ಕರ್ನಾಟಕದಲ್ಲಿ 'ಪದ್ಮಾವತಿ' ರಿಲೀಸ್ ಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್
ಬಾಲಿವುಡ್ ಬಹುನಿರೀಕ್ಷೆಯ ಹಾಗೂ ಸದ್ಯ ವಿವಾದ ಸುಳಿಯಲ್ಲಿ ಸಿಲುಕಿರುವ ಪದ್ಮಾವತಿ ಸಿನಿಮಾ ಕರ್ನಾಟಕದಲ್ಲಿ ರಿಲೀಸ್ ಆಗುವುದು ಬಹುತೇಕ ಖಚಿತವೆನ್ನಲಾಗಿದೆ.
ಕರ್ನಾಟಕ ಸೇರಿದಂತೆ ರಾಷ್ಟ್ರಾದ್ಯಂತ ರಜಪೂತ ಕರಣಿ ಸೇನೆ ಕಾರ್ಯಕರ್ತರು 'ಪದ್ಮಾವತಿ' ಸಿನಿಮಾ ಬಿಡುಗಡೆಯಾಗದಂತೆ ವಿರೋಧಿಸುತ್ತಿದ್ದಾರೆ. ಡಿಸೆಂಬರ್ 1 ರಂದು ಪದ್ಮಾವತಿ ರಿಲೀಸ್ ಆಗಲಿದ್ದು, ಅದೇ ದಿನ ಭಾರತ್ ಬಂದ್ ಗೆ ಕರೆ ನೀಡಿದ್ದಾರೆ.

''ಹಿಂದಿ ಸಿನಿಮಾ 'ಪದ್ಮಾವತಿ' ಬಿಡುಗಡೆಯಾಗದಂತೆ ತಡೆಯುವ ಅಧಿಕಾರ ರಾಜ್ಯ ಸರಕಾರಕ್ಕೆ ಇಲ್ಲ. ಸಿನಿಮಾ ಬಿಡುಗಡೆಯನ್ನು ತಡೆಯುವ ಹಕ್ಕು ಸೆನ್ಸಾರ್ ಮಂಡಳಿಗೆ ಮಾತ್ರ ಇದೆ ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ. ಈ ಮೂಲಕ ಕರ್ನಾಟಕದಲ್ಲಿ 'ಪದ್ಮಾವತಿ' ಚಿತ್ರದ ಬಿಡುಗಡೆಗೆ ರಾಜ್ಯ ಸರ್ಕಾರದ ಅಡ್ಡಿಯಿಲ್ಲ. ಹೀಗಾಗಿ, ಚಿತ್ರತಂಡ ಟೆನ್ಷನ್ ಪ್ರೀ ಆಗಿದೆ.
'ಪದ್ಮಾವತಿ' ಚಿತ್ರದಲ್ಲಿ ರಜಪೂತರ ರಾಣಿ ಪದ್ಮಾವತಿ ಬಗ್ಗೆ ಅವಹೇಳನ ಮಾಡಲಾಗಿದೆ. ಕೆಟ್ಟದಾಗಿ ಬಿಂಬಿಸಲಾಗಿದೆ ಎಂದು ಆರೋಪಿಸಿ ರಾಷ್ಟ್ರಾದ್ಯಂತ ರಜಪೂತರು ಚಿತ್ರ ಬಿಡುಗಡೆಯಾಗದಂತೆ ವಿರೋಧಿಸುತ್ತಿದ್ದಾರೆ. ಡಿಸೆಂಬರ್ 1 ರಂದು 'ಪದ್ಮಾವತಿ' ತೆರೆಕಾಣಲಿದೆ.


Click it and Unblock the Notifications











