ಬಳ್ಳಾರಿ ಜೈಲಿನಲ್ಲಿರುವ ದರ್ಶನ್‌ಗೆ ಗುಡ್ ನ್ಯೂಸ್...?

By ಫಿಲ್ಮಿಬೀಟ್ ಡೆಸ್ಕ್

ದರ್ಶನ್ ಹಣೆಬರಹ ಇಂದು ನಿರ್ಧಾರವಾಗಲಿದೆ. ಜೈಲಾ-ಬೇಲಾ ತೀರ್ಪು ಸದ್ಯದಲ್ಲಿಯೇ ಹೊರ ಬರಲಿದೆ. ಇದರ ನಡುವೆ ಸೋಮವಾರದ ಮುಂಜಾನೆಯ ಆರಂಭದಲ್ಲಿಯೇ ದರ್ಶನ್‌ಗ ಶುಭ ಸುದ್ದಿಯೊಂದು ಸಿಕ್ಕಿದೆ. ಇನ್ನುಳಿದ ಎರಡು ಪ್ರಕರಣಗಳಲ್ಲಿ ಒಂದರಲ್ಲಿ ದರ್ಶನ್‌ಗೆ ಕ್ಲೀನ್ ಚಿಟ್ ಸಿಗುವ ಸಾಧ್ಯತೆ ಇದೆ.

ಹೌದು, ಅಸಲಿಗೆ ಬಳ್ಳಾರಿ ಜೈಲಿಗೆ ತೆರಳುವ ಮುನ್ನ ದರ್ಶನ್ ತಮ್ಮ ಪಾಡಿಗೆ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ನೆಮ್ಮದಿಯಿಂದ ಇದ್ದರು. ನಾಲ್ಕು ಗೋಡೆಗಳ ನಡುವೆ ಕಾಲ ಕಳೆಯುತ್ತಿದ್ದರು. ನೆಮ್ಮದಿಯಿಂದ ಇದ್ದಾರಾ, ಜೈಲಿನಲ್ಲಿ ಕಣ್ಣೀರು ಹಾಕುತ್ತಿದ್ದಾರಾ ಅನ್ನುವುದು ಯಾರೆಂದರೆ ಯಾರಿಗೂ ಗೊತ್ತಿರಲಿಲ್ಲ. ಆದರೆ.. ಅದ್ಯಾರು ಮಸಲತ್ತು ಮಾಡಿದರೋ, ಜೈಲಿನಲ್ಲಿ ದರ್ಶನ್ ನಡೆಸುತ್ತಿದ್ದ ಐಶಾರಾಮಿ ಜೀವನ ಜಗಜ್ಜಾಹೀರಾಯಿತು. . ಕಳೆದ ಇಪ್ಪತ್ತು ವರ್ಷಗಳಿಂದ ಕೊಲೆ, ಸುಲಿಗೆ, ಬೆದರಿಕೆ ಸೇರಿ ಹಲವು ಪ್ರಕರಣದಲ್ಲಿ ಭಾಗಿಯಾದ ವಿಲ್ಸನ್ ಗಾರ್ಡನ್ ನಾಗನ ಸಹವಾಸವನ್ನು ದರ್ಶನ್ ಮಾಡಿರುವ ವಿಚಾರ ಎಲ್ಲರಿಗೆ ಗೊತ್ತಾಯಿತು. ಇವರ ಈ ಸ್ನೇಹಕ್ಕೆ ಕೈಗನ್ನಡಿ ಹಿಡಿಯುವಂತೆ ಕೈಯಲ್ಲಿ ಕಾಫಿ ಮಗ್, ಮತ್ತೊಂದು ಕೈಯಲ್ಲಿ ಸಿಗರೇಟ್ ಹಿಡಿದು ಕುಂತ ದರ್ಶನ್ ಫೋಟೋ ವೈರಲ್ ಆಗಿತ್ತು.

