»   » 'ಅಂಡರ್ ವರ್ಲ್ಡ್' ಹುಡುಗಿಯ ಸೌಂದರ್ಯಕ್ಕೆ ಮನಸೋತ ನೆಟ್ಟಿಗರು

'ಅಂಡರ್ ವರ್ಲ್ಡ್' ಹುಡುಗಿಯ ಸೌಂದರ್ಯಕ್ಕೆ ಮನಸೋತ ನೆಟ್ಟಿಗರು

Posted By:
Subscribe to Filmibeat Kannada

ಕೆಲವು ತಿಂಗಳುಗಳ ಹಿಂದೆ ಡೆಡ್ಲಿ ಆದಿತ್ಯ ಅಭಿನಯದ ಬೆಂಗಳೂರು ಅಂಡರ್ ವರ್ಲ್ಡ್ ಅಂತ ಸಿನಿಮಾ ಬಿಡುಗಡೆ ಆಗಿತ್ತು. ಈ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾಯಲ್ ಎಂಬ ಚೆಲುವೆ ಎಂಟ್ರಿ ಆಗಿದ್ದಳು. ಅಭಿನಯಿಸಿದ ಮೊದಲ ಚಿತ್ರದಲ್ಲೇ ಉತ್ತಮ ಕಲಾವಿದೆ ಎಂದು ಗುರುತಿಸಿಕೊಂಡಿದ್ದ ಪಾಯಲ್ ರಾಧಕೃಷ್ಣ ಸದ್ಯ ಸೋಷಿಯಲ್ ಮಿಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿದ್ದಾರೆ.

ಸಾಮಾನ್ಯವಾಗಿ ನಾಯಕಿಯರು ಮೇಕ್ ಓವರ್ ಮಾಡಿಸಿಕೊಂಡಾಗ, ಹೊಸ ಚಿತ್ರಗಳಿಗಾಗಿ ಲುಕ್ ಬದಲಾವಣೆ ಮಾಡಿಕೊಂಡಾಗ ಫೋಟೋ ಶೂಟ್ ಮಾಡಿಸಿಕೊಳ್ಳುತ್ತಾರೆ ಆದರೆ ನಟಿ ಪಾಯಲ್ ರಾಧಾಕೃಷ್ಣ ತಮ್ಮ ಸಾಕಷ್ಟು ಲುಕ್ ಗಳಲ್ಲಿ ಪೋಟೋ ಶೂಟ್ ಮಾಡಿಸಿಕೊಂಡಿದ್ದಾರೆ.

'ಬೆಂಗಳೂರು ಅಂಡರ್ ವರ್ಲ್ಡ್'ನಿಂದ ಆದಿತ್ಯ ಎಂಟ್ರಿ ಹೇಗಿದೆ ನೋಡಿದ್ರಾ?

Paayal Radhakrishna has made a new photoshoot

ಬೆಂಗಳೂರು ಅಂಡರ್ ವರ್ಲ್ಡ್ ಸಿನಿಮಾದ ನಂತರ ಕೆಲವು ದಿನಗಳು ಸೈಲೆಂಟ್ ಆಗಿದ್ದ ಪಾಯಲ್ ಮುಂಬೈನಲ್ಲಿ ಅಭಿನಯದ ಬಗ್ಗೆ ಮತ್ತಷ್ಟು ತರಬೇತಿ ಪಡೆದುಕೊಂಡು ಬಂದಿದ್ದಾರೆ. ಟ್ರೈನಿಂಗ್ ಮುಸಿದ ನಂತರ ಬೇರೆ ಬೇರೆ ಕನ್ಸೆಪ್ಟ್ ನಲ್ಲಿ ಪೋಟೋ ಶೂಟ್ ಮಾಡಿಸಿ ಫೋಟೋಗಳನ್ನ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ.

ನಾರ್ಮಲ್, ಟ್ರೆಡಿಷನಲ್ ಹಾಗೂ ಮಾಡ್ರನ್ ಲುಕ್ ನಲ್ಲಿ ಪಾಯಲ್ ಹೇಗೆಲ್ಲಾ ಕಾಣಿಸಿಕೊಳ್ಳುತ್ತಾರೆ ಎನ್ನುವುದನ್ನು ಈ ಪೋಟೋಗಳನ್ನ ನೋಡಿದರೆ ತಿಳಿಯುತ್ತೆ. ಇನ್ ಡೋರ್ , ಔಟ್ ಡೋರ್ ಸೇರಿದಂತೆ ಸಮುದ್ರ ತೀರದಲ್ಲಿಯೂ ಪಾಯಲ್ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ.

Paayal Radhakrishna has made a new photoshoot

ಸಿನಿಮಾ ಅಭಿನಯದ ಜೊತೆ ಜೊತೆಗೆ ಮಾಡೆಲಿಂಗ್ ಅನ್ನು ಮುಂದುವರೆಸಿಕೊಂಡು ಬರುತ್ತಿರುವ ಪಾಯಲ್ ಸದ್ಯ ಉತ್ತಮ ಕಥೆಗಾಗಿ ಹುಡುಕಾಟ ನಡೆಸಿದ್ದಾರೆ. ಕನ್ನಡ ಮಾತ್ರವಲ್ಲದೆ ತಮಿಳು-ತೆಲುಗಿನಿಂದಲೂ ಅವಕಾಶಗಳು ಹುಡುಕಿಕೊಂಡು ಬರುತ್ತಿದ್ದು ಪಾಯಲ್ ಯಾವ ಸಿನಿಮಾಗೆ ಮೊದಲು ಗ್ರೀನ್ ಸಿಗ್ನಲ್ ಕೊಡುತ್ತಾರೆ ಎನ್ನುವುದನ್ನ ಕಾದು ನೋಡಬೇಕು. ಆದರೆ ಪಾಯಲ್ ಫೋಟೋಗಳನ್ನ ನೋಡಿರುವ ನೆಟ್ಟಿಗಳು ಮಾತ್ರ ಅವರ ಮೈಮಾಟಕ್ಕೆ ಫುಲ್ ಫಿದಾ ಆಗಿದ್ದಾರೆ.

ಸೊಸೆಗೆ ಮರೆಯಲಾಗದ ಉಡುಗೊರೆ ನೀಡಿದ ಕಿಚ್ಚ

English summary
Kannada actress Paayal Radhakrishna has made a new photoshoot and she has acted as a heroine in Bangalore Underworld movie with actor Adhitya .

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X