ಹಲವು ಅದ್ಭುತ ಕ್ಷಣಗಳಿಗೆ ಸಾಕ್ಷಿಯಾದ 'ಪಾಪ' ಕಿರುಚಿತ್ರದ ಮೊದಲ ಪ್ರೀಮಿಯರ್
ನಾಗರಾಜ್ ಶಂಕರ್ ನಿರ್ದೇಶನದ 'ಪಾಪ' ಚಿತ್ರದ ಪ್ರೀಮಿಯರ್ ಕಳೆದ ಭಾನುವಾರದಂದು ವಿಜೃಂಭಣೆಯಿಂದ ನೆರವೇರಿತು. ಸಮಾಜದಲ್ಲಿ ಇನ್ನೂ ಜೀವಂತವಿರುವ ಹೆಣ್ಣು ಭ್ರೂಣಹತ್ಯೆಯ ಬಗ್ಗೆ ಬೆಳಕು ಚೆಲ್ಲುವುದರ ಜೊತೆಗೆ ಉತ್ತಮ ಸಂದೇಶವನ್ನು ಪಾಪ ಕಿರುಚಿತ್ರ ಎಲ್ಲರ ಮೆಚ್ಚುಗೆ ಪಾತ್ರವಾಗಿದೆ.
ಒನ್ ಇಂಡಿಯಾ ಸಂಪಾದಕರಾದ ಪ್ರಸಾದ್ ನಾಯಕ್, ನಟ ಅನಿರುದ್ಧ, ಧರ್ಮ ಕೀರ್ತಿರಾಜ್, ಶ್ರೀ, ಸಂಕಲನಕಾರ ಹರೀಶ್ ಕುಮ್ಮಿ, ಗಾಯಕ ವಿನಯ್ ನಾಡಿಗ್ ಸೇರಿದಂತೆ ಹಲವು ಗಣ್ಯರು ಮತ್ತು ಪ್ರೇಕ್ಷಕರು ಸಿನಿಮಾ ನೋಡಿ ಸಂತಸ ವ್ಯಕ್ತಪಡಿಸಿದರು.
ಬಳಿಕ ಮಾತನಾಡಿದ ನಟ ಅನಿರುದ್ಧ್ ಸಮಾಜದಲ್ಲಿ ಇನ್ನು ಜೀವಂತ ಇರುವ ಸಮಸ್ಯೆಯನ್ನು ಈ ಚಿತ್ರದ ಮೂಲಕ ತೋರಿಸಿರುವುದಕ್ಕೆ ಬೆನಕ ಟಾಕೀಸ್ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು. ಪ್ರಸಾದ್ ನಾಯಕ್ ಅವರು ಚಿತ್ರ ನೋಡಿದ ನಂತರ ತಮ್ಮ ಅನಿಸಿಕೆಗಳನ್ನು ತಿಳಿಸುವಾಗ ಈ ಚಿತ್ರವು ಪ್ರತಿ ಜಿಲ್ಲೆ, ತಾಲ್ಲೂಕು ಹಾಗೂ ಹಳ್ಳಿಗೂ ತಲುಪಬೇಕೆಂದು ಚಿತ್ರತಂಡಕ್ಕೆ ಸಲಹೆ ನೀಡಿದರು.

ಉದಯೋನ್ಮುಖ ನಟರಾದ ಧರ್ಮ ಕೀರ್ತಿರಾಜ್ ಅವರು ಮಾತನಾಡುತ್ತಾ ಇಂಜಿನಿಯರ್ಸಗಳೇ ಸೇರಿ ತಮ್ಮ ಬಿಡುವಿನ ಸಮಯದಲ್ಲಿ ಕಮರ್ಷಿಯಲ್ ಚಿತ್ರಗಳ ನಡುವೆ ಈ ರೀತಿಯ ಉತ್ತಮ ಸಂದೇಶವುಳ್ಳ ಚಿತ್ರ ಮಾಡಿದ್ದನ್ನು ಹಾಗೂ ಚಿತ್ರದ ತಾಂತ್ರಿಕ ಕೆಲಸದ ಬಗ್ಗೆ ಮಾತನಾಡಿ, ಇನ್ನೂ ಈ ರೀತಿಯ ಒಳ್ಳೆ ಚಿತ್ರಗಳನ್ನು ಮಾಡಲು ಮನವಿ ಮಾಡಿದರು. ನಾನೊಬ್ಬ ನಟನಿಗಿಂತಲೂ ಹೆಚ್ಚಾಗಿ ಒಬ್ಬ ಸ್ನೇಹಿತನಾಗಿ ಬಂದಿದ್ದೇನೆ ಎಂದರು.
ನಟರಾದ ಶ್ರೀ ಯವರು ಮಾತನಾಡುತ್ತಾ ಚಿತ್ರರಂಗದಲ್ಲಿ ನೆಲೆಯೂರಲು ತಾವು ಪಟ್ಟ ಶ್ರಮ ಹಾಗು ಅವಕಾಶವನ್ನು ಉಪಯೂಗಿಸಿಕೊಂಡ ಬಗ್ಗೆ ಮಾತನಾಡಿದರು. ಈ ರೀತಿಯ ಸಾಮಾಜಿಕ ಕಳಕಳಿಯ ಚಿತ್ರಗಳನ್ನು ನೀಡಿದ ಬೆನಕ ಟಾಕೀಸ್ ಗೆ ಹಾಗೂ ಆಹ್ವಾನ ನೀಡಿದ ನವೀನ್ ಅವರಿಗೆ ಧನ್ಯವಾದ ತಿಳಿಸಿದರು.

