For Quick Alerts
  ALLOW NOTIFICATIONS  
  For Daily Alerts

  ಸೆನ್ಸಾರ್ ನಲ್ಲಿ ಪಾಸ್ ಆದ 'ಪಡ್ಡೆಹುಲಿ' ಹಾಗೂ 'ಸೂಜಿದಾರ' ಸಿನಿಮಾ

  |

  ಕನ್ನಡದ ಎರಡು ಹೊಸ ಸಿನಿಮಾಗಳ ಸೆನ್ಸಾರ್ ಆಗಿದ್ದು, ಆ ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿವೆ. ಹರಿಪ್ರಿಯಾ ನಟನೆಯ 'ಸೂಜಿದಾರ' ಹಾಗೂ ಯಶಸ್ ನಾಯಕನಾಗಿರುವ 'ಪಡ್ಡೆಹುಲಿ' ಸಿನಮಾಗಳು ಸೆನ್ಸರ್ ನಲ್ಲಿ ಪಾಸ್ ಆಗಿವೆ.

  'ಸೂಜಿದಾರ' ಮೂಲಕ ಮತ್ತೆ ಹರಿಪ್ರಿಯಾ ವಿಭಿನ್ನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಿನಿಮಾವನ್ನು ವೀಕ್ಷಿಸಿರುವ ಸೆನ್ಸಾರ್ ಅಧಿಕಾರಿಗಳು ಚಿತ್ರಕ್ಕೆ ಯು ಎ ಪ್ರಮಾಣ ಪತ್ರ ನೀಡಿದ್ದಾರೆ. ಇಂದ್ರಕುಮಾರ್ ಅವರ ಸಣ್ಣ ಕಥೆಗಳನ್ನು ಇಟ್ಟುಕೊಂಡು 'ಸೂಜಿದಾರ'ದ ರೂಪ ನೀಡಿದ್ದಾರೆ ನಿರ್ದೇಶಕ ಮೌನೇಶ್ ಬಡಿಗೇರ್.

  ರಂಗಭೂಮಿ ಪ್ರತಿಭೆ ಯಶ್ವಂತ್ ಶೆಟ್ಟಿ ಸಿನಿಮಾ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಹರಿಪ್ರಿಯಾ ಮತ್ತೊಮ್ಮೆ ಮಹಿಳಾ ಪ್ರಧಾನ ಚಿತ್ರದಲ್ಲಿ ನಟಿಸಿದ್ದಾರೆ.

  ನಿರ್ಮಾಪಕ ಕೆ ಮಂಜು ಪುತ್ರ ಯಶಸ್ 'ಪಡ್ಡೆಹುಲಿ' ಸಿನಿಮಾದ ಮೂಲಕ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಈಗಾಗಲೇ ಸಿನಿಮಾ ಟ್ರೇಲರ್ ಕುತೂಹಲ ಮೂಡಿಸಿದೆ. ಆಕ್ಷನ್ ದೃಶ್ಯಗಳಲ್ಲಿ ಯಶಸ್ ನಟನೆ ಚೆನ್ನಾಗಿದೆ. ಚಿತ್ರದಲ್ಲಿ ರವಿಚಂದ್ರನ್ ಹಾಗೂ ರಕ್ಷಿತ್ ಶೆಟ್ಟಿ ಸಹ ಕಾಣಿಸಿಕೊಂಡಿದ್ದಾರೆ. ಇನ್ನು ಈ ಸಿನಿಮಾ ಸಹ ಸೆನ್ಸಾರ್ ಆಗಿದ್ದು, ಯು ಎ ಸರ್ಟಿಫಿಕೇಟ್ ಸಿಕ್ಕಿದೆ.

  ಈ ಎರಡು ಸಿನಿಮಾಗಳು ಸೆನ್ಸಾರ್ ಮುಗಿಸಿದ್ದು, ಎರಡೂ ಚಿತ್ರಕ್ಕೆ ಯು ಎ ಪ್ರಮಾಣ ಪತ್ರ ಸಿಕ್ಕಿದೆ. 'ಪಡ್ಡೆಹುಲಿ' ಹಾಗೂ 'ಸೂಜಿದಾರ' ಸಿನಿಮಾಗಳು ಬಿಡುಗಡೆ ಸಿದ್ಧವಾಗಿವೆ.

  English summary
  Actor Yashas's 'Padde Huli' and Actress Haripriya's 'Soojidara' kannada movie gets U/A certificate from censor board. The two movies are ready to release.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X