Out of two separate FIRs jailed actor Darshan may get relief in this case

ಇದು ಸಾಲದೆಂಬಂತೆ ಪರಪ್ಪನ ಅಗ್ರಹಾರದ ಜೈಲಿನ ಬ್ಯಾರಕ್‌ನಲ್ಲಿಇದ್ದುಕೊಂಡೇ ದರ್ಶನ್ ವಿಡಿಯೋ ಕಾಲ್ ಮಾಡಿದ್ದರು. ಕೆಎಲ್‌ಇ ಕಾಲೇಜ್ ವಿದ್ಥಾರ್ಥಿಗಳಿಗೆ ಉಲ್ಟಾ ಮಚ್ಚಿನಲ್ಲಿ ಹೊಡೆದು ಜೈಲು ಪಾಲಾಗಿ ಆ ನಂತರ ಜಾಮೀನು ಪಡೆದು ಬಂದಿದ್ದ ಬ್ಯಾಡರಹಳ್ಳಿ ರೌಡಿಶೀಟರ್ ಜಾನಿ ಅಲಿಯಾಸ್ ಜನಾರ್ಧನ್ ಮಗ ಸತ್ಯ ಜೊತೆ ಮಾತನಾಡಿದ್ದರು. ಪರಪ್ಪನ ಅಗ್ರಹಾರದಲ್ಲಿ ದರ್ಶನ್ ಅವರ ವಿಲಾಸಿ ಜೀವನ ಕಂಡು ಬೆಚ್ಚಿ ಬಿದ್ದ ಅನೇಕರು ಇದೆಲ್ಲ ಹೇಗೆ ಸಾಧ್ಯ ಎಂದು ಪ್ರಶ್ನೆ ಮಾಡಿದ್ದರು. ಐಶಾರಾಮಿ ಜೀವನ ನಡೆಸಲು ಅನುಮತಿಯನ್ನೂ ನೀಡಿದ್ದಾದರೂ ಯಾರು ಎಂದು ಕಿಡಿ ಕಾರಿದ್ದರು. ದರ್ಶನ್ ಅವರ ಈ ಐಶಾರಾಮಿ ಬದುಕಿನ ಹಿಂದೆ ಇರುವುದು ಅಧಿಕಾರಿಗಳಾ..? ಆಪ್ತರಾ..? ರೌಡಿಗಳಾ..? ಪ್ರಭಾವಿ ರಾಜಕಾರಣಿಗಳಾ..? ಯಾರ ಕೃಪೆಯಿಂದ ದರ್ಶನ್ ಇಷ್ಟೊಂದು ನೆಮ್ಮದಿಯಾಗಿ ಜೈಲಿನಲ್ಲಿ ಇದ್ದಾರೆ ಎಂದು ಆಕ್ರೋಶವನ್ನು ವ್ಯಕ್ತಪಡಿಸಿದ್ದರು.

ಈ ಹಿನ್ನೆಲೆ ದರ್ಶನ್ ವಿರುದ್ಧ ಇನ್ನೆರಡು ಎಫ್‌ಐಆರ್ ದಾಖಲಿಸಲಾಗಿತ್ತು. ಪರಪ್ಪನ ಅಗ್ರಹಾರದಿಂದ ಬಳ್ಳಾರಿಗೆ ಶಿಫ್ಟ್ ಮಾಡಲಾಯ್ತು. ಆದರೆ ಈಗ ಈ ಎರಡು ಎಫ್‌ಐಆರ್ ಪೈಕಿ ಒಂದರಲ್ಲಿ ಈಗ ದರ್ಶನ್‌ಗೆ ಕ್ಲೀನ್ ಚಿಟ್ ಸಿಗುವ ಸಾಧ್ಯತೆ ಇದೆ. ಹೌದು, ವಿಡಿಯೋ ಕಾಲ್‌ ಮಾಡಿ ದರ್ಶನ್ ಮಾತನಾಡಿದ ಕುರಿತು ತನಿಖೆ ನಡೆದಿದ್ದು, ದರ್ಶನ್ ಫೋನ್ ಬಳಸಿಲ್ಲ ಅನ್ನುವುದು ಸಾಬೀತಾಗಿದೆ. ಜಾಮೀನು ಪಡೆದ ಹೊರ ಹೋಗಿದ್ದ ಸತ್ಯ ಮಾರ್ಕೆಟ್ ಧರ್ಮನಿಗೆ ವಿಡಿಯೋ ಕಾಲ್ ಮಾಡಿದ್ದ, ಸತ್ಯಗೆ ದರ್ಶನ್ ಅವರಿಂದ ಧರ್ಮ ಹಾಯ್ ಹೇಳಿಸಿದ್ದ ಅಷ್ಟೇ ಹೊರತು ದರ್ಶನ್ ಮೊಬೈಲ್ ಬಳಿಸಿಲ್ಲ, ಕರೆ ಮಾಡಿಲ್ಲ ಎನ್ನುವ ಮಾತು ಕೇಳಿ ಬರುತ್ತಿದೆ. ಹೀಗಾಗಿ ಈ ಪ್ರಕರಣದಲ್ಲಿ ರಿಲೀಫ್ ಸಿಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಇನ್ನುಳಿದಂತೆ ಇಂದು ದರ್ಶನ್ ಅವರ ಜಾಮೀನು ಅರ್ಜಿ ವಿಚಾರಣೆ ಹೈಕೋರ್ಟ್‌ ನಲ್ಲಿ ನಡೆಯಲಿದೆ. ಹೈಕೋರ್ಟ್‌ನಲ್ಲಿ ಇಂದು ದರ್ಶನ್ ಜಾಮೀನು ಅರ್ಜಿಯ ವಿಚಾರಣೆ ನಡೆಯಲಿದೆ. ದರ್ಶನ್‌ಗೆ ಜೈಲಾ ಬೇಲಾ ಎನ್ನುವುದು ಕೂಡ ನಿರ್ಧಾರವಾಗಲಿದೆ. ಬೆನ್ನು ನೋವಿಗೆ ದರ್ಶನ್ ಚಿಕಿತ್ಸೆ ಪಡೆಯುವ ಅವಶ್ಯಕತೆ ಇದೆ ಎಂಬ ವಿಚಾರವನ್ನು ಮುಂದಿಟ್ಟುಕೊಂಡು ದರ್ಶನ್ ಪರ ವಕೀಲರು ವಾದ ಮಂಡಿಸಲಿದ್ದಾರೆ.

More from Filmibeat

Read more about: darshan arrest sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X