ಕೆ ''ಆಲ್ ದಿ ಬೆಸ್ಟ್''

English summary
Other industry Fans gives Good opinions to Puneeth Rajkumar Starrer 'Raajakumara' Movie Trailer. The Movie Directed by Santhosh Anandram.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada