'ಕೆಜಿಎಫ್ 2' ಟ್ರೈಲರ್ ನೋಡಿದ ಸೆನ್ಸಾರ್‌ ಸದಸ್ಯನ ಪ್ರತಿಕ್ರಿಯೆ ಹೀಗಿದೆ

'ಕೆಜಿಎಫ್ 2' ಸಿನಿಮಾ ಬಿಡುಗಡೆ ದಿನಾಂಕ ಹತ್ತಿವಾಗುತ್ತಿದೆ. ಸಿನಿಮಾದ ಬಿಡುಗಡೆಗೆ ಐವತ್ತಕ್ಕೂ ಕಡಿಮೆ ದಿನಗಳಷ್ಟೆ ಉಳಿದಿವೆ.

ಕೆಲವು ದಿನಗಳ ಹಿಂದಷ್ಟೆ 'ಕೆಜಿಎಫ್ 2' ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಮ್ಸ್ ನವರು ಸಾಮಾಜಿಕ ಜಾಲತಾಣದಲ್ಲಿ ಪೋಲ್ ಒಂದನ್ನು ಪ್ರಕಟಿಸಿ, 'ಕೆಜಿಎಫ್ 2' ಸಿನಿಮಾದ ಟ್ರೇಲರ್ ಬೇಕಾ? ಹಾಡು ಬೇಕಾ ಅಥವಾ ಸರ್ಪ್ರೈಸ್ ಬೇಕಾ? ಎಂದು ಆಯ್ಕೆ ನೀಡಿದ್ದರು.

ಪೋಲ್‌ಗೆ ಮತ ಚಲಾಯಿಸಿದ್ದ ಅಭಿಮಾನಿಗಳು ತಮಗೆ ಸಿನಿಮಾದ ಟ್ರೇಲರ್ ಬೇಕೆಂದು ಮನವಿ ಮಾಡಿದ್ದರು. ಇದೀಗ ಹೊಂಬಾಳೆಯು 'ಕೆಜಿಎಫ್ 2' ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಲು ಸಜ್ಜಾಗಿದ್ದು, ಈಗಾಗಲೇ ಟ್ರೇಲರ್ ರೆಡಿಯಾಗಿದೆ.

ಹೊರ ದೇಶಗಳಲ್ಲಿಯೂ ಟ್ರೇಲರ್ ಬಿಡುಗಡೆ ಮಾಡಲು ಟ್ರೇಲರ್‌ನ ಸೆನ್ಸಾರ್ ಮಾಡಲಾಗಿದ್ದು, 'ಕೆಜಿಎಫ್ 2' ಸಿನಿಮಾದ ಟ್ರೇಲರ್‌ ನೋಡಿದ ಸೆನ್ಸಾರ್‌ ಸದಸ್ಯರೊಬ್ಬರು ಅಭಿಪ್ರಾಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಉಮೈರ್ ಸಾಂಧು ಹೆಸರಿನ ಸಾಗರೋತ್ತರ ಸೆನ್ಸಾರ್‌ಬೋರ್ಡ್ ಸದಸ್ಯ ತಾವು 'ಕೆಜಿಎಫ್ 2' ಸಿನಿಮಾದ ಸೆನ್ಸಾರ್ ನೋಡಿದ್ದಾಗಿಯೂ ಟ್ರೇಲರ್ ಅತ್ಯದ್ಭುತವಾಗಿದೆ ಎಂದಿದ್ದಾರೆ. ಟ್ರೇಲರ್‌ ನೋಡಿದ ಮೇಲೆ ನನಗೆ ಮಾತುಗಳೆ ಹೊರಡುತ್ತಿಲ್ಲ. ಮಾನ್ಸ್ಟರ್ ಹಿಟ್ ನಿಮಗಾಗಿ ಬರುತ್ತಿದೆ. ಯಶ್‌ಗೆ ದೊಡ್ಡ ಅಭಿನಂದನೆಗಳು'' ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ.

Overseas Censor Board Member Umair Sandu Review About KGF 2 Trailer

ಉಮೈರ್ ಸಾಂಧು ಹೀಗೆ ಸಿನಿಮಾಗಳ, ಟ್ರೇಲರ್‌ಗಳ ವಿಮರ್ಶೆ ಮಾಡುತ್ತಿರುವುದು ಇದು ಮೊದಲೇನೂ ಅಲ್ಲ. ದಕ್ಷಿಣ ಭಾರತದ ಬಹುತೇಕ ಭಾರಿ ನಿರೀಕ್ಷಿತ ಸಿನಿಮಾಗಳು ಬಿಡುಗಡೆ ಆಗುವ ಮುನ್ನವೇ ನೋಡಿ ಅದರ ಚುಟುಕು ವಿಮರ್ಶೆಯನ್ನು ಪ್ರಕಟಿಸುತ್ತಾರೆ.

