ಕೇಂದ್ರ ಬಜೆಟ್ 2021: 'ಚಿತ್ರರಂಗದ ಮೇಲಿನ GST 3 ವರ್ಷ ಮನ್ನಾ ಮಾಡಲಿ'

2021ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಚಿತ್ರೋದ್ಯಮಕ್ಕೆ ಯಾವುದೇ ಸೌಲಭ್ಯ ಹಾಗೂ ಪರಿಹಾರ ನೀಡಿಲ್ಲ ಎಂದು ಸಿನಿಮಾ ಮಂದಿ ಬೇಸರ ವ್ಯಕ್ತಪಡಿಸಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಹೆಚ್ಚು ತೆರಿಗೆ ಪಾವತಿಸುವ ಉದ್ಯಮಗಳಲ್ಲಿ ಸಿನಿಮಾ ಕ್ಷೇತ್ರವೂ ಒಂದಾಗಿದೆ. ಕೊರೊನಾದಿಂದ ಬಹಳ ಸಂಕಷ್ಟಕ್ಕೆ ಸಿಲುಕಿದ್ದ ಚಿತ್ರರಂಗಕ್ಕೆ ಕನಿಷ್ಠ ಪರಿಹಾರವೂ ಕೊಟ್ಟಿಲ್ಲ ಎಂದು ನಿರಾಸೆಯಾಗಿದ್ದಾರೆ.

ಈ ಕುರಿತು ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (ಸಿಬಿಎಫ್‌ಸಿ) ಮಾಜಿ ಅಧ್ಯಕ್ಷ ಪಹ್ಲಾಜ್ ನಿಹಲಾನಿ ಪ್ರತಿಕ್ರಿಯಿಸಿದ್ದು, ''ಮುಂದಿನ ಮೂರು ವರ್ಷಕ್ಕೆ ಚಿತ್ರರಂಗದ ಮೇಲಿನ ಜಿಎಸ್‌ಟಿ ಮುನ್ನಾ ಮಾಡಬೇಕು'' ಎಂದು ಒತ್ತಾಯಿಸಿದ್ದಾರೆ.

''ಕೊರೊನಾದಿಂದ ಚಿತ್ರರಂಗ ಬಹಳ ಸಂಕಷ್ಟ ಎದುರಿಸಿದೆ. ಹಾಗಾಗಿ, ಮುಂದಿನ ಮೂರು ವರ್ಷಕ್ಕೆ ಸಿನಿ ಇಂಡಸ್ಟ್ರಿ ಮೇಲಿನ ಜಿಎಸ್‌ಟಿಯನ್ನು ಮುನ್ನಾ ಮಾಡುವುದು ಒಳಿತು ಎಂದು ನಾನು ಭಾವಿಸುತ್ತೇನೆ. ಅಷ್ಟೇ ಅಲ್ಲದೇ ಪ್ರದರ್ಶಕರ ಹಿತದೃಷ್ಟಿಯಿಂದ ವಿದ್ಯುತ್ ಬಿಲ್ ಮುನ್ನಾ ಮಾಡಿದ್ರೆ ಸಹಕಾರಿಯಾಗಲಿದೆ. ಚಿತ್ರೋದ್ಯಮ ಸಹಜ ಸ್ಥಿತಿಗೆ ಬರುವವರೆಗೂ ಆಸ್ತಿ ಮೇಲಿನ ತೆರಿಗೆಯನ್ನು ಮನ್ನಾ ಮಾಡಬೇಕು'' ಎಂದು ಅಭಿಪ್ರಾಯ ಪಟ್ಟಿದ್ದಾರೆ.

 Pahlaj Nihalani React on Nirmala Sitharaman 2021 Budget

ಹಿಂದಿ ಚಿತ್ರರಂಗ ಮಾತ್ರವಲ್ಲ ದಕ್ಷಿಣ ಚಿತ್ರರಂಗವೂ ಜಿಎಸ್‌ಟಿ ಕುರಿತು ಪ್ರತಿಕ್ರಿಯಿಸಿದೆ. ಸಿನಿಮಾ ಇಂಡಸ್ಟ್ರಿಯಗೆ ಬಜೆಟ್‌ನಲ್ಲಿ ಯಾವ ಸೌಲಭ್ಯವೂ ಇಲ್ಲ. ಜಿಎಸ್‌ಟಿಯಲ್ಲಿ ಹಲವು ಸಮಸ್ಯೆಗಳಿವೆ ಎಂದು ದಕ್ಷಿಣ ಚಲನಚಿತ್ರ ವಾಣಿಜ್ಯ ಮಂಡಳಿ ಎಲ್ ಸುರೇಶ್ ಹೇಳಿದ್ದಾರೆ.

ಬಜೆಟ್ 2021ರಲ್ಲಿ ಬಡವರಿಗೆ ವಂಚನೆ: ನಿರ್ಮಲಾ ಸೀತಾರಾಮನ್ ಚಿದಂಬರಂ ವಾಗ್ದಾಳಿ

ಇದಕ್ಕೂ ಮುಂಚೆ ಹಿಂದಿ ನಿರ್ಮಾಪಕ ಟಿಪಿ ಅಗರ್‌ವಾಲ್ ಮಾತನಾಡಿ ''ನಾವು ಸರ್ಕಾರದಿಂದ ಹೆಚ್ಚು ನಿರೀಕ್ಷೆ ಹೊಂದಿರಲಿಲ್ಲ. ನಮಗೆ ಯಾವುದೇ ಸಾಲ ದೊರೆಯುವುದಿಲ್ಲ. ಒಂದು ವೇಳೆ ಸಾಲ ಬೇಕು ಅಂದ್ರೆ ನಮ್ಮ ಆಸ್ತಿಯನ್ನು ಅಡಮಾನ ಇಡಬೇಕು. ನಾವು ನಿರ್ಮಿಸುವ ಸಿನಿಮಾವನ್ನು ಅಡಮಾನ ಇಡಲು ಸಾಧ್ಯವಿಲ್ಲ. ಆದರೆ, ಜಿಎಸ್ಟಿ ಮತ್ತು ತೆರಿಗೆಯಲ್ಲಿ ಸ್ವಲ್ಪ ಕಡಿತ ಎದುರು ನೋಡುತ್ತಿದ್ದೇವು'' ಎಂದಿದ್ದರು.

More from Filmibeat

English summary
Finance Minister Nirmala Sitharaman announced the Budget 2021. Pahlaj Nihalani, former Chairman of Central Board of Film Certification react on Budget 2021.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X