For Quick Alerts
  ALLOW NOTIFICATIONS  
  For Daily Alerts

  'ರಾಬರ್ಟ್' ಸಿನಿಮಾ ನೋಡಿ ಮಂಗಳಮುಖಿ 'ಪದ್ಮಶ್ರೀ' ಮಂಜಮ್ಮ ಜೋಗತಿ ಹೇಳಿದ್ದೇನು?

  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ರಾಬರ್ಟ್ ಸಿನಿಮಾ ರಾಜ್ಯದಾದ್ಯಂತ ಉತ್ತಮ ಪ್ರದರ್ಶನ ಕಾಣುತ್ತಿದೆ. ಮಾರ್ಚ್ 11ರಂದು ರಿಲೀಸ್ ಆದ ರಾಬರ್ಟ್ ಇಂದಿಗೂ ಬಹುತೇಕ ಕಡೆ ಹೌಸ್ ಪ್ರದರ್ಶನ ಕಾಣುತ್ತಿದೆ. ಕಲೆಕ್ಷನ್ ವಿಚಾರದಲ್ಲಿ ದಾಖಲೆ ನಿರ್ಮಿಸಿರುವ ರಾಬರ್ಟ್ ಸಿನಿಮಾದ ಬಗ್ಗೆ ಎಲ್ಲಾ ಕಡೆಯಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

  ರಾಬರ್ಟ್ ಸಿನಿಮಾ ನೋಡಿ ಆಶ್ಚರ್ಯ ಪಟ್ಟ ಮಂಗಳಮುಖಿ | Filmibeat Kannada

  ರಾಬರ್ಟ್ ಸಿನಿಮಾದಲ್ಲಿ ವಿಶೇಷವಾಗಿ ಮಂಗಳಮುಖಿ ಬಾಬಿ ಪಾತ್ರ ಪ್ರೇಕ್ಷಕರ ಮನಗೆದ್ದಿದೆ. ಬಾಬಿಯಾಗಿ ಶಿವರಾಜ್ ಕೆ.ಆರ್ ಪೇಟೆ ಕಾಣಿಸಿಕೊಂಡಿದ್ದಾರೆ. ಮಂಗಳಮುಖಿಯರ ಬಗ್ಗೆ ತೋರಿಸಿರುವ ಪ್ರೀತಿ ಮತ್ತು ಗೌರವದ ಬಗ್ಗೆ ಮಂಗಳಮುಖಿ ಸಮುದಾಯ ಧನ್ಯವಾದ ತಿಳಿಸುತ್ತಿದೆ. ಈ ಬಗ್ಗೆ ಸ್ವತಃ ದರ್ಶನ್ ಅವರೇ ಹೇಳಿಕೊಂಡಿದ್ದರು.

  'ರಾಬರ್ಟ್'ಗೆ ಮೊದಲು ಆಯ್ಕೆಯಾಗಿದ್ದು ರಾಶಿ ಖನ್ನಾ; ಆದರೆ ಆಶಾ ಸೆಲೆಕ್ಟ್ ಆಗಿದ್ದು ಹೇಗೆ?

  ಇದೀಗ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಜಾನಪದ ಅಕಾಡೆಮಿ ಅಧ್ಯಕ್ಷೆಯಾಗಿರುವ ಮಂಗಳಮುಖಿ ಮಾತಾ ಬಿ ಮಂಜಮ್ಮ ಜೋಗತಿ ಅವರು ರಾಬರ್ಟ್ ಸಿನಿಮಾ ನೋಡಿ ಹಾಡಿ ಹೊಗಳಿದ್ದಾರೆ. ನಿನ್ನೆ (ಮಾರ್ಚ್ 24) ಬೆಂಗಳೂರಿನ ಮಂತ್ರಿ ಮಾಲ್‌ನಲ್ಲಿ ಸಿನಿಮಾ ವೀಕ್ಷಿಸಿದ ಮಂಜಮ್ಮ ಜೋಗತಿ ಅವರು ತುಂಬಾ ಸಂತಸಪಟ್ಟಿದ್ದಾರೆ. ಬೆಂಗಳೂರಿನಲ್ಲಿ ಮೊದಲ ಬಾರಿಗೆ ಸಿನಿಮಾ ವೀಕ್ಷಿಸಿದೆ ಎಂದು ಮಂಜಮ್ಮ ಖುಷಿ ಪಟ್ಟಿದ್ದಾರೆ.

  ಈ ಬಗ್ಗೆ ಮಂಜಮ್ಮ ವಿಡಿಯೋ ಮೂಲಕ ಸಂತಸ ಹಂಚಿಕೊಂಡಿದ್ದಾರೆ. ರಾಬರ್ಟ್ ಸಿನಿಮಾ ಬಿಡುಗಡೆಯಾದ ಬಳಿಕ ಅನೇಕ ಜನ ಕರೆ ರಾಬರ್ಟ್ ನೋಡಿ ಎಂದು ಹೇಳುತ್ತಿದ್ದರು. ಯಾಕೆ ಅಂತ ಕೇಳಿದರೆ ದರ್ಶನ್ ಅವರು ತುಂಬಾ ಚೆನ್ನಾಗಿ ಮಾಡಿದ್ದಾರೆ. ಅದಕ್ಕಿಂತ ಮುಖ್ಯವಾಗಿ ನಿಮ್ಮವರ ಬಗ್ಗೆ ಪ್ರೀತಿ ವಿಶ್ವಾಸ ಇಟ್ಟು ಬೇರೆಯವರು ನಿಮಗೆ ಗೌರವ ನೀಡುವ ಮಾತುಗಳನ್ನು ಆಡಿದ್ದಾರೆ ನೀವು ಎಂದಿದ್ದರು.

  ತುಂಬಾ ವರ್ಷಗಳಾಗಿತ್ತು ಚಿತ್ರಮಂದಿರಗಳಲ್ಲಿ ಸಿನಿಮಾ ನೋಡದೆ. ಅಕಾಡೆಮಿಯ ಸಿಬ್ಬಂದಿ ಜೊತೆ ಸಿನಿಮಾ ನೋಡಿದೆ. ಅಲ್ಲಿ ಶ್ರೀರಾಮ ಮಂದಿರ ನೋಡಿದಷ್ಟು ಆಯೋಧ್ಯಾ ನೋಡಿದಷ್ಟು ಸಂತೋಷವಾಯಿತು. ನಮ್ಮ ಸಮುದಾಯದ ಬಗ್ಗೆ ಒಳ್ಳೆಯ ಮಾತುಗಳನ್ನು ಆಡಿದ್ದಾರೆ. ನಮ್ಮ ಸಮುದಾಯವನ್ನು ಗೌರವಿಸುವಂತ ಮಾತುಗಳು ತುಂಬಾ ಖುಷಿಯಾಯಿತು ಎಂದಿದ್ದಾರೆ.

  English summary
  Padma Shri Manjamma Jogati praises Dardhan Roberrt movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X