For Quick Alerts
  ALLOW NOTIFICATIONS  
  For Daily Alerts

  ಸುದೀಪ್ ಬ್ಯಾಟಿಂಗ್ ಬಗ್ಗೆ ಇಂಗ್ಲೆಂಡ್ ಆಟಗಾರನಿಂದ ಕಾಮೆಂಟ್.!

  By Bharath Kumar
  |
  ಸಿ ಸಿ ಎಲ್ 2017 : ಸುದೀಪ್ ಬ್ಯಾಟಿಂಗ್ ಸ್ಟೈಲ್ ಗೆ ಇಂಗ್ಲೆಂಡ್ ಆಟಗಾರ ಫಿದಾ | FIlmibeat Kannada

  ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಬ್ಯಾಟಿಂಗ್ ಶೈಲಿಯನ್ನ ಇಂಗ್ಲೆಂಡ್ ನ ಖ್ಯಾತ ಕ್ರಿಕೆಟ್ ಆಟಗಾರ ಮೆಚ್ಚಿಕೊಂಡಿದ್ದಾರೆ. ಪ್ರಾಕ್ಟೀಸ್ ವೇಳೆ ಸುದೀಪ್ ಮಾಡಿರುವ ಬ್ಯಾಟಿಂಗ್ ಬಗ್ಗೆ ಈ ಆಟಗಾರ ಟ್ವೀಟ್ ಮಾಡಿ ಹೊಗಳಿದ್ದಾರೆ.

  ಅಂದ್ಹಾಗೆ, ಸುದೀಪ್ ಅವರು ಒಂದು ರೀತಿಯ ಆಲ್ ರೌಂಡರ್. ಅಂದ್ರೆ, ಕೇವಲ ಸಿನಿಮಾದಲ್ಲಿ ಮಾತ್ರವಲ್ಲ, ಸಿನಿಮಾ ಬಿಟ್ಟು ಕೂಡ ವಿವಿಧ ಕ್ಷೇತ್ರಗಳಲ್ಲಿ ಸುದೀಪ್ ಖ್ಯಾತಿಗಳಿಸಿಕೊಂಡಿದ್ದಾರೆ. ಸಿನಿಮಾ ಬಿಟ್ಟರೆ ಸುದೀಪ್ ಹೆಚ್ಚು ಆಸಕ್ತಿ ಹೊಂದಿರುವುದು ಕ್ರಿಕೆಟ್.

  ಸದ್ಯ, ಸಿಸಿಎಲ್ ಟೂರ್ನಿಗೆ ಸಜ್ಜಾಗುತ್ತಿರುವ ಕಿಚ್ಚ ಮೈದಾನದಲ್ಲಿ ಬೆವರು ಸುರಿಸುತ್ತಿದ್ದಾರೆ. ಹಾಗಿದ್ರೆ, ಸುದೀಪ್ ಅವರ ಬಗ್ಗೆ ಮಾಡಿರುವ ಆ ಇಂಗ್ಲೆಂಡ್ ಆಟಗಾರ ಯಾರು? ಎಂದು ಮುಂದೆ ಓದಿ....

  ಇಂಗ್ಲೆಂಡ್ ಆಟಗಾರ ಮೆಚ್ಚಿದ ಸುದೀಪ್ ಬ್ಯಾಟಿಂಗ್

  ಇಂಗ್ಲೆಂಡ್ ಆಟಗಾರ ಮೆಚ್ಚಿದ ಸುದೀಪ್ ಬ್ಯಾಟಿಂಗ್

  ಪ್ರಾಕ್ಟೀಸ್ ವೇಳೆ ಕರ್ನಾಟಕ ತಂಡದ ಆಟಗಾರ ವಿ.ಕರಿಯಪ್ಪ ಅವರ ಎಸೆದ ಎಸೆತವನ್ನ ಸುದೀಪ್ ಭರ್ಜರಿಯಾಗಿ ಹೊಡೆದಿದ್ದಾರೆ. ಈ ವಿಡಿಯೋ ಟ್ವಿಟ್ಟರ್ ನಲ್ಲಿ ವೈರಲ್ ಆಗಿದೆ. ಈ ವಿಡಿಯೋ ಬಗ್ಗೆ ಇಂಗ್ಲೆಂಡ್ ಆಟಗಾರ ಕಾಮೆಂಟ್ ಮಾಡಿದ್ದಾರೆ.