ನವೀನ್ ಕುಮಾರ್ ಆರ್.ಓ ,ಪ್ರಗತಿ ಭಾರಧ್ವಜ್ ಹಾಗೂ ಶಶಿಕುಮಾರ್ ಅವರ ನಿರೂಪಣೆ ಇನ್ನಷ್ಟು ಮೆರಗನ್ನು ಹೆಚ್ಚಿಸಿತ್ತು. ನವೀನ್ ಅವರು ತಮ್ಮ ನಿರೂಪಣೆಯ ಉದ್ಧಕ್ಕೂ ಕನ್ನಡ ಭಾಷೆ ಹಾಗೂ ಕನ್ನಡ ಚಿತ್ರಗಳ ಬೆಳವಣಿಗೆಯು ಆರೋಗ್ಯಕರವಾಗಬೇಕು ಎಂದು ಹೇಳಿದರು.
ತುಂಬಾ ಅಚ್ಚುಕಟ್ಟಾಗಿ ನಡೆದ ಕಾರ್ಯಕ್ರಮ ಕುಮಾರಿ ಶಿವಾನಿಯ ಭರತನಾಟ್ಯದಿಂದ ಪ್ರಾರಂಭವಾಗಿ, ಗಣ್ಯರು ದೀಪ ಬೆಳಗಿದರು. ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ಮೆರಗು ನೀಡಿದವು. ಇನ್ನುಳಿದಂತೆ ಪಾಪ ಚಿತ್ರದ ಪ್ರೀಮಿಯರ್ ಯಶಸ್ವಿಯಾಗಿ ನೆರವೇರಲು ಬೆನಕ ಟಾಕೀಸ್ ನ ವಿಜಯ್.ಎಸ್, ಮಹೇಶ್.ಎಂ,ಕಿರಣ್ ಕುಮಾರ್, ಆಶಿತ್ ಸುಬ್ರಹ್ಮಣ್ಯ ಅವರು ಸಾಕ್ಷಿಯಾದರು.

ಅಂದ್ಹಾಗೆ, 'ಪಂಚ' ಕಿರುಚಿತ್ರವನ್ನ ನಿರ್ದೇಶನ ಮಾಡಿ ಗಮನ ಸೆಳೆದಿದ್ದ ನಾಗರಾಜ್ ಶಂಕರ್ ಅವರು ಆಕ್ಷನ್ ಕಟ್ ಹೇಳಿರುವ ಎರಡನೇ ಸಿನಿಮಾ ಇದಾಗಿದೆ. ಬೆನಕ ಟಾಕೀಸ್ ಸಂಸ್ಥೆಯಲ್ಲಿ ನವೀನ್ ಕುಮಾರ್. ಆರ್.ಓ, ಪ್ರದೀಪ್ ಕುಮಾರ್.ಎಸ್, ಉಮೇಶ್ ಬಂಡವಾಳ ಹಾಕಿದ್ದಾರೆ. ಸಂದೀಪ್.ಪಿ.ರಾಮಮೂರ್ತಿ ಅವರು ಈ ಕಿರುಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ.

ಮಹೇಶ್. ಎಂ.ಬಿ, ಪ್ರವೀಣ್.ಹೆಚ್.ಪಿ, ಪ್ರವೀಣ್.ಎಂ, ತರುಣ್ ಮಾನೆ ಅವರ ಛಾಯಾಗ್ರಹಣವಿದೆ. ರಾಮಸೆಟ್ಟಿ ಪವನ್, ವಿಜಯ್ ಮತ್ತು 24 ಪೋಸ್ಟ್ ಪ್ರೊಡಕ್ಷನ್ಸ್ ಸ್ಟುಡಿಯೋ ಸಂಕಲನ ಮಾಡಿದ್ದಾರೆ. ಇನ್ನುಳಿದಂತೆ ಹರ್ಷ ಆನಂದ್, ರಮ್ಯ, ರವಿಕುಮಾರ್, ಸಂಜಯ್.ಎಂ, ಭಾವನ ಗುರುಪ್ರಸಾದ್, ಹೇಮಂತ್ ಭೂಪ, ಶಾಂತಲಾ.ಎಸ್.ರಾವ್ ಮುಂತಾದವರು ಅಭಿನಯಿಸಿದ್ದಾರೆ.


Click it and Unblock the Notifications











