'ಕೆಜಿಎಫ್' ಟ್ರೈಲರ್ ನೋಡಿ ಅಚ್ಚರಿಗೊಂಡ ಪರಭಾಷೆ ತಾರೆಯರು

Recommended Video

KGF Kannada Movie : ಯಶ್ ಕೆಜಿಎಫ್ ಟ್ರೈಲರ್ ನ ಮೆಚ್ಚಿಕೊಂಡ ಪರಭಾಷೆ ತಾರೆಯರು | FILMIBEAT KANNADA

ಕನ್ನಡದ ಕೆಜಿಎಫ್ ಸಿನಿಮಾ ತೆಲುಗಿನಲ್ಲಿ ಬರುತ್ತೆ, ತಮಿಳಲ್ಲಿ ಬರುತ್ತೆ, ಹಿಂದಿಯಲ್ಲೂ ತೆರೆಕಾಣುತ್ತೆ, ಮಲಯಾಳಂನಲ್ಲೂ ಬಿಡುಗಡೆಯಾಗುತ್ತೆ ಎಂದಾಗ ಕಾಲೆಳೆದವರು ಹೆಚ್ಚು. ಅಂತವರಿಗೆಲ್ಲಾ ಈಗ 'ಕೆಜಿಎಫ್' ಟ್ರೈಲರ್ ಉತ್ತರ ನೀಡಿದೆ.

ಕನ್ನಡ ಅಭಿಮಾನಿ, ಪ್ರೇಕ್ಷಕರು ಕೆಜಿಎಫ್ ಟ್ರೈಲರ್ ಮೆಚ್ಚಿಕೊಳ್ಳುವುದು ಸಾಮಾನ್ಯ. ಆದ್ರೆ, ಕನ್ನಡ ಬಿಟ್ಟು ಪರಭಾಷೆಯ ತಾರೆಯರು ಯಶ್ ಸಿನಿಮಾವನ್ನ ಅಪ್ಪಿಕೊಂಡು ಮುದ್ದಾಡುತ್ತಿದ್ದಾರೆ.

ಹಿಂದಿ, ತೆಲುಗು, ತಮಿಳು ಭಾಷೆಯ ಸ್ಟಾರ್ ಗಳು ಕೆಜಿಎಫ್ ಟ್ರೈಲರ್ ನೋಡಿ ಕೆಲವರು ಖುಷಿ ವ್ಯಕ್ತಪಡಿಸುತ್ತಿದ್ರೆ, ಮತ್ತೆ ಕೆಲವರು ದಿಗ್ಬ್ರಮೆ, ಅಚ್ಚರಿಯಾಗುತ್ತಿದ್ದಾರೆ. ಹಾಗಿದ್ರೆ, ಪರಭಾಷೆಯ ಯಾವ ತಾರೆ ಏನಂದ್ರು.? ಮುಂದೆ ಓದಿ....

ರಾಶಿ ಖನ್ನಾ

ರಾಶಿ ಖನ್ನಾ

ಸದ್ಯ, ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಮೋಡಿ ಮಾಡುತ್ತಿರುವ ನಟ ರಾಶಿ ಖನ್ನಾ ಕೆಜಿಎಫ್ ಟ್ರೈಲರ್ ನೋಡಿ ಮೆಚ್ಚಿಕೊಂಡಿದ್ದಾರೆ. ಈ ಬಗ್ಗೆ ಟ್ವಿಟ್ಟರ್ ನಲ್ಲಿ ಸಂತಸ ವ್ಯಕ್ತಪಡಿಸಿರುವ ರಾಶಿ, ಕೆಜಿಎಫ್ ತಂಡಕ್ಕೆ ಆಲ್ ದಿ ಬೆಸ್ಟ ಹೇಳಿದ್ದಾರೆ.

