ಈ ವಾರ 'ಪಡ್ಡೆಹುಲಿ' ಜೊತೆ ಬರ್ತಿದ್ದಾರೆ ರಾಘವೇಂದ್ರ ರಾಜ್ ಕುಮಾರ್
ಶುಕ್ರವಾರದ ಸಿನಿಸಂತೆಯಲ್ಲಿ ಸಾಕಷ್ಟು ಸಿನಿಮಾಗಳು ಚಿತ್ರಮಂದಿರಕ್ಕೆ ಲಗ್ಗೆ ಇಡುತ್ತವೆ. ಪ್ರತಿವಾರ ಏನಲ್ಲ ಅಂದರೂ ಐದಾರು ಸಿನಿಮಾಗಳು ರಿಲೀಸ್ ಆಗುತ್ತವೆ. ವಾರದಿಂದ ವಾರಕ್ಕೆ ಸಿನಿಮಾ ರಿಲೀಸ್ ಸಂಖ್ಯೆ ಹೆಚ್ಚಾಗುತ್ತಲೆ ಇದೆ.
ಆದ್ರೆ ಈ ವಾರ ಮೂರು ಸಿನಿಮಾಗಳು ಚಿತ್ರಮಂದಿರದ ಬಾಗಿಲು ತಟ್ಟುತ್ತಿವೆ. ನಿರ್ಮಾಪಕ ಕೆ ಮಂಜು ಪುತ್ರ ಶ್ರೇಯಸ್ ನಾಯಕನಾಗಿ ಮೊದಲ ಬಾರಿಗೆ ಬಣ್ಣ ಹಚ್ಚಿರುವ 'ಪಡ್ಡೆಹುಲಿ' ಸಿನಿಮಾ ಮತ್ತು 'ಅಮ್ಮನ ಮನೆ' ಸಿನಿಮಾದ ನಂತರ ರಾಘವೇಂದ್ರ ರಾಜ್ ಕುಮಾರ್ ಅಭಿನಯ 'ತ್ರಯಂಬಕಂ' ಸಿನಿಮಾ ಕೂಡ ತೆರೆಗೆ ಬರುತ್ತಿದೆ.
ವಿಶೇಷ ಅಂದ್ರೆ ಈ ವಾರ ಶುಕ್ರವಾರಕ್ಕು ಮೊದಲೇ ಒಂದು ಕನ್ನಡ ಸಿನಿಮಾ ರಿಲೀಸ್ ಆಗಿದೆ. ಜೊತೆಗೆ ಹಿಂದಿಯ 'ಕಳಂಕ್' ಸಿನಿಮಾ ಕೂಡ ಇವತ್ತೇ ತೆರೆಗೆ ಬಂದಿದೆ. ಮುಂದೆ ಓದಿ..