  'ಸಿಸಿಎಲ್' ಟೂರ್ನಿಗೆ ಕಿಚ್ಚ ಸುದೀಪ್ ಭರ್ಜರಿ ತಯಾರಿ.!'ಸಿಸಿಎಲ್' ಟೂರ್ನಿಗೆ ಕಿಚ್ಚ ಸುದೀಪ್ ಭರ್ಜರಿ ತಯಾರಿ.!

  ಗ್ರೇಟ್ Shot ಅಂತೆ

  ಗ್ರೇಟ್ Shot ಅಂತೆ

  ''ವಾಹ್ವ್ ಗ್ರೇಟ್ Shot''...ಎಂದಿರುವ ಓವೈಸ್ ಶಾ, ''ಇದೇ ರೀತಿಯ Shot ನ್ನ ಇಂಗ್ಲೆಂಡ್ ನಲ್ಲಿ ನಡೆದ ಟೂರ್ನಿಯ ಪ್ರಾಕ್ರೀಸ್ ವೇಳೆ ನೀವು ಹೊಡೆದಿದ್ರಿ'' ಎಂದು ಕಾಮೆಂಟ್ ಮಾಡಿದ್ದಾರೆ. ಓವೈಸ್ ಶಾ ಇಂಗ್ಲೆಂಡ್ ತಂಟದ ಮಾಜಿ ಆಟಗಾರ ಹಾಗೂ ಐಪಿಎಲ್ ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಪರವಾಗಿ ಆಡಿದ್ದರು.

  ಇಂಗ್ಲೆಂಡ್ ನಲ್ಲಿ ಸುದೀಪ್ ಆಡಿದ್ರು.!

  ಇಂಗ್ಲೆಂಡ್ ನಲ್ಲಿ ಸುದೀಪ್ ಆಡಿದ್ರು.!

  ಇಂಗ್ಲೆಂಡ್ ನ ಲಾರ್ಡ್ಸ್ ಮೈದಾನದಲ್ಲಿ ಮೇ 11 ರಂದು ಕಾರ್ಪೊರೇಟ್ ಕ್ರಿಕೆಟ್ ಡೇ ಟೂರ್ನಿ ನಡೆದಿತ್ತು. ಈ ಟೂರ್ನಿಯಲ್ಲಿ ಸುದೀಪ್ ಕೂಡ ಒಂದು ತಂಡವನ್ನ ಮುನ್ನಡೆಸಿದ್ದರು.

  ಸಿಸಿಎಲ್ ಗೆ ರೆಡಿ

  ಸಿಸಿಎಲ್ ಗೆ ರೆಡಿ

  ಸದ್ಯ, ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಆರಂಭವಾಗಲಿದ್ದು, ಕರ್ನಾಟಕ ಬುಲ್ಡೋಜರ್ಸ್ ತಂಡವನ್ನ ಸುದೀಪ್ ಮುನ್ನಡೆಸಲಿದ್ದಾರೆ. ಇದಕ್ಕಾಗಿ ಸುದೀಪ್, ರಾಹುಲ್, ಪ್ರದೀಪ್, ಚಂದನ್ ಸೇರಿದಂತೆ ಹಲವರು ಪ್ರಾಕ್ಟೀಸ್ ಮಾಡುತ್ತಿದ್ದಾರೆ.

  English summary
  England Former Cricket Player Owais Shah Tweet About Sudeep Batting Style. ಇಂಗ್ಲೆಂಡ್ ಮಾಜಿ ಕ್ರಿಕೆಟ್ ಆಟಗಾರ ಒವೈಸ್ ಷಾ (Owais Shah) ಸುದೀಪ್ ಬ್ಯಾಟಿಂಗ್ ಮೆಚ್ಚಿಕೊಂಡಿದ್ದಾರೆ.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X