ವಿಶಾಲ್ ಟ್ವೀಟ್

ವಿಶಾಲ್ ಟ್ವೀಟ್

ಕೆಜಿಎಫ್ ಚಿತ್ರವನ್ನ ತಮಿಳಿನಲ್ಲಿ ಬಿಡುಗಡೆ ಮಾಡುತ್ತಿರುವ ನಟ ವಿಶಾಲ್, ತಮಿಳು ವರ್ಷನ್ ಟ್ರೈಲರ್ ಲಾಂಚ್ ಮಾಡಿದ್ರು. ಟ್ರೈಲರ್ ನೋಡಿ ಖುಷಿಯಾದ ವಿಶಾಲ್, ಯಶ್ ಮತ್ತು ತಂಡಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವರ್ಮಾ ಅಂತೂ ಫುಲ್ ಶಾಕ್

ವರ್ಮಾ ಅಂತೂ ಫುಲ್ ಶಾಕ್

ಭಾರತದ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಸಾಮಾನ್ಯವಾಗಿ ಸಿನಿಮಾಗಳನ್ನ ಮೆಚ್ಚಿಕೊಳ್ಳುವುದಿಲ್ಲ. ಅಂತಹದ್ರಲ್ಲಿ ಯಶ್ ಅಭಿನಯದ ಕೆಜಿಎಫ್ ಟ್ರೈಲರ್ ನೋಡಿ ಫುಲ್ ಥ್ರಿಲ್ ಆಗಿದ್ದಾರೆ. 'ರೋಮಾಂಚನಗೊಳಿಸುವ 'ಕೆ.ಜಿ.ಎಫ್' ಟ್ರೈಲರ್ ನ ನೀವು ನೋಡಲೇಬೇಕು. ಉತ್ತರ ಭಾರತ ಚಿತ್ರಗಳಿಗಿಂತ ದಕ್ಷಿಣ ಭಾರತದ ಚಿತ್ರಗಳು ಬೆಳೆಯುತ್ತಿವೆ'' ಎಂದು ಶುಭಕೋರಿದ್ದಾರೆ.

ರಾಣಾ ದಗ್ಗು ಬಾಟಿ

ರಾಣಾ ದಗ್ಗು ಬಾಟಿ

ಬಾಹುಬಲಿ ಚಿತ್ರದಲ್ಲಿ ಭಲ್ಲಾಳದೇವನ ಪಾತ್ರದ ಮೂಲಕ ಭಾರತೀಯ ಸಿನಿ ಪ್ರೇಮಿಗಳ ಮನಸ್ಸು ಗೆದ್ದ ನಟ ರಾಣಾ ದಗ್ಗುಬಾಟಿ ಕೆಜಿಎಫ್ ಟ್ರೈಲರ್ ಕಂಡು ಆಲ್ ದಿ ಬೆಸ್ ಹೇಳಿದ್ದಾರೆ.

ಬಾಲಿವುಡ್ ವಿಶ್ಲೇಷಕ

ಬಾಲಿವುಡ್ ವಿಶ್ಲೇಷಕ

ಹಿಂದಿ ಸಿನಿಮಾಗಳನ್ನ ವಿಮರ್ಶಕ ಹಾಗೂ ವಿಶ್ಲೇಷಕ ತರಣ್ ಆದರ್ಶ್ ಅವರು ಕೆಜಿಎಫ್ ಟ್ರೈಲರ್ ನೋಡಿ ಅಚ್ಚರಿಯಾಗಿದ್ದಾರೆ. 'ಅದ್ಭುತ' ಎಂದು ಟ್ವೀಟ್ ಮಾಡಿರುವ ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಫರಾನ್ ಅಖ್ತರ್

ಫರಾನ್ ಅಖ್ತರ್

ಇನ್ನೂ ಹಿಂದಿಯಲ್ಲಿ ಕೆಜಿಎಫ್ ಚಿತ್ರವನ್ನ ವಿತರಣೆ ಮಾಡುತ್ತಿರುವವರ ಪೈಕಿ ಫರಾನ್ ಅಖ್ತರ್ ಕೂಡ ಒಬ್ಬರು. ಫರಾನ್ ಕೂಡ ಕೆಜಿಎಫ್ ಟ್ರೈಲರ್ ನೋಡಿ ಹ್ಯಾಪಿಯಾಗಿದ್ದಾರೆ.

More from Filmibeat

English summary
Tamil actor Vishal, ram gopal varma, rana ddggubatti, faran akthar have taken their Twitter accounts to appreciate Yash starrer KGF Trailer.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X