ತೆರೆಗೆ ಬರಲು ಪಡ್ಡೆಹುಲಿ ಸಿದ್ಧ
ನಿರ್ಮಾಪಕ ಕೆ ಮಂಜು ಪುತ್ರ ಶ್ರೇಯಸ್ ಅಭಿನಯದ 'ಪಡ್ಡೆಹುಲಿ' ಸಿನಿಮಾ ಇದೆ ವಾರ ಏಪ್ರಿಲ್ 19ಕ್ಕೆ ತೆರೆಗೆ ಬರುತ್ತಿದೆ. ಈ ವಾರ ರಿಲೀಸ್ ಆಗುತ್ತಿರುವ ಸಿನಿಮಾಗಳಲ್ಲಿ ಭಾರಿ ನಿರೀಕ್ಷೆ ಮೂಡಿಸಿರುವ ಸಿನಿಮಾ ಇದಾಗಿದೆ. ಶ್ರೇಯಸ್ ಮೊದಲ ಬಾರಿಗೆ ನಾಯಕನಾಗಿ ಬಣ್ಣ ಹಚ್ಚಿರುವ ಚಿತ್ರ. ಗುರುದೇಶ ಪಾಂಡೆ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ 'ಪಡ್ಡೆಹುಲಿ' ಚಿತ್ರದಲ್ಲಿ ಕ್ರೇಜ್ ಸ್ಟಾರ್ ರವಿಚಂದ್ರನ್ ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ. ರಕ್ಷಿತ್ ಶೆಟ್ಟಿ ಮತ್ತು ಪುನೀತ್ ರಾಜ್ ಕುಮಾರ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಏಪ್ರಿಲ್ 19ಕ್ಕೆ ಬರ್ತಿದೆ ತ್ರಯಂಬಕಂ
ನಿರ್ದೇಶಕ ದಯಾಳ್ ಪದ್ಮನಾಭನ್ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಸಿನಿಮಾ 'ತ್ರಯಂಬಕಂ'. ಟ್ರೈಲರ್ ಮೂಲಕ ಚಿತ್ರಪ್ರಿಯರ ಗಮನ ಸೆಳೆದಿರುವ 'ತ್ರಯಂಬಕಂ' ಚಿತ್ರದಲ್ಲಿ ನಾಯಕಿಯಾಗಿ ಅನುಪಮಾ ಗೌಡ ಕಾಣಿಸಿಕೊಂಡಿದ್ದಾರೆ. ಇನ್ನು ಪ್ರಮುಖ ಪಾತ್ರದಲ್ಲಿ ರಾಘವೇಂದ್ರ ರಾಜ್ ಕುಮಾರ್ ಅಭಿನಯಿಸಿದ್ದಾರೆ. 'ಆ ಕರಾಳ ರಾತ್ರಿ' ಚಿತ್ರ ನಿರ್ಮಾಣ ಮಾಡಿದ್ದ ತಂಡವೇ 'ತ್ರಯಂಬಕಂ' ಚಿತ್ರದ ನಿರ್ಮಾಣದ ಹೊಣೆ ಹೊತ್ತುಕೊಂಡಿದ್ದಾರೆ. ಆರ್ ಜೆ ರೋಹಿತ್ ಕೂಡ ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ.

ಇಂದಿನಿಂದ ಶುರು ಪಯಣಿಗರ ಕತೆ
ಹೊಸಬರ ಹೊಸ ಸಿನಿಮಾ 'ಪಯಣಿಗರು' ಇಂದಿನಿಂದ ಪ್ರದರ್ಶನ ಕಾಣುತ್ತಿದೆ. ರಾಜ್ ಗೋಪಿ ನಿರ್ದೇಶನದ ಪಯಣಿಗರು ಚಿತ್ರದಲ್ಲಿ ಬೆಂಗಳೂರಿನಿಂದ ಗೋವಗೆ ಹೊರಡುವ ಮಧ್ಯವಯಸ್ಕರ ಕತೆಯನ್ನು ಹೇಳಲಾಗಿದೆ. ಮದುವೆಯಾದ ಗೆಳೆಯರು ಸಂಸಾರ ಜಂಜಾಟದಿಂದ ತಪ್ಪಿಸಿಕೊಳ್ಳಲು ಗೋವದತ್ತ ಪಯಣ ಬೆಳೆಸುವ ಕತೆ ಇದಾಗಿದೆ.

ಬಹು ನಿರೀಕ್ಷೆಯ ಕಳಂಕ್ ಸಿನಿಮಾ ರಿಲೀಸ್
ಬಾಲಿವುಡ್ ನಲ್ಲಿ ಸಖತ್ ಸದ್ದು ಮಾಡುತ್ತಿದ್ದ 'ಕಳಂಕ್' ಸಿನಿಮಾ ಕೂಡ ಇಂದು ತೆರೆಗೆ ಬಂದಿದೆ. ಕರಣ್ ಜೋಹರ್ ನಿರ್ಮಾಣದ 'ಕಳಂಕ್' ಚಿತ್ರದಲ್ಲಿ ಬಾಲಿವುಡ್ ಕಲಾವಿದರ ದಂಡೆ ಇದೆ. ಮಾಧುರಿ ದೀಕ್ಷಿತ್, ಸಂಜಯ್ ದತ್, ವರುಣ್ ಧವನ್, ಅಲಿಯಾ ಭಟ್, ಸೋನಾಕ್ಷಿ ಸಿನ್ಹಾ ಸೇರಿದಂತೆ ದೊಡ್ಡ ಕಲಾವಿದ ಬಳಗವೆ ಇದೆ. ಚಿತ್ರಕ್ಕೆ ಅಭಿಷೇಕ್ ವರ್ಮ ಆಕ್ಷನ್ ಕಟ್ ಹೇಳಿದ್ದಾರೆ.


Click it and Unblock the Notifications











