twitter
    For Quick Alerts
    ALLOW NOTIFICATIONS  
    For Daily Alerts

    Breaking: ಜೂನ್ 21ರಿಂದ ಹೊರಾಂಗಣ ಚಿತ್ರೀಕರಣಕ್ಕೆ ಅನುಮತಿ

    |

    ಅನ್‌ಲಾಕ್ ಹಿನ್ನೆಲೆ ರಾಜ್ಯದಲ್ಲಿ ಹೊರಾಂಗಣ ಚಿತ್ರೀಕರಣಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಿದೆ. ಸೋಮವಾರದಿಂದ ರಾಜ್ಯದಲ್ಲಿ ಸಿನಿಮಾ, ಧಾರಾವಾಹಿ ಹಾಗೂ ಟಿವಿ ಕಾರ್ಯಕ್ರಮಗಳ ಚಿತ್ರೀಕರಣ ಮಾಡಬಹುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ.

    Recommended Video

    Karnataka Unlock: Yediyurappa ಹೇಳಿಕೆ ಕೇಳಿ ನಿಟ್ಟುಸಿರು ಬಿಟ್ಟ ಚಿತ್ರರಂಗ | Filmibeat Kannada

    ಜೂನ್ 21 ರಿಂದ ಹೊರಾಂಗಣದಲ್ಲಿ ಶೂಟಿಂಗ್ ಮಾಡಬಹುದು, ಸೂಕ್ತ ಮುಂಜಾಗ್ರತೆ ಕ್ರಮ ಜರುಗಿಸಿಕೊಳ್ಳಬೇಕು ಎಂದು ಸಿಎಂ ಸೂಚನೆ ಕೊಟ್ಟಿದ್ದಾರೆ.

    outdoor-shooting-start-from-june-21st

    ಆದರೆ, ಚಿತ್ರಮಂದಿರಗಳ ಮೇಲಿನ ನಿರ್ಬಂಧ ಮುಂದುವರಿದೆ. ಥಿಯೇಟರ್ ತೆರೆಯಲು ಸರ್ಕಾರ ಅವಕಾಶ ಕೊಟ್ಟಿಲ್ಲ. ಜೂನ್ 21 ರಿಂದ ಜುಲೈ 5ರವರೆಗೂ ಈ ಆದೇಶ ಜಾರಿಯಲ್ಲಿದ್ದು, ಪರಿಸ್ಥಿತಿ ಅವಲೋಕಿಸಿ ಮುಂದಿನ ಬದಲಾವಣೆ ತೆಗೆದುಕೊಳ್ಳಲಾಗುವುದು ಎಂದು ಸಿಎಂ ಹೇಳಿದ್ದಾರೆ.

    ಅನ್‌ಲಾಕ್ 2.0; ಜೂನ್ 21ರಿಂದ ಏನಿರುತ್ತೆ? ಏನಿರಲ್ಲ?

    ಲಾಕ್‌ಡೌನ್ ಜಾರಿಯಾದ ದಿನದಿಂದ ರಾಜ್ಯದಲ್ಲಿ ಶೂಟಿಂಗ್ ರದ್ದುಗೊಂಡಿತ್ತು. ಕನ್ನಡದ ಧಾರಾವಾಹಿ ತಂಡಗಳು ಹೈದರಾಬಾದ್‌ಗೆ ತೆರಳಿ ಚಿತ್ರೀಕರಣ ಮಾಡುತ್ತಿವೆ. ಈ ಕಡೆ ರಿಯಾಲಿಟಿ ಶೋಗಳು ಶೂಟಿಂಗ್ ಸಹ ಸವಾಲಾಗಿತ್ತು. ಸರ್ಕಾರದ ಈ ಆದೇಶದಿಂದ ಸಿನಿಮಾ ಹಾಗೂ ಟಿವಿ ಇಂಡಸ್ಟ್ರಿ ನಿಟ್ಟುಸಿರು ಬಿಟ್ಟಿದೆ.

    ಇನ್ನುಳಿದಂತೆ ವೀಕೆಂಡ್ ಲಾಕ್‌ಡೌನ್, ನೈಟ್‌ಕರ್ಫ್ಯೂ ಯಥಾಸ್ಥಿತಿ ಮುಂದುವರಿಯಲಿದೆ. ಈ ಹಿನ್ನೆಲೆ ನಿರ್ದಿಷ್ಟ ಸಮಯದಲ್ಲಿ ಮಾತ್ರ ಚಿತ್ರೀಕರಣ ಮಾಡಬೇಕಾಗಿದೆ.

    English summary
    Karnataka Unlock: Outdoor shooting start from june 21st announced CM Yediyurappa.
    Saturday, June 19, 2021, 20:01
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X