'ಪೈಲ್ವಾನ್' ಚಿತ್ರದ ಆಡಿಯೋ ಕಾರ್ಯಕ್ರಮ ರದ್ದು
Recommended Video
ಎಲ್ಲ ಅಂದುಕೊಂಡಂತೆ ಆಗಿದ್ದರೇ ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾದ ಆಡಿಯೋ ಬಿಡುಗಡೆ ಕಾರ್ಯಕ್ರಮ ಆಗಸ್ಟ್ 9 ರಂದು ನಡೆಯಬೇಕಿತ್ತು. ಆದ್ರೆ, ಉತ್ತರ ಕರ್ನಾಟಕ ಭಾಗದಲ್ಲಿ ಉಂಟಾಗಿರುವ ಭಾರಿ ಪ್ರವಾಹದ ಕಾರಣ ನಿಗದಿಯಾಗಿದ್ದ ಕಾರ್ಯಕ್ರಮ ರದ್ದಾಗಿದೆ.
ಈ ಕುರಿತು ಸ್ವತಃ ಸುದೀಪ್ ಅವರು ಟ್ವಿಟ್ಟರ್ ಮೂಲಕ ಮಾಹಿತಿ ನೀಡಿದ್ದು, ''ಚಿತ್ರದುರ್ಗದಲ್ಲಿ ನಡೆಯಬೇಕಿದ್ದ ಪೈಲ್ವಾನ್ ಆಡಿಯೋ ಕಾರ್ಯಕ್ರಮವನ್ನ ಸದ್ಯಕ್ಕೆ ಮುಂದಕ್ಕೆ ಹಾಕಿಕೊಳ್ಳುತ್ತಿದ್ದೇವೆ. ಈ ಸಮಯದಲ್ಲಿ ನಾವು ನೆರೆ ಸಂತ್ರಸ್ಥರಿಗೆ ಬೆಂಬಲ ನೀಡಬೇಕಾಗಿರುವ ಅವಶ್ಯಕತೆ ಇದೆ. ದಯವಿಟ್ಟು ಎಲ್ಲ ನನ್ನ ಅಭಿಮಾನಿಗಳು ನಮ್ಮನ್ನು ಕ್ಷಮಿಸಿ, ನನ್ನ ಗೆಳೆಯ ಪುನೀತ್ ರಾಜ್ ಕುಮಾರ್ ಅವರಿಗೆ ಧನ್ಯವಾದ ತಿಳಿಸುತ್ತೇನೆ'' ಎಂದಿದ್ದಾರೆ.
ಅಂದ್ಹಾಗೆ, ಪೈಲ್ವಾನ್ ಸಿನಿಮಾದ ಆಡಿಯೋವನ್ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಬಿಡುಗಡೆ ಮಾಡಬೇಕಿತ್ತು. ಕಾರ್ಯಕ್ರಮ ರದ್ದು ಮಾಡಿರುವ ಹಿನ್ನೆಲೆ ಪುನೀತ್ ಅವರಿಗೆ ವಿಷ್ಯ ತಿಳಿಸಿದ್ದಾರೆ. ಈ ನಿರ್ಧಾರಕ್ಕೆ ಪುನೀತ್ ಕೂಡ ಬೆಂಬಲ ನೀಡಿರುವ ಕಾರಣ, ಅಪ್ಪುಗೆ ಥ್ಯಾಂಕ್ಸ್ ಹೇಳಲಾಗಿದೆ.

ಈ ಮೊದಲು ಟ್ವೀಟ್ ಮಾಡಿದ್ದ ಸುದೀಪ್ ಅವರು ''ಉತ್ತರ ಕರ್ನಾಟಕ ಭಾಗದ ಜನರಿಗೆ ಆದಷ್ಟೂ ನೆರವು ನೀಡೋಣ, ಸ್ನೇಹಿತರು ಎಲ್ಲರೂ ಸಹಾಯ ಮಾಡಿ'' ಎಂದು ಮನವಿ ಮಾಡಿಕೊಂಡಿದ್ದರು.
ಸುದೀಪ್ ಮಾತ್ರವಲ್ಲ, ದರ್ಶನ್, ಗಣೇಶ್, ರಶ್ಮಿಕಾ, ರಚಿತಾ ರಾಮ್, ರಕ್ಷಿತ್ ಶೆಟ್ಟಿ, ಶರಣ್, ಪವನ್ ಒಡೆಯರ್, ಜಗ್ಗೇಶ್, ದುನಿಯಾ ವಿಜಯ್, ಪ್ರಜ್ವಲ್ ದೇವರಾಜ್ ಹೀಗೆ ಅನೇಕರು ಉತ್ತರ ಕರ್ನಾಟಕದ ಜನರಿಗೆ ಸಹಾಯ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ.


Click it and Unblock the Notifications