ಮಾರ್ಚ್ 11 ರಂದು ಬಿಡುಗಡೆ ಆಗಲಿರುವ 'ರಾಧೆ-ಶ್ಯಾಮ್' ಸಿನಿಮಾವನ್ನು ಈಗಾಗಲೇ ವೀಕ್ಷಿಸಿರುವುದಾಗಿ ಹೇಳಿರುವ ಉಮೈರ್ ಸಾಂಧು, ''ಕ್ಲಾಸಿ, ಸ್ಟೈಲಿಷ್, ಥ್ರಿಲ್ಲಿಂಗ್, ನಿಗೂಢ ಮತ್ತು ರೊಮ್ಯಾಂಟಿಕ್ ಆಗಿದೆ 'ರಾಧೆ ಶ್ಯಾಮ್. ಪ್ರಭಾಸ್ ನಟನೆ ಸೂಪರ್'' ಎಂದು ಪೋಸ್ಟ್ ಮಾಡಿದ್ದಾರೆ.

'ಕೆಜಿಎಫ್: ಚಾಪ್ಟರ್ 1' ಬಿಡುಗಡೆ ಆದಾಗಲೂ ಸಿನಿಮಾವನ್ನು ವಿಮರ್ಶೆ ಮಾಡಿದ್ದ ಉಮೈರ್ ಸಾಂಧು ಸಿನಿಮಾ ಅದ್ಭುತವಾಗಿದೆ ಎಂದು ಹೇಳಿದ್ದರು. ಹಾಗೂ ಒಂದೂ ಕಟ್ ಮಾಡದೆ ಸಿನಿಮಾವನ್ನು ಪಾಸ್ ಮಾಡಿರುವದಾಗಿ ಹೇಳಿದ್ದರು.

'ಕೆಜಿಎಫ್ 2' ಸಿನಿಮಾದ ಟ್ರೇಲರ್ ಮಾರ್ಚ್ 27 ನೇ ತಾರೀಖಿನಂದು ಬಿಡುಗಡೆ ಆಗಲಿದೆ. ಈ ಬಗ್ಗೆ ನಿರ್ಮಾಣ ಸಂಸ್ಥೆ ಹೊಂಬಾಳೆ ಘೋಷಿಸಿದೆ. 'ಕೆಜಿಎಫ್ 2' ಸಿನಿಮಾದ ಟೀಸರ್ ಬಿಡುಗಡೆ ಆಗಿದ್ದಾಗ ಅದು ಸೋರಿಕೆ ಆಗಿ ವಿವಾದ ಉಂಟಾಗಿತ್ತು. ಈ ಬಾರಿ ಚಿತ್ರತಂಡ ಹೆಚ್ಚಿನ ಜಾಗರೂಕತೆ ವಹಿಸುವ ನಿರೀಕ್ಷೆ ಇದೆ. ಟೀಸರ್ ಮಾಡಿದ್ದ ದಾಖಲೆಗಳನ್ನು ಟ್ರೈಲರ್ ಮುರಿಯುವ ವಿಶ್ವಾಸವೂ ಇದೆ.

'ಕೆಜಿಎಫ್ 2' ಸಿನಿಮಾವು ಏಪ್ರಿಲ್ 14 ರಂದು ಬಿಡುಗಡೆ ಆಗಲಿದೆ. ಈ ಸಿನಿಮಾದಲ್ಲಿ ಯಶ್ ಜೊತೆಗೆ ಸಂಜಯ್ ದತ್, ರವೀನಾ ಟಂಡನ್, ಪ್ರಕಾಶ್ ರೈ, ತೆಲುಗಿನ ರಾವ್ ರಮೇಶ್ ಇನ್ನೂ ಹಲವು ಪ್ರತಿಭಾವಂತ ನಟರು ನಟಿಸುತ್ತಿದ್ದಾರೆ. 'ಕೆಜಿಎಫ್ 2' ಭಾರತದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿದ್ದು ಸಿನಿಮಾದ ಬಿಡುಗಡೆಗೆ ದೇಶದ ಸಿನಿಮಾ ಪ್ರೇಮಿಗಳು ಕಾಯುತ್ತಿದ್ದಾರೆ.

More from Filmibeat

English summary
Overseas censor board member Umair Sandu said he watched KGF 2 movie trailer and liked it. He said trailer is super.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X